ಕಲ್ಬುರ್ಗಿ ನಗರದಲ್ಲಿಂದು ಗೋಂಡ ಪರ್ಯಾಯ ಪದ ಕುರುಬ ಆಗಿದ್ದು ಪರಿಶಿಷ್ಟ ಪಂಗಡ ಎಸ್ ಟಿ ಮೀಸಲಾತಿಗೆ ಕುರುಬರನ್ನು ಪರಿಗಣಿಸುವಂತೆ ಆಗ್ರಹಿಸಿ ಕಾಗಿನೆಲೆ ಮಹಾ ಸಂಸ್ಥಾನದ ಕಣಗನೂರು ಪೀಠದ ಸಿದ್ದರಾಮಾನಂದ ಸ್ವಾಮಿಜಿ ಹಾಗೂ ಕಾಗಿನೆಲೆ ತಿಂಥಣಿ ಗುರುಪೀಠದ ಲಿಂಗಬೀರ ದೇವ ಶರಣರ ನೇತೃತ್ವದಲ್ಲಿ ಕುರುಬ ಸಮುದಾಯದ ಮುಖಂಡರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಗತ ವೃತ್ತದಿಂದ ಹೊರಟ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ವರಿಗೆ ತಲುಪಿತು.
ಕುರುಬ ಸಮುದಾಯವನ್ನು ಗೊಂಡ ಪದಕ್ಕೆ ಸಮಾನ ಪದವಾಗಿ ಪರಿಗಣಿಸುವಂತೆ ಕೋರಿ 1996 ಮತ್ತು 1997 ರಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವಕಳಿಸಲಾಗಿತ್ತು. 2014ರಲ್ಲಿ ಕುಲಶಾಸ್ತ್ರ ಅಧ್ಯಯನದ ವರದಿಯನ್ನು ಸಹ ಕಳ್ಸಿತ್ತು ಎಂದು ಪ್ರತಿಭಟನೆಕಾರರು ಹೇಳಿದರು.
ಕಲ್ಬುರ್ಗಿ ಯಾದಗಿರಿ ಮತ್ತು ಬೀದರ್ ಜಿಲ್ಲೆಗಳ ಗೊಂಡ ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಆಶ್ವಾಸನೆ ಕೊಟ್ಟ ಜನ ಪ್ರತಿನಿಧಿಗಳು ಇಲ್ಲಿವರೆಗೂ ಈಡೇರಿಸಿಲ್ಲ.

ದೆಹಲಿಗೆ ತೆರಳಿ ಕೇಂದ್ರ ಸಚಿವರು ಸಂಸದರು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ಅಗತ್ಯವಾದ ಮಾಹಿತಿ ನೀಡಲಾಗಿದೆ ಆದರೂ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದರು.
ತದನಂತರ ಪ್ರದೇಶ ಕುರುಬ ಸಂಘದ ಜಿಲ್ಲಾಧ್ಯಕ್ಷ ಗುರುನಾಥ್ ಪೂಜಾರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಚಿಂಚೋಳಿ, ಬೀದರ್ ,ಬಸವಕಲ್ಯಾಣದ ವಿಧಾನಸಭಾ ಉಪಚುನಾವಣೆ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳ ಪ್ರಚಾರದ ವೇಳೆ ಬಿಜೆಪಿಯ ವರಿಷ್ಠರು ಕುರುಬ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸುವ ಭರವಸೆ ನೀಡಿದ್ದರು.
ಇದೇ ರೀತಿ ಮುಂದುವರೆದರೆ ಬರ್ತಕಂತ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಈ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕು ಎಂದರು.
ತದನಂತರ ಗೊಂಡ ಕುರುಬ ಎಸ್ ಟಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಹಾಂತೇಶ್ ಕೌಲಗಿ ಮಾತನಾಡಿ ಸಂವಿಧಾನದಲ್ಲಿ ಕುರುಬರನ್ನು ಎಸ್ ಟಿ ಪಂಗಡಕ್ಕೆ ಸೇರಿಸಿದ್ದರು ಆದರೆ ಇಂದಿನ ಕೇಂದ್ರ ಸರ್ಕಾರ ಗೊಂಡ ಕುರುಬ ಪದವನ್ನು ಕುರುಬರ ಸಮಾನಾಂತರ ಎಂದು ಹೇಳುತ್ತಿಲ್ಲ ಕುರುಬ ಸಮುದಾಯಕ್ಕೆ ಕೇಂದ್ರ ಸರಕಾರ ನ್ಯಾಯ ಒದಗಿಸದೆ ಇದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಲಕ್ಷ್ಮಣ್ ಎಸ್ ಪೂಜಾರಿ, ಭಗವಂತರಾಯ ಪಾಟೀಲ್, ಧ
ಧರ್ಮರಾಜ್ ಹೇರೂರು, ರವಿಗೊಂಡ್ ಕಟ್ಟಿಮನಿ ,ಅಂಬರಾಯ ಪೂಜಾರಿ, ವಿಜಯಲಕ್ಷ್ಮಿ ಮುಗುಳಿ, ಗಣಪತಿ ಮಿಣಜಿಗಿ , ,ಬರಗಾಲೆ, ನಿಂಗಣ್ಣ ಪೂಜಾರಿ ಸೇರಿದಂತೆ ಸಮುದಾಯದ ಜನ ಉಪಸ್ಥಿತರಿದ್ದರು.