ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರವು ಮಂಗಳವಾರ ಆಯೋಜಿಸಿದ್ದ ‘ಅಣ್ಣಾ, ನಾನು ಹೆಂಗೂಸಲ್ಲ’ ಅಕ್ಕಮಹಾದೇವಿ ವಚನಗಳ ಒಂದು ವಿಶ್ಲೇಷಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ನನ್ನ ದೇಹವಷ್ಟೇ ಹೆಂಗಸಿನದು, ಅನುಭವದ ವ್ಯಾಪ್ತಿ ಗಂಡನ್ನು ಮೀರಿಸುವಂತದ್ದು ಎಂದು ಬಾಳಿದವರು ಅಕ್ಕಮಹಾದೇವಿ. ಸಬಲೀಕರಣದ ದಾರಿಯಲ್ಲಿ ಮಹಿಳೆಯನ್ನು ನೋಡಬಯಸುವವರು ತನ್ನ ಉದಾಹರಣೆಯನ್ನು ಪಡೆಯಬಹುದು ಎಂಬ ವಿಶ್ವಾಸದ ಬದುಕು ನಡೆಸಿದವರು ಅಕ್ಕಮಹಾದೇವಿ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿವಿ ಪ್ರಭಾರ ಕುಲಪತಿ ಪ್ರೊ. ಹೆಚ್. ಕೆ. ಶಿವಲಿಂಗಸ್ವಾಮಿ, ಭಕ್ತಿಯ ಅಭಿವ್ಯಕ್ತಿಯನ್ನು ೧೨ನೇ ಶತಮಾನದಲ್ಲಿ ಯಾವ ರೀತಿ ಅಭಿವ್ಯಕ್ತಪಡಿಸಿದ್ದಾರೆ ಎನ್ನವುದನ್ನು ಅಕ್ಕಮಹಾದೇವಿ ಅವರ ವಚನಗಳಲ್ಲಿ ನಾವು ಕಾಣಬಹುದು ಎಂದರು.ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಆಂಗ್ಲ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ. ಎನ್. ಎಸ್. ಗುಂಡೂರ್ ಭಾಗವಹಿಸಿದ್ದರು. ತುಮಕೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಆಶಾರಾಣಿ ಕೆ. ಬಗ್ಗನಡು ನಿರೂಪಿಸಿದರು.