ಜಿಲ್ಲಾ ಅಂಬೇಡ್ಕರ್ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ.
ತುಮಕೂರು : ತುಮಕೂರು ನಗರ ಸೇರಿದಂತೆ ವಿವಿಧೆಡೆ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಅಂಗಡಿ ಮುಗ್ಗಟ್ಟು ನಡೆಸಲು ಜಿಲ್ಲಾಡಳಿತ ಪರವಾನಗಿ ನೀಡಬಾರದು ಎಂದು ಅಂಬೇಡ್ಕರ್ ಸೇನೆ ವತಿಯಿಂದ ನಾಳೆ ಮನವಿ ಸಲಿಸವಾಗುವುದೆಂದು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕೆ ಸುಮ ತಿಳಿಸಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಪಟಾಕಿಯಿಂದ ಹಲವು ಅವಘಡಗಳು ನಡೆಯುತ್ತಿವೆ.ಪಟಾಕಿ ಅಂಗಡಿ ಯವರು ಹಸಿರು ಪಟಾಕಿ ಮಾರಾಟ ಮಾಡುತ್ತೇವೆ ಎಂದು ನೈಜಾ ಪಟಾಕಿಗಳನೇ ಮಾರಾಟ ಮಾಡಿ ಸರ್ಕಾರವನ್ನು ವಂಚಿಸುತ್ತಾರೆ.ಪಟಾಕಿ ಮಾರಾಟಗಾರರಿಗೆ ನಿರ್ದಿಷ್ಟ ನಿಯಮವಾಳಿಗಳನ್ನು ರೂಪಿಸಿ ಪರವಾನಗಿ ನೀಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಮಹಾಜನ ಪರಿವಾರ ಸಮಿತಿ ರಾಜ್ಯಾಧ್ಯಕ್ಷ ಅಂಚೇಹಳ್ಳಿ ರಾಮಸ್ವಾಮಿ ಮಾತನಾಡಿ ಬೆಂಗಳೂರಿನ ಅನೇಕಲ್,ಹೊಸೂರು ಭಾಗಗಳಲ್ಲಿ ಪಟಾಕಿ ಅವಘಡಗಳಿಂದ ಬಹಳಷ್ಟು ಜನ ಪ್ರಾಣಕಳೆದುಕೊಂಡಿದ್ದಾರೆ.ಪಟಾಕಿ ಅಂಗಡಿ ಪರವಾನಗಿ ನೀಡುವಾಗ ಜಿಲ್ಲಾಡಳಿತ ಕಠಿಣ ನಿಯಮಗಳನ್ನು ರೂಪಿಸಬೇಕು,ಹಸಿರು ಪಟಾಕಿ ಮಳಿಗೆಗಳಿಗೆ ಮಾತ್ರ ಪರವಾನಗಿ ನೀಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸಲಾಯಿತು.ಜಿಲ್ಲಾ ಉಪಾಧ್ಯಕ್ಷೆ ಲಕ್ಷ್ಮಮ್ಮ, ತಾಲ್ಲೂಕು ಅಧ್ಯಕ್ಷೆ ಟಿ .ಯು ನೇತ್ರಾವತಿ, ದಲಿತ ಮುಖಂಡರಾದ ರಾಜಶೇಖರ್,ಲೀಲಾಮಣಿ,ಲಕ್ಷ್ಮೀ ಎಲ್ ಎಸ್ ಮತ್ತಿತರರು ಹಾಜರಿದ್ದರು.
ಜಿಲ್ಲಾ ಅಂಬೇಡ್ಕರ್ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

Leave a comment
Leave a comment