ತುಮಕೂರು: ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಗಾಗಿ ದಶಕಗಳಿಂದ ದುಡಿದ ಪೂರ್ಣಿಮಾ ಶ್ರೀನಿವಾಸ್ ಹಾಗೂ ಡಿ.ಟಿ.ಶ್ರೀನಿವಾಸ್, ಸಣ್ಣಮುದ್ದಯ್ಯ ಅವರನ್ನು ಸ್ವಯಂ ಘೋಷಿತ ಕಾಡುಗೊಲ್ಲ ಮುಖಂಡರು ಅವಹೇಳನ ಮಾಡುವುದು ಸರಿಯಲ್ಲ ಎಂದು ಕಾಡುಗೊಲ್ಲ ಯುವಕ ಮಿತ್ರ ಬಳಗದ ಅರುಣ್ ಕೃಷ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಕಾಡುಗೊಲ್ಲ ಸಮುದಾಯ ವಾಸಿಸುವ ಕಾಡುಗೊಲ್ಲರ ಹಟ್ಟಿಗಳನ್ನು ನೋಡದವರು, ಅಭಿವೃದ್ಧಿಗಾಗಿ ಹೋರಾಡದವರು ಚುನಾವಣೆ ಸಂದರ್ಭದಲ್ಲಿ ಮುಖಂಡರಾಗಲೂ, ಹಣಕ್ಕಾಗಿ ಸಮುದಾಯದ ಮುಖಂಡರನ್ನು ಟೀಕಿಸುವ ಮೂಲಕ ಸಮುದಾಯದ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಪ್ರವರ್ಗ-೧ರ ರಾಜ್ಯಾಧ್ಯಕ್ಷರಾಗಿರುವ ಡಿ.ಟಿ.ಶ್ರೀನಿವಾಸ್ ಅವರು ಅಲೆಮಾರಿ ಮತ್ತು ಸಣ್ಣ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಈಗ ಅವರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದು, ಅವರು ಕಾಡುಗೊಲ್ಲರ ಎಸ್ಟಿ ಮೀಸಲಾತಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಆಧಾರ ರಹಿತವಾಗಿ ದೂರುತ್ತಿದ್ದಾರೆ ಎಂದರು.
ಎಲ್ಲ ಸಮುದಾಯಗಳಲ್ಲಿಯೂ ಒಳಪಂಗಡಗಳು ಸಾಮಾನ್ಯವಾಗಿದ್ದು, ಅಭಿವೃದ್ಧಿ ನಿಗಮವನ್ನು ಮಾಡುವಾಗ ಸಮಗ್ರವಾಗಿ ಮಾಡುತ್ತಾರೆ ಅದೇ ರೀತಿ ಗೊಲ್ಲ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಘೋಷಿಸಬೇಕೆಂದು ಮನವಿ ಶಾಸಕಿಯಾಗಿದ್ದ ಪೂರ್ಣೀಮಾ ಶ್ರೀನಿವಾಸ್ ಮಾಡಿದ್ದಾರೆ, ಕಾಡುಗೊಲ್ಲ, ಗೊಲ್ಲ ಎಂದು ಎರಡು ನಿಗಮವನ್ನು ಸರ್ಕಾರ ರಚನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಹಿರಿಯೂರು ಶಾಸಕಿಯಾಗಿ ಪೂರ್ಣಿಮಾ ಶ್ರೀನಿವಾಸ್ ಆಯ್ಕೆಯಾಗಿದ್ದಾಗ ೧೨೦ ಗೊಲ್ಲರಹಟ್ಟಿಗಳ ರಸ್ತೆ ಅಭಿವೃದ್ಧಿಗೆ ೩೦ ಕೋಟಿ, ಹಿರಿಯೂರು ತಾಲ್ಲೂಕು ಒಂದರಲ್ಲಿಯೇ ಅಲೆಮಾರಿ ಯೋಜನೆಯಡಿ ೪೪೪೮ ಮನೆಗಳನ್ನು ಮಂಜೂರು ಮಾಡಿಸಿದ್ದಾರೆ, ರಾಜ್ಯಾದ್ಯಂತ ಇರುವ ನಮ್ಮ ಸಮುದಾಯದವರಿಗೆ ೨೨ ಸಾವಿರ ಮನೆಗಳನ್ನು ಡಿ.ಟಿ.ಶ್ರೀನಿವಾಸ್ ಮಂಜೂರು ಮಾಡಿಸಿದ್ದಾರೆ ಇಂತಹವರನ್ನು ಕಾಡುಗೊಲ್ಲರ ವಿರೋಧಿಗಳು ಎಂದು ಹೇಳುವುದು ಸರಿಯಲ್ಲ ಎಂದರು.
ಹಣಕ್ಕಾಗಿ ಕಾಡುಗೊಲ್ಲ ಮುಖಂಡರ ತೇಜೋವಧೆ: ಅರುಣ್ ಕೃಷ್ಣಯ್ಯ

Leave a comment
Leave a comment