ತುಮಕೂರಿನ ಕಾಮಗಾರಿ, ಹರ್ಬನ್ ಡೆವಲಪ್ಮೆಂಟ್ ಬಗ್ಗೆ ಅಧಿಕಾರಿಗಳ ಜೊತೆ ಇವತ್ತು ಸಭೆ ಕರೆಯಲಾಗಿತ್ತು.
ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ.
ಯೋಜನೆಯ ಉದ್ದೇಶ ಆಧುನಿಕವಾಗಿ ಪಟ್ಟಣಗಳಿಗೆ ಸೌಲಭ್ಯ ದೊರಕಬೇಕು ಅನ್ನೋದು.
ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರಿಗೆ 1 ಸಾವಿರ ಕೋಟಿ ಮಂಜೂರು ಮಾಡಿದೆ.
ಕೇಂದ್ರ ಸರ್ಕಾರ 50% ರಾಜ್ಯ ಸರ್ಕಾರ 50% ಹಣವನ್ನ ಬಿಡುಗಡೆ ಮಾಡಿದೆ.
ಈಗಾಗಲೇ ಕೇಂದ್ರ ಸರ್ಕಾರದಿಂದ 45% ಹಣ ಬಿಡುಗಡೆ ಆಗಿದೆ.
ರಾಜ್ಯ ಸರ್ಕಾರ 443 ಕೋಟಿ ಮಂಜೂರು ಮಾಡಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ 170 ಕಾಮಗಾರಿಗಳನ್ನ ತಗೊಂಡಿದ್ದಾರೆ.
ತುಮಕೂರಿಗೆ ರಿಂಗ್ ರೋಡ್, ರಸ್ತೆ ಅಭಿವೃದ್ಧಿ ಕಾಮಗಾರಿ, ದೀಪಗಳ ಅಳವಡಿಕೆ, ಡ್ರೈನೇಜ್ ಅಳವಡಿಕೆ.
ಬಸ್ ಸ್ಟಾಂಡ್ ಅಳವಡಿಕೆ, ಸಾರ್ವಜನಿಕ ಗ್ರಂಥಾಲಯವನ್ನ ಆಧುನಿಕವಾದ ಕಟ್ಟಲಾಗಿದೆ.
ಮಕ್ಕಳಿಗೆ ಕ್ರೀಡೆಗೆ ಮಹತ್ವ ಕೊಡಲು ಮಹಾತ್ಮ ಗಾಂಧಿ ಕ್ರೀಡಾಂಗಣವನ್ನ ಆಧುನಿಕರಣ ಗೊಳಿಸಲಾಗಿದೆ.
ಸ್ಮಾರ್ಟ್ ಸಿಟಿ ಅಂದ್ರೆ ಕೇವಲ ರಸ್ತೆ ಚೆನ್ನಾಗಿರುತ್ತೆ ಅಂತ ಅಲ್ಲ,
ಆಧುನಿಕರಣವಾಗಿ ಎಲ್ಲಾ ಸೌಲಭ್ಯಗಳು ಸಿಗ್ಬೇಕು.
ಪ್ರೀ ವೈಫೈ ಸಿಗ್ಬೇಕು, ಉತ್ತಮ ಪರಿಸರಕ್ಕೆ ಗಿಡಗಳು ಇರ್ಬೇಕು,
ಇನ್ನು ಕೆಲವು ಕಾಮಗಾರಿ ನಡಿತಿದೆ ಈಗಾಗಲೇ 90% ಕೆಲಸ ಮುಗಿದಿದೆ.
ಇದೇ ನವೆಂಬರ್ ಒಳಗೆ ಎಲ್ಲಾ ಕಾಮಗಾರಿ ಮುಗಿಸಬೇಕು ಅಂತ ನಾನು ಹೇಳಿದ್ದೇನೆ.
ತುಮಕೂರಿನಲ್ಲಿ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ.