ತುಮಕೂರು(ಕ.ವಾ.)ಸೆ.೨೬: ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರು ವಿವಿಧ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ಸಾಗುವಳಿ ವಿಸ್ತೀರ್ಣದಲ್ಲಿ ಯಾಂತ್ರೀಕೃತ ಶಕ್ತಿಯನ್ನು ಹೆಚ್ಚಿಸಲು ರೈತರಿಗೆ ಸಣ್ಣ ಟ್ರಾö್ಯಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ಧತೆ ಉಪಕರಣಗಳು, ಬಿತ್ತನೆ/ನಾಟಿ ಮಾಡುವ ಉಪಕರಣಗಳು, ಸಸ್ಯ ಸಂರಕ್ಷಣಾ ಉಪಕರಣಗಳು, ಕೋಯ್ಲು ಮತ್ತು ಸಂಸ್ಕರಣೆಗೆ ಉಪಯುಕ್ತವಾಗಿರುವ ವಿವಿಧ ಕೃಷಿ ಯಮತ್ರೋಪಕರಣಗಳನ್ನು ಖರೀದಿಸಲು ಸಾಮಾನ್ಯ ವರ್ಗದ ರೈತರಿಗೆ ಶೇ.೫೦ರಷ್ಟು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.೯೦ರಷ್ಟು ಸಹಾಯಧನವನ್ನು ಗರಿಷ್ಟ ಮಿತಿ ಒಂದು ಲಕ್ಷ ರೂ.ಗಳವರೆಗೆ ಹಾಗೂ ಟ್ರಾö್ಯಕ್ಟರ್ಗಳ ಖರೀದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ರೂ. ೩ ಲಕ್ಷಗಳ ಸಹಾಯಧನ ನೀಡಲಾಗುವುದು.
ಮುಖ್ಯ ಮಂತ್ರಿಯ ಸೂಕ್ಷö್ಮ ನೀರಾವರಿ ಯೋಜನೆಯಡಿ ನೀರನ್ನು ಸಮರ್ಥವಾಗಿ ಮತ್ತು ಸಮರ್ಪಕ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಮಿತ ಬಳಕೆಯಿಂದ ಅಧಿಕ ಇಳುವರಿ ಪಡೆಯಲು ಸೂಕ್ಷö್ಮ ನೀರಾವರಿ ಘಟಕಗಳನ್ನು ಎಲ್ಲಾ ವರ್ಗದ ರೈತರಿಗೆ ೨ ಹೆಕ್ಟೇರ್ ಪ್ರದೇಶದವರೆಗೆ ಹಾಗೂ ಪ.ಜಾತಿ ಮತ್ತು ಪ.ಪಂಗಡ ರೈತರಿಗೆ ಅವರು ಹೊಂದಿರುವ ಪ್ರದೇಶಕ್ಕೆ ಶೇ.೯೦ರಷ್ಟು ಹಾಗೂ ೨ ಹೆಕ್ಟೇರ್ಗಿಂತ ಮೇಲ್ಪಟ್ಟು ೫ ಹೆಕ್ಟೇರ್ ಪ್ರದೇಶದವರೆಗೆ ಶೇ.೪೫ರ ಸಹಾಯಧನವನ್ನು ನೀಡಲಾಗುವುದು.
ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
Leave a comment
Leave a comment