ಕಳೆದ ನಲವತ್ತು ವರ್ಷಗಳಿಂದ ದಲಿತರು ಬಗರ್ಹುಕ್ಕಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಸರಕಾರಿ ಜಮೀನನ್ನು,ಅನುಭವದಲ್ಲಿ ಇರುವ ಕುಟುಂಬಗಳಿಗೆ ಮಾಹಿತಿ ನೀಡದೆ,ಏಕಾಎಕಿ ಜಮೀನನಲ್ಲಿದ್ದ ಮರಗಳನ್ನು ಕಡಿದು,ಗ್ರಾಮದ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿರುವ ತಿಮ್ಮರಾಜನಹಳ್ಳಿ ಗ್ರಾ.ಪಂ.ಕ್ರಮವನ್ನು ಖಂಡಿಸಿ, ದಲಿತ ಸಂಘರ್ಷ ಸಮಿತಿಯ ಪಿ.ಎನ್.ರಾಮಯ್ಯ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪಿ.ಎನ್.ರಾಮಯ್ಯ,ತುಮಕೂರು ತಾಲೂಕು ತಿಮ್ಮರಾಜನಹಳ್ಳಿ ಸರ್ವೆ ನಂಬರ್ ೩೦ರಲ್ಲಿ ಒಟ್ಟು ೧೩.೧೨ ಎಕರೆ ಜಮೀನು ಇದ್ದು,ಇದರಲ್ಲಿ ದಲಿತ ಸಮುದಾಯಕ್ಕೆ ಸೇರಿದ ಬೊಮ್ಮನಹಳ್ಳಿಯ ಸಿದ್ದಗಂಗಮ್ಮ ಕೋಂ ನರಸಿಂಹಮೂರ್ತಿ ಎಂಬುವವರ ಕುಟುಂಬ ೧.೨೦ ಎಕರೆ ಭೂಮಿಯನ್ನು ಕಳೆದ ೩೦-೪೦ ವರ್ಷಗಳಿಂದ ಬಗರ್ ಹುಕ್ಕಂ ಸಾಗುವಳಿ ಮಾಡುತ್ತಾ ಬಂದಿದ್ದು,ಭೂ ಮಂಜೂರಾತಿಗಾಗಿ ಫಾರಂ ನಂ೫೦,೫೩ ಮತ್ತು ೫೭ ಸಲ್ಲಿಸಿ,ಸಾಗುವಳಿ ಚೀಟಿಗಾಗಿ ಕಾಯುತಿದೆ.ಇಂತಹ ಹೊತ್ತಿನಲ್ಲಿ ತಿಮ್ಮರಾಜನಹಳ್ಳಿ ಗ್ರಾಮಪಂಚಾಯಿತಿಯವರು,ಸದರಿ ಸರ್ವನಂನಲ್ಲಿ ಹೆಚ್ಚುವರಿ ಜಮೀನು ಇದ್ದರೂ, ದಲಿತರು ಸ್ವಾಧೀನದಲ್ಲಿದ್ದ ಭೂಮಿಯಲ್ಲಿ ೧೦ ಗುಂಟೆ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕೆಂದು ಮಂಜೂರು ಮಾಡಿ,ಭೂಮಿಯಲ್ಲಿ ಬೆಳೆದಿದ್ದ ಹತ್ತಾರು ವರ್ಷಗಳ ನೀಲಿಗಿರಿ ಮರಗಳನ್ನು ರಾತ್ರೋರಾತಿ ಕಡಿದು ಸಾಗಿಸಿ,ಟ್ರಂಚ್ ಹೊಡೆದು ದಲಿತ ಕುಟುಂಬವನ್ನು ಒಕ್ಕಲೆಬ್ಬಿಸಲು ಹೊರಟಿದೆ.ದಲಿತ ಕುಟುಂಬಕ್ಕೆ ಬೇರೆ ಜಮೀನು ಇಲ್ಲ.ಹಾಗಾಗಿ ಅಕ್ರಮವಾಗಿ ದಲಿತ ಕುಟುಂಬವನ್ನು ಖಾಲಿ ಮಾಡಿಸಲು ಹೊರಟಿರುವ ಗ್ರಾಮಪಂಚಾಯಿತಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸುಮಾರು ನಲವತ್ತು ವರ್ಷಗಳಿಂದ ಸಿದ್ದಗಂಗಮ್ಮ ಕೋಂ ನರಸಿಂಹಮೂರ್ತಿ ಅವರ ಕುಟುಂಬ ಇದೇ ಜಮೀನನ್ನು ನಂಬಿ ಬದುಕುತ್ತಿದ್ದೆ.ಯಾವುದೇ ಮಾಹಿತಿ ನೀಡದೆ ದಲಿತರು ಉಳುಮೆ ಮಾಡುತಿದ್ದ ಜಮೀನನಲ್ಲಿದ್ದ ಸುಮಾರು ೩-೪ ಲಕ್ಷ ಬೆಲೆ ಬಾಳುವ ನೀಲಿಗಿರಿ ಮರಗಳನ್ನು ಕಡಿದು ಸಾಗಿಸಲಾಗಿದೆ.ಸದರಿ ಜಮೀನಿನಲ್ಲಿ ಮನೆ ನಿರ್ಮಾಣಕ್ಕೂ ಅವಕಾಶ ಕಲ್ಪಿಸಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡದೆ ನಿರಂತರ ಕಿರುಕುಳ ನೀಡುತಿದ್ದಾರೆ.ಹಾಗಾಗಿ ಹೆಣ್ಣು ಮಕ್ಕಳೇ ಇರುವ ಸಿದ್ದಗಂಗಮ್ಮ ಕೋಂ ನರಸಿಂಹಮೂರ್ತಿ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ,ಭೂಮಿಯಲ್ಲಿದ್ದ ಮರ ಕಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪಿ.ಎನ್.ರಾಮಯ್ಯ ಆಗ್ರಹಿಸಿದರು.
ಈ ಸಂಬAಧ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಖ್ಯಸ್ಥರಾದ ಮೋಹನ್ಕುಮಾರ್ ನೀಡಿದರು.ಈ ವೇಳೆ ಹಬ್ಬತ್ತನಹಳ್ಳಿ ಶ್ರೀನಿವಾಸ್,ಲಕ್ಷö್ಮಮ್ಮ,ಗೌರಮ್ಮ,ಸಲ್ಮಾ,ಯೂಸೂಫ್, ಸುರೇಶ್, ನರಸಿಂಹಮೂರ್ತಿ ಮತ್ತಿತರರು ಭಾಗಹಿಸಿದ್ದರು.