ಇಂದುರಾಜ್ಯಾದ್ಯAತ ಸ್ಲಂ ನಿವಾಸಿಗಳಿಗೆ ವಿಧಾನ ಸಭಾಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನುಈಡೇರಿಸಲು ನೆನಪಿಸಿ ಮುಖ್ಯಮಂತ್ರಿಗಳಿಗೆ ಬಹಿರಂಗ ಮನವಿ ಸಲ್ಲಿಕೆಯ ಭಾಗವಾಗಿತುಮಕೂರುಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಎದುರು ಪ್ರತಿಭಟನೆ ಮಾಡಿ ಬಹಿರಂಗ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಲಾಯಿತು.
ಸ್ಲಂಜನರಿಗೆಕೊಟ್ಟ ಮಾತಿನಂತೆ ನಮ್ಮ ಹಕ್ಕೋತ್ತಾಯಗಳನ್ನು ಈಡೇರಿಸಿ ಎ.ನರಸಿಂಹಮೂರ್ತಿ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂಜನಾAದೋಲನ ಕರ್ನಾಟಕರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ರಾಜ್ಯದಲ್ಲಿ ಹೊಸ ಭರವಸೆಯೊಂದಿಗೆಅಧಿಕಾರಕ್ಕೆ ಬಂದಿರುವಕಾAಗ್ರೆಸ್ ಪಕ್ಷದತಮ್ಮ ನೇತೃತ್ವದ ಸರ್ಕಾರ ೧೦೦ ದಿನಗಳನ್ನು ಪೂರೈಸಿರುವುದು ಸಂತಸತAದಿದೆ. ಹಾಗೂ ಚುನಾವಣಾ ಪೂರ್ವದಲ್ಲಿ ನೀಡಿದ ೫ ಗ್ಯಾರೆಂಟಿಗಳನ್ನು ಈಡೇರಿಸುವ ಮೂಲಕ ಎಲ್ಲಾ ಬಡವರಿಗೆ, ಸ್ತಿçÃಯರಿಗೆ, ಅಶಕ್ತ ಸಮುದಾಯಗಳಿಗೆ ರಾಜ್ಯದ ಸಂಪನ್ಮೂಲದಲ್ಲಿ ಹಂಚಿಕೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡುತ್ತಿರುವುದಕ್ಕೆರಾಜ್ಯ ಸರ್ಕಾರಕ್ಕೆಅಭಿನಂದನೆ ಸಲ್ಲಿಸುತ್ತೇವೆ. ಚುನಾವಣಾ ಪೂರ್ವದಲ್ಲಿರಾಜ್ಯದಲ್ಲಿರುವ ಸ್ಲಂ ನಿವಾಸಿಗಳಿಗೆ ಕಾಂಗ್ರೆಸ್ ಪಕ್ಷದ“ಸರ್ವಜನಾಂಗದ ಶಾಂತಿಯತೋಟದಲ್ಲಿ” ನೀಡಿರುವ ಭರವಸೆಯನ್ನುಈಡೇರಿಸಬೇಕೆಂದು ನೆನಪಿಸಿ ರಾಜ್ಯಾದ್ಯಂತ ಸರ್ಕಾರಕ್ಕೆ ಬಹಿರಂಗ ಪತ್ರವನ್ನು ಸ್ಲಂಜನಾAದೋಲನ ಕರ್ನಾಟಕ ಮತ್ತು ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆ ಸಲ್ಲಿಸುತ್ತಿದ್ದುಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂದು ಒತ್ತಾಯಿಸಿದರು .
ಕರ್ನಾಟಕ ಪ್ರದೇಶಕಾಂಗ್ರೆಸ್ ಸಮಿತಿ ವಿಧಾನ ಸಭಾಚುನಾವಣಾ ಪ್ರಣಾಳಿಕೆ ೨೦೨೩ “ಸರ್ವಜನಾಂಗದ ಶಾಂತಿಯತೋಟ” ಇದುವೇ ನಿಮ್ಮ ಬದ್ಧತೆಯಲ್ಲಿ ನೀಡಿದ ೫ ಗ್ಯಾರೆಂಟಿಗಳಾದ ಗೃಹ ಜ್ಯೋತಿ, ಗೃಹಲಕ್ಷಿö್ಮಅನ್ನಭಾಗ್ಯ, ಶಕ್ತಿ ಮತ್ತುಯುವನಿಧಿ ಭರವಸೆಯನ್ನುಈಡೇರಿಸಲು ಬಜೆಟ್ನಲ್ಲಿ ಹಣಮೀಸಲಿರಿಸಿ ಅನುಷ್ಟಾನಗೊಳಿಸಲು ಮುಂದಾಗಿರುವುದು