ತುಮಕೂರು : ಕೊರಟಗೆರೆ ತಾಲ್ಲೂಕು ಗೆದ್ಮೇನಹಳ್ಳಿ ಗ್ರಾಮಕ್ಕೆ ಕೆಲವೆ ಮೀಟರ್ಗಳ ಅಂತರದಲ್ಲಿ ಇರುವ ಕೋಳಿ ಸಾಕಾಣಿಕೆ ಘಟಕ ವನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದ ಜನರಿಗೆ ,ಜಾನುವಾರಗಳಿಗೆ ರೋಗರುಜಿನಗಳು ಕಾಣಿಸಿಕೊಂಡಿರುವುದ್ದಲದೆ,ಸೊಳ್ಳೆ,ನೊಣಗಳ ಕಾಟ ಜಾಸ್ತಿಯಾಗಿರುತ್ತದೆ.ಕೋಳಿ ಇಕ್ಕೆ ಮತ್ತು ಸತ್ತ ಕೋಳಿಗಳಿಂದ ದುರ್ವಾಸನೆ ಬರುತ್ತಿದ್ದು ಪ್ರಾಣಿಗಳು ಜನರು ವಾಸ ಮಾಡುವುದಕ್ಕೂ ತೊಂದರೆಯಾಗಿರುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಶಿವರಾಜು ರವರ ಪತ್ನಿ ಸುಜಾತ ರವರು ಚಿನ್ನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದಾಗ ಗ್ರಾಮಸ್ಥರುಗಳಿಗೆ ಇಟ್ಟಿಗೆ ಪ್ರಾರಂಭ ಮಾಡುತ್ತೆವೆ ಎಂದು ಸುಳ್ಳು ಹೇಳಿ ಕೋಳಿ ಸಾಕಾಣಿಕೆ ಘಟಕ ಮಾಡಿರುತ್ತಾರೆ.ಹಲವು ಬಾರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ,ತಾಪಂ ಇಓ ರವರಿಗೆ,ತಹಸೀಲ್ದಾರರಿಗೆ ಮನವಿ ನೀಡಿ ಸ್ಥಳಾಂತರಿಸುವಂತೆ ಒತ್ತಾಯ ಮಾಡಿದರು ಏನು ಪ್ರಯೋಜನವಾಗಿಲ್ಲ.ಸರ್ಕಾರದ ನಿಯಮವಳಿಗಳನ್ನು ಗಾಳಿಗೆ ತೂರಿ ಈ ಕೋಳಿ ಸಾಕಾಣಿಕೆ ಘಟಕ ಪ್ರಾರಂಭ ಮಾಡಲಾಗಿದೆ.ಈ ಬಗ್ಗೆ ಊರಿನ ಜನ ಶಿವರಾಜು ರನ್ನು ಪ್ರಶ್ನೆ ಮಾಡಿದರೆ ಜಾತಿ ನಿಂದನೆ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾನೆ.ಆದ್ದರಿಂದ ಸ್ಥಳ ಪರಿಶೀಲನೆ ನಡೆಸಿ ,ವಾಸ್ತವಾಂಶಗಳನ್ನು ತಿಳಿದು ಕೋಳಿ ಸಾಕಾಣಿಕೆ ಘಟಕವನ್ನು ಮುಚ್ಚಿಸಿ ಇಲ್ಲವೇ ಸ್ಥಳಾಂತರ ಮಾಡಿಸಿ ಎಂದು ರೈತ ಸಂಘದ ಮುಖಂಡರಾದ ಜೆ ಸಿ ಶಂಕರಪ್ಪ,ಸಿ ಯತಿರಾಜು,ಬಿ ಉಮೇಶ್,ಅರುಣ್,ಜವಾಹರ್,ಪುಟ್ಟಸ್ವಾಮಿ,ವೆಂಕಟೇಗೌಡ,ರಂಗಹನುಮಯ್ಯ,ಶಬ್ಬಿರ್ ಪಾಷ,ಪುಟಸ್ವಾಮಿ,ಶಂಕರಯ್ಯ
ಒತ್ತಾಯಿಸಿದ್ದಾರೆ.