ತುಮಕೂರು : ದಲಿತರನ್ನು ಕೀಳಾಗಿ ಕಂಡು ತುಚ್ಚವಾಗಿ ಮಾತನಾಡಿ ಇಡೀ ದೇಶದ ದಲಿತರ ಕೆಂಗಣ್ಣಿಗೆ ಗುರಿ : ನಟ ಉಪೇಂದ್ರನನ್ನು ಬಂಧಿಸಿ ಗಡಿಪಾರು ಮಾಡಿ ಎಂದು ಅಂಬೇಡ್ಕರ್ ಸೇನೆ ಆಗ್ರಹಿಸಿತು.
ಇಂದು ತುಮಕೂರಿನ ನಗರದ ಟೌನ್ ಹಾಲ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಅಂಬೇಡ್ಕರ್ ಸೇನೆ ವತಿಯಿಂದ ಮೆರವಣಿಗೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಅಂಬೇಡ್ಕರ್ ಸೇನೆ ಸಂಘದ ಅಧ್ಯಕ್ಷ ಕೆಂಪರಾಜು ರವರು ಮಾತನಾಡುತ್ತಾ ನಟ ಉಪೇಂದ್ರ ಒಬ್ಬ ದಲಿತ ವಿರೋಧಿ ಅವಹೇಳನಕಾರಿಯಾಗಿ ಮಾತನಾಡಿ ದಲಿತರನ್ನು ಕೀಳಾಗಿ ಕಂಡಿದ್ದು ನಮಗೆ ಮಾತ್ರವಲ್ಲ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಕೀಳಾಗಿ ಕಂಡAತೆ ಸಂವಿಧಾನ ಶಿಲ್ಪಿಯವರು. ಇಡೀ ದೇಶದ ಸಮಾನತೆಗೆ ಮೂಲ ಕಾರಣ ಇವರು. ಅಂತಹ ಮಹಾನುಭಾವರ ದೇಶದಲ್ಲಿ ಇಂತಹ ನೀಚ ಮನೋಭಾವದ ಜನರು ಅವರನ್ನೇ ಕೀಳಾಗಿ ಕಾಣುವರು. ನಮ್ಮ ದೇಶದಲ್ಲಿ ಸ್ವಾತಂತ್ಯ್ರ ಬಂದು ೭೬ ವರ್ಷಗಳೇ ಕಳೆದರು ಮೇಲು ಕೀಳು ಮನೋಭಾವ ಮಾನವೀಯತೆ ಬದಲಾಗಲಿಲ್ಲ. ಸಾಮಾಜಿಕ ಅರಿವಿಲ್ಲದೆ ವ್ಯಕ್ತಿತ್ವ ಬೆಳೆಯಲಿಲ್ಲ. ಜಾತಿ ನಿಂದನೆ ನಿಲ್ಲಲಿಲ್ಲ. ನಟ ಉಪೇಂದ್ರ ಒಂದು ಪ್ರಾದೇಶಿಕ ಪಕ್ಷ ಕಟ್ಟಿಕೊಂಡು ರಾಜ್ಯಭಾರ ಮಾಡಲು ಹೊರಟಿರುವ ಈ ವ್ಯಕ್ತಿ ಇಂತಹ ಮನಸ್ಥಿತಿ ಹೊಂದಿರುವ ಇವರು ಯಾವ ದೇಶ ಉದ್ದಾರ ಮಾಡಬಹುದು ಎಂಬ ಶಂಖ್ಯೆ ನಮಗೆಲ್ಲ ಮೂಡುತ್ತದೆ.
ಅಂಬೇಡ್ಕರ್ ಸೇನೆ ಮಹಿಳಾ ಜಿಲ್ಲಾಧ್ಯಕ್ಷರಾದ ಸುಮ ರವರು ಮಾತನಾಡುತ್ತಾ ಸಾಮಾನ್ಯ ಜನರ ಮೇಲೆ ತೋರುವ ಕಾನೂನಿನ ದರ್ಪ ಉಪೇಂದ್ರನ ಮೇಲೆ ಏಕೆ ಪಾಲಿಸುತ್ತಿಲ್ಲ ಎಂಬ ಪ್ರಶ್ನೆಯನ್ನು ಸರ್ಕಾರಕ್ಕೆ ಕೇಳುವಮೂಲಕ ಒಬ್ಬ ಕೀಳುಮನೋಭಾವದ ನಟ ಇವರಿಗೆ ಭಾರತ ರತ್ನ ಬಿ ಆರ್. ಅಂಬೇಡ್ಕರ್ ಜನಾಂಗ ಎಂದರೆ ಏಕೆ ಭೇದ. ಭಾವದಿಂದ ಕಾಣುತ್ತಾರೆ. ಅದರಲ್ಲೂ ಮಹಿಳೆಯರನ್ನು ಕಂಡರೆ ಅವರಿಗೆ ಏಕೆ ಅಸಡ್ಡೆ. ಉಪೇಂದ್ರನ ಮೇಲೆ ಪ್ರಕರಣ ದಾಖಲಿಸದೆ ಇರುವುದು ಏಕೆ … ? ಎಂಬುದು ಶೋಚನೀಯ ಎಂದರು.
ಜಿಲ್ಲಾಧಿಕಾರಿ ಕಛೇರಿ ಮುಂದೆ ಜಮಾಯಿಸಿ ಸಂಘಟನೆಯು ಉಪೇಂದ್ರನ ವಿರುದ್ದ ಘೋಷಣೆ ಕೂಗಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರ ಹಾಗೂ ಪೋಲಿಸ್ ಇಲಾಖೆಗೆ ಉಪೇಂದ್ರನನ್ನು ಬಂಧಿಸಿ ಗಡಿಪಾರು ಮಾಡಲು ಒತ್ತಾಯಿಸಲಾಗಿದೆ.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲೆಯ ಉಸ್ತುವಾರಿಗಳು ಹಾಗೂ ರಾಜ್ಯದ ಗೃಹ ಸಚಿವರು ಜಿಲ್ಲೆ ಯ ಕೆಲವು ಅಭಿವೃದ್ಧಿ ಕಾರ್ಯಗಳ ಸಭೆ ನಡೆಸುತ್ತಿದ್ದರು.
ಸಂಘದ ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇನೆ ಅಧ್ಯಕ್ಷರಾದ ಕೆಂಪರಾಜು. ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುಮ. ಲಕ್ಷಿದೇವಮ್ಮ ಹೆಚ್ ಕೆ. ಗಿರಿಜಮ್ಮ. ನೇತ್ರಾವತಿ ಟಿ ವಿ. ಭಾಗ್ಯ ಆರ್. ಮಹಾಲಕ್ಷ್ಮಿ ಕೆ ವಿ. ಮತ್ತಿತರರು ಭಾಗವಹಿಸಿದ್ದರು.
ಇಡೀ ದೇಶದ ದಲಿತರ ಕೆಂಗಣ್ಣಿಗೆ ಗುರಿ : ನಟ ಉಪೇಂದ್ರ
Leave a comment
Leave a comment