ಸರಿ. ಆದರೆ ಈ ಯೋಜನೆಗಳನ್ನು ಪಡೆದುಕೊಳ್ಳಲ್ಲು ಸರ್ಕಾರಇನ್ನೂ ಸರಳೀಕರಿಸಿ ವೇಗವಾಗಿ ಕಾರ್ಯಗತಗೊಳಿಸಬೇಕು. ಹಾಗೂ ನಗರಾಭಿವೃದ್ಧಿಇಲಾಖೆಯಅಡಿಯಲ್ಲಿ ಸ್ಲಂ ಪ್ರದೇಶಗಳಿಗೆ ಶ್ರಮಿಕ ನಿವಾಸ ಪ್ರದೇಶಎನ್ನುವ ನಾಮಕರಣ ಮಾಡಿ ವಸತಿಯೋಜನೆ ಹಾಗೂ ಹಕ್ಕುಪತ್ರ ವಿತರಣೆ ಮಾಡುವ ಭರವಸೆ ನೀಡಲಾಗಿದೆ. ಹಾಗಾಗಿ ಇತರೆ ರಾಜ್ಯಗಳಲ್ಲಿರುವಂತೆ ನಗರಾಭಿವೃದ್ಧಿ ಭಾಗವಾಗಿರುವ ಕೊಳಚೆ ಪ್ರದೇಶಗಳ ಸರ್ವತೋಮುಖಅಭಿವೃದ್ಧಿಗೆಪ್ರತ್ಯೇಕ ಸಚಿವರು ಮತ್ತುಇಲಾಖೆಯನ್ನುರಚಿಸಬೇಕು ಮತ್ತು “ವಸತಿತಲೆ” ಬರಹದಲ್ಲಿಕುಟುಂಬಕ್ಕೊAದು ಮನೆ ನೀಡುವ ಭರವಸೆ ನೀಡಿದ್ದುರಾಜ್ಯದಎಲ್ಲಾ ವಸತಿರಹಿತ ಕುಟುಂಬಗಳಿಗೆ ೫ ವರ್ಷದಲ್ಲಿಚಾಲ್ತಿಯಲ್ಲಿರುವಯೋಜನೆ ಮೂಲಕ ಸರ್ಕಾರಿ ವಸತಿ ಸೌಲಭ್ಯ ಹಾಗೂ ಬಡವರಿಗಾಗಿ ನಿರ್ಮಿಸುವ ವಸತಿ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದರೂ ೩.೫ ಲಕ್ಷ ಸಬ್ಸಿಡಿ ನೀಡುವ ಭರವಸೆಈಡೇರಿಸಲು ಸರ್ಕಾರ ಮುಂದಾಗಬೇಕು,
ಪ್ರಸ್ತುತ ವಸತಿರಹಿತ ಕುಟುಂಬಗಳ ಸಮೀಕ್ಷೆಯನ್ನು ಮಾಡಿ“ನಗರ ಲ್ಯಾಂಡ್ ಬ್ಯಾಂಕ್”ಯೋಜನೆಯನ್ನು ಜಾರಿಗೊಳಿಸಿ ಮನೆ ಇಲ್ಲದಕುಟುಂಬಕ್ಕೊAದು ಮನೆÀ ನೀಡಲುರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿ ಸರ್ಕಾರವೇ ಮನೆ ನಿರ್ಮಿಸಿಕೊಡಬೇಕು. ಹಾಗೆಯೇ ಬಡವರಿಗೆ ನಿರ್ಮಿಸುವ ಮನೆಗಳನ್ನು ಗುತ್ತಿಗೆದಾರರಿಗೆಅಥವಾ ಬಿಲ್ಡರ್ಸ್ಗಳಿಗೆ ನೀಡದೇಜನರೇತಮ್ಮ ಮನೆ ನಿರ್ಮಿಸಿಕೊಳ್ಳಲು ನೇರವಾಗಿ ೩.೫ ಲಕ್ಷರಾಜ್ಯ ಸರ್ಕಾರದ ಸಬ್ಸಿಡಿ ಮತ್ತುಕೇಂದ್ರದ ೧.೫ ಲಕ್ಷ ಸಬ್ಸಿಡಿಯನ್ನುಎಲ್ಲಾ ಬಡವರಿಗೂ ನೀಡಬೇಕು.
ಪ್ರತಿಭಟನೆಯ ನೇತೃತ್ವವನ್ನು ಶಂಕ್ರಯ್ಯ, ಕಣ್ಣನ್, ಶಾರದಮ್ಮ, ಗುಲ್ನಾಜ್.ಗಂಗಮ್ಮ, ಕೃಷ್ಣಮೂರ್ತಿ, ತಿರುಮಲಯ್ಯ, ಜಾಬೀರ್ಖಾನ್, ಶಾಬುದ್ದಿನ್, ಲತಾ, ಗೋವಿಂದ್ರಾಜ್, ವೆಂಕಟೇಶ್, ಧನಂಜಯ್, ಚಕ್ರಪಾಣೀ, ಮುರುಗನ್, ಕಾತಿರಾಜ್, ಮಾಧವನ್, ರಾಜ, ಮೋಹನ್ಟಿ.ಆರ್ ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ, ಸುಧಾ, ಪೂರ್ಣಿಮ, ಮುಭಾರಕ್, ಹನುಮಕ್ಕ, ಲಕ್ಷö್ಮಮ್ಮ, ಮಹಾದೇವಮ್ಮ, ಜಗದೀಶ್, ವಹಿಸಿದ್ದರು, ನೂರಾರುಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು