ತುಮಕೂರು- ಹಿಂದುಳಿದ ವರ್ಗಗಳು ಅರ್ಥಿಕ, ಶೈಕ್ಷಣಿಕ ಪ್ರಗತಿಯ ಜತೆಗೆ ರಾಜಕೀಯ ಅಧಿಕಾರ ಹಿಡಿಯುವತ್ತಲೂ ಗಮನಹರಿಸಬೇಕಾಗಿದೆ ಎಂದು ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಹೇಳಿದರು.ನಗರದ ಗಾರ್ಡನ್ ರಸ್ತೆಯಲ್ಲಿರುವ ಸವಿತಾ ಸಮಾಜದ ಸವಿತಾ ಭವನದಲ್ಲಿ ತುಮಕೂರು ಜಿಲ್ಲಾ ಸವಿತಾ ಸಮಾಜ(ರಿ), ತುಮಕೂರು ಜಿಲ್ಲಾ ಸವಿತಾ ಸಮಾಜ ಯುವಪಡೆ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಸವಿತಾ ಸಮಾಜಕ್ಕೆ ರಾಜಕೀಯವಾಗಿ ಯಾವುದೇ ಸ್ಥಾನಮಾನ ನೀಡಿಲ್ಲ. ಹಾಗಾಗಿ ಮುಂಬರುವ ನಿಗಮ ಮಂಡಳಿ, ಇಲ್ಲವೇ ತುಮಕೂರು ನಗರಾಭಿವೃದ್ದಿ ಪ್ರಾಧಿಕಾರ, ಎಪಿಎಂಸಿ ಅಧ್ಯಕ್ಷ ಸ್ಥಾನಗಳನ್ನು ಸವಿತಾ ಸಮಾಜದ ಬಂಧುಗಳಿಗೆ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸಿ.ಎನ್.ಭಾಸ್ಕರಪ್ಪ ನಂತರ, ಹಿಂದುಳಿದ ವರ್ಗಕ್ಕೆ ಸೇರಿದ ಸ್ಪೂರ್ತಿ ಚಿದಾನಂದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರು ಎಲ್ಲಾ ಸಮಾಜವನ್ನು ಜೊತೆಗೆ ತೆಗೆದುಕೊಂಡು ಹೋಗುವ ಗುಣ ಹೊಂದಿದ್ದಾರೆ. ಅಂತಹವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವು ಸಾಧಿಸಿದರೆ, ಇಡೀ ಹಿಂದುಳಿದ ವರ್ಗವೇ ಗೆದ್ದಂತಾಗುತ್ತದೆ.ಅಲ್ಲದೆ ಅವರ ಜೊತೆಗೆ ಹಿಂದುಳಿದ ವರ್ಗಗಳ ಮುಂಚೂಣಿ ನಾಯಕರು ರಾಜಕೀಯವಾಗಿ ಬೆಳೆಯಲು ಅವಕಾಶ ದೊರೆಯಲಿದೆ ಎಂದರು.ಸ್ಫೂರ್ತಿ ಚಿದಾನಂದ್ ಮಾತನಾಡಿ, ಎಲ್ಲಾ ಸಮುದಾಯಗಳು ತಮ್ಮ ಯುವಜನರಿಗೆ ನಾಯಕತ್ವದ ಗುಣಗಳನ್ನು ಬೆಳೆಸುವ ಅಗತ್ಯವಿದೆ. ನಾಯಕತ್ವದ ಗುಣಗಳನ್ನು ಯುವಕರಲ್ಲಿ ಬೆಳೆಸುವ ಮೂಲಕ ಹಿಂದುಳಿದ ಸಮುದಾಯಗಳು ತಮ್ಮಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಬಹುದು ಎಂದರು.ನಾಯಕತ್ವ ಗುಣವನ್ನು ಹೊಂದಿರುವ ವ್ಯಕ್ತಿ ತನ್ನ ಬದುಕಿನಲ್ಲಿ,ಇಲ್ಲವೇ ಸಾರ್ವಜನಿಕ ಜೀವನದಲ್ಲಿ ಎಂತಹದ್ದೇ ಸಮಸ್ಯೆ ಬಂದರೂ ಎದೆಗುಂದದೆ,ತಾಳ್ಮೆಯಿAದ, ಆತ್ಮಸ್ಥೆöÊರ್ಯ ಹೊಂದಿರುತ್ತಾನೆ.ನಾವು ಎಲ್ಲಾ ರೀತಿಯಿಂದಲೂ ಸಶಕ್ತರಿದ್ದರೂ, ನಾಯಕತ್ವದ ಗುಣವಿಲ್ಲದಿದ್ದರೆ,ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದೆ ಉಳಿಯುವ ಸಾಧ್ಯತೆ ಹೆಚ್ಚು. ಈ ನಿಟ್ಟಿನಲ್ಲಿ ಸವಿತಾ ಸಮಾಜ ಯುವ ಪಡೆ ಇಂದು ಆಯೋಜಿಸಿರುವ ನಾಯಕತ್ವ ತರಬೇತಿ ಶಿಬಿರ ಅತ್ಯಂತ ಹೆಚ್ಚು ಅರ್ಥಗರ್ಭೀತ ಮತ್ತು ಸಾಂಧರ್ಭಿಕ ಎಂದು ಸ್ಪೂರ್ತಿ ಚಿದಾನಂದ್ ಪ್ರಶಂಶಿಸಿದರು.