ತುಮಕೂರು: ಕೊರಟಗೆರೆ ತಾಲ್ಲೂಕಿನ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ರವರು ಇಂದು ಕ್ಷೇತ್ರದ ೬ ಹೋಬಳಿಗಳಲ್ಲಿ ಮಿಂಚಿನ ಸಂಚಾರ ನಡೆಸಿ, ಮತಚಯಾಚನೆ ಮಾಡುತ್ತಿದ್ದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಹುಮ್ಮಸ್ಸು ತಂದರು.
ಇದಕ್ಕೆ ಹಂಬು ನೀಡುವಂತೆ ಕೊರಟಗೆರೆ ಪಟ್ಟಣದಲ್ಲಿ ಚಿತ್ರನಟ-ನಿರ್ದೇಸಕ ಎಸ್.ನಾರಾಯಣ ಅವರು ಪರಮೇಶ್ವರ ಪರ ಮತಪ್ರಚಾರ ನಡೆಸಿದರು. ಪಟ್ಟಣದ ವಿವಿಧ ವಾರ್ಡ್ಗಳಲ್ಲಿ, ಸಂಚರಿಸಿದ ಅವರು, ಪ್ರಗತಿಗಾಗಿ ಮತ್ತೊಮ್ಮೆ ಪರಮೇಶ್ವರ ಅವರಿಗೆ ಮತ ನೀಡಿ. ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ತರಲು ಅವರು ಅಗತ್ಯತೆ ಎಂದು ನಾರಾಯಣ್ ಅವರು ಮತದಾರರಿಗೆ ಮನವರಿಕೆ ಮಾಡಿಕೊಟ್ಟರು.
ಡಾ.ಜಿ.ಪರಮೇಶ್ವರ ರಾಜ್ಯ ಕಂಡAತಹ ಸಜ್ಜನ ರಾಜಕಾರಣಿಗಳು, ತಮ್ಮದೇ ಆದ ರಾಜಕೀಯ ಉತ್ತಮ ಚಾರಿತ್ರೆಯನ್ನು ಹೊಂದಿದವರು ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರಾದ ಅವರ ಗುಣಕ್ಕೆ ಮನಸೋತು ಸ್ವಯಂ ಇಚ್ಚೆಯಿಂದ ಅವರ ಪರ ಪ್ರಚಾರ ಮಾಡಲು ಬಂದಿದ್ದೇನೆ ಎಂದು ಕನ್ನಡ ಚಲನಚಿತ್ರದ ಹೆಸರಾಂತ ನಿದೇರ್ಶಕ, ನಿರ್ಮಾಪಕ ನಟರಾದ ಎಸ್.ನಾರಾಯಣ್ ತಿಳಿಸಿದರು