ತುಮಕೂರು: ಯುರೋಪ್ ಮತ್ತು ಅಮೆರಿಕ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಯುವಕರು ಎಲ್ಲಾ ರಂಗದಲ್ಲಿಯೂ ಉತ್ಸುಕತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಈ ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು ಎಂದು ರಾಜ್ಯ ಸರ್ಕಾರಿ ಉಗ್ರಾಣ ಮತ್ತು ತರಬೇತಿ ಕೇಂದ್ರದ ಶೈಕ್ಷಣಿಕ ಮತ್ತು ಹಣಕಾಸು ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಮೆಕ್ಯಾನಿಕಲ್ ವಿಭಾಗದ ಹಳೆಯ ವಿದ್ಯಾರ್ಥಿ ಹೆಚ್. ಗೋವಿಂದ ವತ್ಸಾ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಮಾಗಮ-2023 ‘ಸೇತುಬಂಧ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬೇರೆ ದೇಶದ ಉತ್ಪನ್ನಗಳನ್ನು ಹೆಚ್ಚಾಗಿ ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದವು. ಆದರೆ ತಾಂತ್ರಿಕತೆ ಮತ್ತು ಆಧುನಿಕತೆಯ ಸಮರ್ಪಕ ಬಳಕೆಯಿಂದಾಗಿ ದೇಶದಲ್ಲಿ ಈಗ ರಫ್ತಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.
ಸಮಾರಂಭದ ಮತ್ತೋರ್ವ ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಂಗಳೂರಿನ ಇಸ್ರೋ ವಿಜ್ಞಾನಿಯಾದ ಸಿ.ಕೆ.ಗೌರಿಶಂಕರ್, ಹೆಳೆಯ ವಿದ್ಯಾರ್ಥಿಗಳ ಸಮ್ಮಿಲನವು ಎರಡನೇ ಹಂತದ ಪೀಳಿಗೆಗೆ ನಿದರ್ಶನ ಹಾಗೂ ಮಾರ್ಗದರ್ಶನವಾಗಿದೆ ಎಂದರು.
ಕ್ರಿಯಾತ್ಮವಾಗಿ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಇಸ್ರೋದಲ್ಲಿ ವಿಫುಲವಾದ ಅವಕಾಶಗಳಿಗೆ ಎಂದು ಅವರು ಹೇಳಿದರು.
ಹಳೇ ಬೇರು ಹೊಸ ಚಿಗುರಿನಂತೆ ಹಳೆಯ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದು ಪ್ರಾಂಶುಪಾಲರಾದ ಡಾ. ಎಂ ಎಸ್.ರವಿ.ಪ್ರಕಾಶ್ ಅವರು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಹೆ ರಿಜಿಸ್ಟರ್ ಡಾ.ಎಂ ಜೆಡ್ ಕುರಿಯನ್, ಡೀನ್ ಡಾ. ಎಸ್ ರೇಣುಕಾಲತ, ಅಲುಮಿನಿ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಕೋಮಲ ಕೆ, ಉಪಾಧ್ಯಕ್ಷರಾದ ಡಾ. ಬಿ ಎಸ್ ರವಿಕಿರಣ್, ಖಜಾಂಚಿ ಎಂ. ಪ್ರದೀಪ್ ಮುಂತಾದವರು ಹಾಜರಿದ್ದರು.
ನಗÀದು ಬಹುಮಾನ:
ಪ್ರಸಕ್ತ 2022-23 ನೇ ಸಾಲಿನಲ್ಲಿ ಅಗ್ರಶೇಯಾಂಕಿತರಾದ ಮೆಕಾನಿಕಲ್ ವಿಭಾಗದ ಸಂಜಯ್ ಬಂಗೇಶ್ವರ ಹಗ್ಗಡೆ ಮತ್ತು ಅಖಿಬ್ ಖಾನ್ ಅವರಿಗೆ 1979-84 ನೇ ಸಾಲಿನ ಪ್ರಾಯೋಜಿತ ನಗದು ಪುರಸ್ಕಾರ ನೀಡಲಾಯಿತು.
ಸಿದ್ದಾರ್ಥ ಇಂಜಿನಿಯರಿOಗ್ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಮಾಗಮ ‘ಸೇತುಬಂಧ’:
Leave a comment
Leave a comment