ತುಮಕೂರು:ತುಮಕೂರು ಲೋಕಸಭಾ ಕ್ಷೇತ್ರದಿಂದ ೨೦೨೪ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು,ಈ ಸಂಬAದ ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರುಗಳು ಹಾಗು ಮುಖಂಡರು ಗಳಿಗೆ ಪತ್ರ ಬರೆಯಲಾಗಿದೆ ಎಂದು ಟೂಡಾ ಮಾಜಿ ಅಧ್ಯಕ್ಷ ಆಡಿಟರ್ ಸುಲ್ತಾನ್ ಮೊಹಮದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,೧೯೫೧ ರಿಂದ ಇದುವರೆಗೂ ಪಾರ್ಲಿಮೆಂಟ್ಗೆ ಆಕಾಂಕ್ಷಿಗಳಿದ್ದರೂ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಿಲ್ಲ.ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಅಲ್ಪ ಸಂಖ್ಯಾAತರಿಗೆ ಅವಕಾಶ ಕಲ್ಪಿಸಬೇಕೆಂಬುದು ಮುಸ್ಲಿಂ ಸಮುದಾಯದ ಒತ್ತಾಯವಾಗಿದೆ ಎಂದರು.
ನಾನು ಮೂಲತಃ ಕಾಂಗ್ರೆಸ್ ಪಕ್ಷದವ, ೧೯೭೩ ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು,ಕಾಂಗ್ರೆಸ್ ನ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷನಾಗಿ ಕಾರ್ಯನಿರ್ಹಿಸಿದ್ದೆನೆ.ಎಸ್.ಷಪಿ ಅಹಮದ್ ಅವರಿಗೆ ಟಿಕೇಟ್ ನೀಡಿದ್ದರಿಂದ ಬೇಸರಗೊಂಡು ನಾನು,ಕೆ.ಎನ್.ರಾಜಣ್ಣ,ರೆಡ್ಡಿಚಿನ್ನಯಲ್ಲಪ್ಪ ಜೆಡಿಎಸ್ಗೆ ಸೇಪರ್ಡೆಯಾದವು.ಕೆ.ಎನ್.ಆರ್. ಜೆಡಿಎಸ್.ನಿಂದ ಶಾಸಕರು ಆದರು, ನಾನು ಟೂಡಾ ಅಧ್ಯಕ್ಷನಾಗಿ ಸಹ ಕೆಲಸ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಗಿಂತ ಮುಂಚೆ ಜೆಡಿಎಸ್ ತೊರೆದು ಪುನಃ ಕಾಂಗ್ರೆಸ್ ಗೆ ಬಂದಿದ್ದೇನೆ.ಸುಮಾರು ೭೦ ವರ್ಷಗಳ ನಂತರ ಮುಸ್ಲಿಂ ರು ಎಂ.ಪಿ ಟಿಕೇಟ್ ಕೇಳುತ್ತಿದ್ದು,ಈ ಸಂಬAದ ಎಐಸಿಸಿ ಮುಖಂಡರಾದ ರಾಹುಲ್ ಗಾಂಧಿ, ಸೋನಿಯಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರಾದ ಡಿಕೆಶಿ, ಜಿಲ್ಲಾ ಉಸ್ತುವಾರಿ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ಆರ್. ಅವರಿಗೆ ಆಗಸ್ಟ್ ೧೦ ರಂದೇ ಪತ್ರ ಬರೆಯಲಾಗಿದೆ. ಮಾಧ್ಯಮದ ಮೂಲಕವೂ ಮನವಿ ಮಾಡಲಾಗತ್ತಿದೆ ಎಂದು ಸುಲ್ತಾನ್ ಮೊಹಮದ್ ತಿಳಿಸಿದರು.
ಕಳೆದ ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಶೇ ೮೮ ರಷ್ಟು ಮುಸ್ಲಿಂರು ಮತ ನೀಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆ ಮತ ನೀಡಲಿದ್ದಾರೆ.ಹಾಗಾಗಿ ಅಲ್ಪಸಂಖ್ಯಾತರ ಈ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷ ಪರಿಗಣಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮುತ್ತುವಲ್ಲಿಗಳ ಸಂಘದ ಅಧ್ಯಕ್ಷರಾದ ನೂರುಲ್ಲಾ ಸಾಬ್.ಮುಖಂಡರಾದ ಪ್ಯಾರೇಜಾನ್, ಬಾಬು, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು
ಪಾರ್ಲಿಮೆಂಟ್ಗೆ ಆಕಾಂಕ್ಷಿಗಳಿದ್ದರೂ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಿಲ್ಲ
Leave a comment
Leave a comment