ತುಮಕೂರು: ಇಲ್ಲಿನ ಅಗಳಕೋಟೆಯ ಸಾಹೇ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಪುರುಷರ ನೆಟ್ಬಾಲ್ ಚಾಂಪಿಯನ್ಶಿಪ್ – 2024 ಪಂದ್ಯಾವಳಿಯ 2ನೇ ದಿನವಾದ ಇಂದು ನಡೆದ ಶಹೀದ್ ನಂದಕುಮಾರ್ ಪಟೇಲ್ ವಿಶ್ವವಿದ್ಯಾಲಯ (SಓP Uಗಿ) ಹಾಗೂ ಗೊಂಡ್ವಾನ ವಿಶ್ವವಿದ್ಯಾಲಯ (ಉ Uಗಿ) ನಡುವಿನ ಹಣಾಹಣಿಯು ಎಲ್ಲರ ಗಮನ ಸೆಳೆದು ಮೂಗಿನ ಮೇಲೆ ಬೆರಳಿಟ್ಟು ಕೂಡುವಂತೆ ಮಾಡಿತು.
3ನೇ ಸುತ್ತು ಮುಗಿದಾಗ ಎರಡು ತಂಡಗಳು 23 ಪಾಯಿಂಟ್ಗಳ ಸಮಬಲದಲ್ಲಿದ್ದವು. ನಂತರ ಕೊನೆಯ ಸುತ್ತು ಮುಗಿಯುವವರೆಗೂ ಗೆಲುವು ಯಾರಿಗೆ ಎಂಬ ಕುತೂಹಲವನ್ನ ಉಳಿಸಿದ ಈ ಪಂದ್ಯವು ಕೊನೆಯಲ್ಲಿ 32 – 31 ಪಾಯಿಂಟ್ ಗಳ ಅಂತರದಲ್ಲಿ ಶಹೀದ್ ನಂದಕುಮಾರ್ ಪಟೇಲ್ ವಿಶ್ವವಿದ್ಯಾಲಯವು 1 ಪಾಯಿಂಟ್ ನಿಂದ ಜಯವನ್ನು ದಾಖಲಿಸಿ ಪ್ರೀ ಕ್ವಾರ್ಟರ್ ಫೈನಲ್ನತ್ತ ತನ್ನ ಪಯಣ ಮುಂದುವರೆಸಿದೆ.
ಹಾಗೆ ಮತ್ತೊಂದು ಪಂದ್ಯದಲ್ಲಿ ತುಮಕೂರು ವಿಶ್ವವಿದ್ಯಾಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯ ನಡುವಿನ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾಲಯ ತಂಡವು ಗೆಲುವು ಸಾಧಿಸಿ ಪಂದ್ಯಾವಳಿಯಲ್ಲಿ ತನ್ನ ಇರುವಿಕೆಯನ್ನು ಖಚಿತಪಡಿಸಿಕೊಂಡಿತು.
ಇoದು ಬೆಳ್ಳಿಗ್ಗೆಯಿಂದ ಭೋಜನ ವಿರಾಮದವರೆಗೆ ಒಟ್ಟು 11 ನಾಕ್ ಔಟ್ ಪಂದ್ಯಗಳು ನಡೆದವು.
ಮೊದಲನೇ ದಿನ ಭೋಜನಾ ನಂತರ 14 ಪಂದ್ಯಗಳು ನಡೆದಿದ್ದು ಒಟ್ಟು 48 ಪಂದ್ಯಗಳು ಮೊದಲನೇ ದಿನದ ಅಂತ್ಯಕ್ಕೆ ನಡೆದವು. ಇದರಲ್ಲಿ 13 ಪಂದ್ಯಗಳ 26 ತಂಡಗಳ ಪೈಕಿ 13 ತಂಡಗಳು ಆಗಮಿಸಿದ್ದು ಎದುರಾಳಿ ತಂಡ ಇಲ್ಲದೆ ‘ವಾಕ್ ಓವರ್’ ಮೂಲಕ ಜಯ ಪಡೆದವು.
ಈ ಪಂದ್ಯಾವಳಿಯಲ್ಲಿ ಒಟ್ಟು 57 ತಂಡಗಳು ಭಾಗವಹಿಸಿದ್ದು ಅದರಲ್ಲಿ ಕರ್ನಾಟಕದ 12 ತಂಡಗಳು ಭಾಗವಹಿಸಿವೆ. ಇದರಲ್ಲಿ ನಾಕ್ ಔಟ್ ಹಂತದ ನಂತರ ನೇರ ಕ್ವಾರ್ಟರ್ಗೆ ಪ್ರವೇಶ ಪಡೆದಿರುವ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯ ಸೇರಿ ನಾಕ್ ಔಟ್ ನಲ್ಲಿ ಜಯ ದಾಖಲಿಸಿದ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯ ಸೇರಿ ಒಟ್ಟು ಕರ್ನಾಟಕದ ಆರು (6) ತಂಡಗಳು ತಮ್ಮ ಗೆಲುವಿನ ಯಾತ್ರೆಯನ್ನ ಮುಂದುವರೆಸಿದೆ.
ಬೆಳಗ್ಗಿನಿoದ ಉತ್ತಮ ಕುತೂಹಲಕರ ಪಂದ್ಯಗಳಿಗೆ ಸಾಕ್ಷಿಯಾದ ಕ್ರೀಡಾಂಗಣವು ಭೋಜನ ವಿರಾಮಕ್ಕೆ ಎಲ್ಲಾ ನಾಕ್ ಔಟ್ ಪಂದ್ಯಗಳನ್ನು ಮುಗಿಸಿದ್ದು ಮಧ್ಯಾಹ್ನ 4 ಗಂಟೆಯಿoದ ಮುಂದಿನ ಹಣಾಹಣಿ ಪ್ರೀ ಕ್ವಾರ್ಟರ್ ಫೈನಲ್ಸ್ ಪ್ರಾರಂಭವಾಗಲಿದ್ದು ಎಲ್ಲಾ ಅರ್ಹ ತಂಡಗಳು ತಮ್ಮ ಚಾಕಚಕ್ಯತೆಯ ಆಟದಿಂದ ಗೆಲುವು ದಾಖಲಿಸಿ ಮುಂದಿನ ಹಂತಕ್ಕೆ ಜಿಗಿಯಲು ಕಾತರದಿಂದ ಕಾಯುತ್ತಿವೆ.
ಅಖಿಲ ಭಾರತ ಪುರುಷರ ನೆಟ್ಬಾಲ್ ಚಾಂಪಿಯನ್ಶಿಪ್ – 2024

Leave a comment
Leave a comment