ಶಿಕ್ಷಣದ ಜೊತೆಗೆ ಶಾಲೆಯಲ್ಲಿ ಮಕ್ಕಳಿಗೆ ಮೌಲ್ಯಯುತವಾದ ನೈತಿಕತೆಯ ಪಾಠವನ್ನು ಕಲಿಸಬೇಕು : ರಮೇಶ್ ಬಿ ಉಮರಾಣಿ
ತುಮಕೂರು ಏಪ್ರಿಲ್:- ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಶಿಕ್ಷಣ ಅಂದಿನ ಗುರುಕುಲದಿಂದ ಇಂದಿನ ಕಂಪ್ಯೂಟರ್ ಶಿಕ್ಷಣದವರೆಗಿನ ಶಿಕ್ಷಣದ ಮೊದಲುಗಳು ಅನೇಕವಾಗಿವೆ ಪ್ರತಿಯೊಬ್ಬ ಮನುಷ್ಯನು ಶಿಕ್ಷಣದ ಅರಿವಿಗಾಗಿ ಇನ್ನಿಲ್ಲದ ಶತ ಪ್ರಯತ್ನಗಳನ್ನ ಮಾಡುತ್ತಲೇ ಇರುತ್ತಾನೆ ಹೀಗಾಗಿ ಪ್ರತಿ ಕುಟುಂಬದ ಮಗುವಿಗೆ ಉನ್ನತವಾದ ಶಿಕ್ಷಣ ದೊರೆತು ಸದೃಢ ಸಮಾಜದ ನಿರ್ಮಾಣಕ್ಕೆ ಸಾಕ್ಷಿಯಾಗಲಿ ಒಂದು ಮಗುವಿನ ತಂದೆ ತಾಯಂದಿರ ಆಸೆ ಕನಸಾಗಿರುತ್ತದೆ ಹಿನ್ನೆಲೆಯಲ್ಲಿ ಇಂದಿನ ಶಿಕ್ಷಣದ ಕಲಿಕೆಯ ಜೊತೆಗೆ ಮೌಲ್ಯಯುತವಾದ ನೈತಿಕತೆಯ ಶಿಕ್ಷಣವು ಕೂಡ ಅವಶ್ಯಕವಾಗಿದ್ದು ಈ ನೈತಿಕತೆಯ ಶಿಕ್ಷಣವನ್ನು ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಹಾಗೂ ಪೋಷಕರು ಮತ್ತು ಶಿಕ್ಷಕರು ಅಳವಡಿಸಿಕೊಳ್ಳುವಲ್ಲಿ ಅವರ ಪಾತ್ರ ಮುಖ್ಯವಾಗಿದೆ ಎಂದು ಶಿಕ್ಷಣ ತಜ್ಞ ರಮೇಶ್ ಬಿ ಉಮರಾಣಿ ಅವರು ತಿಳಿಸಿದ್ದಾರೆ.
ತುಮಕೂರು ನಗರ ವಲಯದ ಬೆಳಗುಂಬದಲ್ಲಿರುವ ಶ್ರೀ ರಾಜರಾಜೇಶ್ವರಿ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಶಿಕ್ಷಕರು ಮತ್ತು ಪೋಷಕರ ಮಾಹಿತಿ ವಿನಿಮಯ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ರಮೇಶ್ ಬಿ ಉಮರಾಣಿಯವರು ಮಾತನಾಡಿದರು.
ಶಿಕ್ಷಣದ ಜೊತೆಗೆ ಮಕ್ಕಳಿಗೆ ಮೌಲ್ಯಯುತವಾದ ನೈತಿಕತೆಯ ಪಾಠವನ್ನು ಕಲಿಸಬೇಕು

Leave a comment
Leave a comment