ತುಮಕೂರಿನಲ್ಲಿ ಅಪ್ಪುವಿನ 49 ಹುಟ್ಟು ಹಬ್ಬವನ್ನ ಅಪ್ಪು ಅಭಿಮಾನಿಗಳುನಗರದ ಬಟವಾಡಿ ಸರ್ಕಲ್ ನಲ್ಲಿ ಶುಕ್ರವಾರ ಆಚರಣೆ ಮಾಡಿದರು.ಕೇಕ್ ಕತ್ತರಿಸುವ ಮೂಲಕ ಮಜ್ಜಿಗೆ ಮತ್ತು ಪ್ರಸಾದವನ್ನ ಹಂಚುವ ಮೂಲಕ ಹುಟ್ಟು ಹಬ್ಬವನ್ನ ಆಚರಣೆ ಮಾಡಿದರು.ಇದೇ ಸಂದರ್ಭದಲ್ಲಿ ಜೆಡಿಎಸ್ನ ನಗರ ಕ್ಷೇತ್ರದ ಅಭ್ಯರ್ಥಿ ಗೊವಿಂದರಾಜು ಮಾತನಾಡಿ ಪುನಿತ್ ರಾಜ್ ಕುಮಾರ್ ಅವರು ಇದ್ದಿದ್ದರೆ ಇನ್ನು ಬಹಳ ಕುಷಿಯಾಗುತ್ತಿತ್ತು, 49 ನೇ ಹುಟ್ಟು ಹಬ್ಬವನ್ನ ಬಟವಾಡಿಯ ಎಲ್ಲ ಅಭಿಮಾನಿಗಳು ಒಟ್ಟಾಗಿ ಸೇರಿ ಹುಟ್ಟು ಹಬ್ಬವನ್ನ ಆಚರಣೆ ಮಾಡ್ತಾ ಇದ್ದಾರೆ,ಅವರ ಬಗ್ಗೆ ಹೆಚ್ಚು ಏನು ಹೇಳಬೇಕಾಗಿಲ್ಲ ಅವರು ಎಡಗೈಯಲ್ಲಿ ಕೊಟ್ಟ ದಾನ ಬಲಗೈಗೆ ಗೊತ್ತಾಗುತ್ತಾ ಇರಲಿಲ್ಲ ಕರ್ನಾಟಕದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಅವರ ಸಿನಿಮ ನೋಡ್ತಾ ಇದ್ರು ಅವರು ಇರಬೇಕಾಗಿತ್ತು ಅವರಿದ್ದಿದ್ರೆ ತುಂಬಾನೆ ಖುಷಿ ಆಗ್ತಾ ಇತ್ತು ಅವರ ಐವತ್ತು ವರ್ಷಗಳಿದ್ದಿದ್ರೆ ಇನ್ನು ಖುಷಿಯಾಗಿರೊದು ಆದ್ರೆ ಅವರ ನೆನಪು ಮಾತ್ರ ಉಳಿದಿದೆ ಪ್ರತೀ ವರ್ಷವು ಸಹ ಹುಟ್ಟು ಹಬ್ಬವನ್ನ ಆಚರಣೆ ಮಾಡ್ತೇವೆ ಎಂದು ಮಾತನಾಡಿದರು. ಹಾಗೂ ಭಗತ್ ಕ್ರಾಂತಿ ಸೇನೆಯ ಪ್ರಮುಖರಾದ ಚೇತನ್ ಚೇತನ್ ರವರು ಮಾತನಾಡಿ ಇವತ್ತು ಏನು ಕರುನಾಡಿನ ದೇವರು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ನಮ್ಮಲ್ಲ ಪ್ರೀತಿಯ ಅಪ್ಪು ಅಣ್ಣನವರ ಹುಟ್ಟು ಹಬ್ಬ ಅವರನ್ನ ನಾವೆಲ್ಲರು ಇರುವ ತನಕ ಇನ್ನು ಮುಂದೆ ನಮ್ಮ ಮನುಷ್ಯತ್ವ ಇರುವ ತನಕ ಕರ್ನಾಟಕದ ಜನರು ಅವರನ್ನ ಮರೆಯೊಕೆ ಯಾರಿಂದಲೂ ಸಾಧ್ಯವಿಲ್ಲ ಇವತ್ತು ಹುಟ್ಟು ಹಬ್ಬವನ್ನ ಸುಮ್ಮನೆ ಮಾಡ್ತಾ ಇದಿವಿ ಅವರನ್ನ ಪ್ರತಿ ದಿನ ಅವರನ್ನ ನೆನೆಸಿಕೊಂಡು ಅವರ ಜೀವನದ ಆದರ್ಶಗಳನ್ನ ಅಳವಡಿಸಿಕೊಂಡು ಎಲ್ಲವೂ ಸಹ ಆಗೊದಿಲ್ಲ ಅವರ ಕಾಲಿನ ದೂಳಿನಷ್ಟು ಬದುಕುತ್ತೆವೆ ಎಂದು ಮಾತನಾಡಿದರು.ಕಾರ್ಯಕ್ರಮದಲ್ಲಿ ನರಸಿಂಹಮೂರ್ತಿ, ರುದ್ರೇಶ್ ಕಿರಣ್, ಸುನಿಲ್, ಹೇಮಂತ್ ಹಾಗೂ ತಂಡದಿಂದ ಆಚರಣೆ ಮಾಡಲಾಯಿತು.