ಈ ವರ್ಷ ಒಂದೇ ವಾರದಲ್ಲಿ 1,200 ಕೋಟಿ ರೂಪಾಯಿ ಗಳಿಸಿ ವರ್ಷದ ಅತ್ಯಧಿಕ ಸಂಪಾದನೆ ಮಾಡಿದ ಚಿತ್ರ ಎಂಬ ಗಳಿಕೆ ಪುಷ್ಪ 2 ಚಿತ್ರದ ನಾಯಕ ಅಲ್ಲು ಅರ್ಜುನ್ ಅವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ನಟ ಅಲ್ಲು ಅರ್ಜುನ್ ಅವರನ್ನು ಚೀಕಟಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ‘ಪುಷ್ಪ 2’ ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ನಿಧನ ಹೊಂದಿದ್ದರು. ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆ ಕುರಿತಂತೆ ನಟ ಅಲ್ಲು ಅರ್ಜುನ್ ಹಾಗೂ ಇನ್ನೂ ಇತರರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ನಟ ಅಲ್ಲು ಅರ್ಜುನ್ ಹಾಗೂ ಅವರ ಬಾಡಿಗಾರ್ಡ್ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲು ಅರ್ಜುನ್ ಅವರ ಬಂಗಲೆಯ ಬೆಡ್ ರೂಮ್ ನಲ್ಲಿಯೇ ಅವರ ಬಂಧನ ಆಗಿದೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಅವರಿಗೆ ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ನಾಯಕಿಯಾಗಿದ್ದರು. ಪುಷ್ಪ 2 ಚಿತ್ರದ ಖಳ ನಾಯಕ ಪಾತ್ರಧಾರಿ ಕೊಡಗಿನ ತಾರಕ್ ಪೊನ್ನಪ್ಪ ಪ್ರತಿಕ್ರಿಯಿಸಿ. ಘಟನೆಯಲ್ಲಿ ಅಲ್ಲು ಅರ್ಜುನ್ ಪಾತ್ರ ಇರುವುದಿಲ್ಲ. ಆದರೂ ಕೂಡ ಇವರನ್ನು ಬಂಧಿಸಿದ್ದು ಬೇಸರದ ಸಂಗತಿ .ಸತ್ಯ ಏನೆಂದು ಸದ್ಯದಲ್ಲೇ ಬೆಳಕಿಗೆ ಬರುತ್ತದೆ ಈ ರೀತಿ ಘಟನೆ ಆಗಬಾರದಿತ್ತು ಎಂದು ಹೇಳಿದ್ದಾರೆ.ನಾಳೆ ಎರಡನೇ ಶನಿವಾರದ ರಜೆ, ಭಾನುವಾರ ರಜೆ ಇರುವುದರಿಂದ ಕೋರ್ಟ್ ಶೀಘ್ರ ವಿಚಾರಣೆಗೆ ಒಪ್ಪದೆ ಇದ್ದಲ್ಲಿ ಎರಡು ದಿನಗಳ ವರೆಗೂ ಪುಷ್ಪ ಜೈಲು ಪಾಲಾಗುವ ಸಾಧ್ಯತೆ