ಸಮಾಜಸೇವೆ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ, ದೂರದೃಷ್ಟಿಯುಳ್ಳ ಪ್ರಖ್ಯಾತ ನೇತ್ರ ತಜ್ಞರಾದ ಡಾ. ಕೆ. ಭುಜಂಗ ಶೆಟ್ಟಿಯವರು ಸ್ಥಾಪಿಸಿದ ಕನಸಿನ ಯೋಜನೆಯಾದ ನಾರಾಯಣ ನೇತ್ರಾಲಯ, ಐ ಫೌಂಡೇಶನ್ ಅಶ್ರಯದಲ್ಲಿ ತುಮಕೂರಿನ ಹೊರವಲಯದ ರಿಂಗ್ ರಸ್ತೆಯ ಗೋಕುಲ ಬಡಾವಣೆಯಲ್ಲಿ “ನಾರಾಯಣ ದೇವಾಲಯ”ವನ್ನು ಪ್ರಾರಂಭಿಸಿ ಒಂದು ವರ್ಷಕಳೆದ ಹಿನ್ನಲೆ, ನಾರಾಯಣ ದೇವಾಲಯ ತನ್ನ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದೆ. ಅಂಧತ್ವ ಮುಕ್ತ ಸಮಾಜವನ್ನು ನಿರ್ಮಿಸುವ ಗುರಿಯಿಂದ ದೃಷ್ಟಿ ನಾರಾಯಣ ಆಸ್ಪತ್ರೆಯನ್ನು ನೋ ಕ್ಯಾಷ್ ಕೌಂಟರ್ ಮಾದರಿಯಲ್ಲಿ ನಾರಾಯಣ ದೇವಾಲಯವಾಗಿ ತುಮಕೂರಿನಲ್ಲಿ ಸ್ಥಾಪನೆ ಮಾಡಲಾಗಿದೆ. ಅಗತ್ಯವಿರುವವರಿಗೆ ಭರವಸೆಯ ಬೆಳಕಾಗಿ ನಾರಾಯಣ ನೇತ್ರಾಲಯವು ಸಮಾಜಕ್ಕೆ ಮರಳಿ ನೀಡುವ ಭಾದ್ಯತೆಯನ್ನು ಪ್ರತಿಬಿಂಬಿಸುತ್ತದೆ ಭಾರತದಲ್ಲಿ ಕುರುಡುತನಕ್ಕೆ ಕಣ್ಣಿನ ಪೊರೆ ಪ್ರಮುಖ ಕಾರಣವಾಗಿದೆ. ಮತ್ತು ಸಮಾಜದಿಂದ ಅಂಧತ್ವವನ್ನು ತೊಡೆದು ಹಾಕುವುದು ನಾರಾಯಣ ದೇವಾಲಯದ ಮುಖ್ಯ ಗುರಿಯಾಗಿದೆ. ಶ್ರೀ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪ್ರಾರಂಭವಾದ ನಾರಾಯಣ ದೇವಾಲಯವು ತನ್ನ ಮೊದಲ ವಾರ್ಷಿಕೋತ್ಸವವನ್ನು ಸ್ಮರಿಸುತ್ತಿರುವಾಗ, ಕಳೆದ ವರ್ಷದಲ್ಲಿ, ಆಸ್ಪತ್ರೆಯು ಸುಮಾರು 1900 ಕ್ಕೂ ಹೆಚ್ಚು ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ಮಾಡಿದದ್ದು ಮತ್ತು ಕಣ್ಣಿನ ಸಂಬAಧಿತ ಸಮಸ್ಯೆಗಳಿಗಾಗಿ 228 ಮಕ್ಕಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ ತನ್ನ ಸಮಾಜ ಸೇವಾ ಕಾರ್ಯವನ್ನು ಮುಂದುವರಿಸಿದೆ. ಖಾಸಗಿ ಆಸ್ಪತ್ರೆಗಳಿಗೆ ಸಮಾನವಾಗಿ ಮೂರು ಅಲ್ಟಾ-ಆಧುನಿಕ ಆಪರೇಷನ್ ಥಿಯೇಟರ್ಗಳನ್ನು ಹೊಂದಿರುವ ನಾರಾಯಣ ದೇವಾಲಯವು ಕಣ್ಣಿನ ಪೊರೆಗಾಗಿ ಇಂಟ್ರಾಕ್ಯುಲರ್ ಲೆನ್ಸ್ ಗಳೊಂದಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ತಂತ್ರಗಳನ್ನು ನೀಡುತ್ತದೆ. ಅನುಭವವುಳ್ಳ ಮತ್ತು ನುರಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಕರು ಈ ಶಸ್ತ್ರಚಿಕಿತ್ಸೆಗಳನ್ನು ಮುನ್ನಡೆಸುತ್ತಾರೆ.