ಗಾರ್ಡನ್ ರಸ್ತೆಯ ಸ್ಮಶಾನದ ಮುಂಭಾಗ ಶ್ರೀರಂಗಪಟ್ಟಣ ಮುಖ್ಯ ರಸ್ತೆಗೆ ಹೊಂದಿಕೊoಡಿರುವ ದೊಡ್ಡ ಚರಂಡಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಅವರು ಚಿಕ್ಕಪೇಟೆ ಶ್ರೀರಂಗಪಟ್ಟಣ ರಸ್ತೆಯ ನೊಂದ ರೈತ-ನಾಗರಿಕ ಹೋರಾಟ ಸಮಿತಿ ವತಿಯಿಂದ ಸೋಮವಾರ ನೀಡಲಾದ ಮನವಿ ಪತ್ರ ಸ್ವೀಕರಿಸಿ ಮೇಲಿನಂತೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಕೂಗಳತೆ ದೂರದಲ್ಲಿರುವ ಚಿಕ್ಕಪೇಟೆಯ ಗಾರ್ಡನ್ರಸ್ತೆಯ ಸ್ಮಾಶಾನದ ಮುಂಭಾಗ ಶ್ರೀರಂಗಪಟ್ಟಣ, ಶನಿಮಹಾತ್ಮ ದೇವಾಲಯದ ಅಕ್ಕಪಕ್ಕದ ನಿವಾಸಿಗಳು ಮಳೆ ಬಂದಾಗ ಕಲುಷಿತ ನೀರು ಸಂಗ್ರಹವಾಗಿ ನರಕಯಾತನೆಯನ್ನು ಪಡುವ ಸ್ಥಿತಿ ಇದ್ದು ಹಾಗೂ ಇದೇ ಭಾಗದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಶವಸಂಸ್ಕಾರಕ್ಕೂ ಪರದಾಡುವ ಸ್ಥಿತಿ ಇದೆ. ಸಮಸ್ಯೆ ಇತ್ಯರ್ಥಪಡಿಸುವಂತೆ ತುಮಕೂರು ಮಹಾನಗರಪಾಲಿಕೆಗೆ ಮತ್ತು ತುಮಕೂರು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನಿವಿ ಸಲ್ಲಿಸಿದರು ಸಹ ಕೇವಲ ಭರವಸೆಗಳನ್ನು ಮಾತ್ರ ನೀಡಿ ಸಮಸ್ಯೆಯನ್ನು ಇದುವರೆಗೂ ಬಗೆಹರಿಸಿಲ್ಲ. ಶ್ರೀರಂಗಪಟ್ಟಣ ನೊಂದ ರೈತ-ನಾಗರಿಕರ ಹೋರಾಟ ಸಮಿತಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೆಶಿಸಿ ಸಮಸ್ಯೆಯನ್ನು ನಿವಾರಿಸಬೇಕೆಂದು ಮನವಿಮಾಡಿದರು.
ತುಮಕೂರು ಅಮಾನಿಕೆರೆಯಿಂದ ಪ್ರಾರಂಭವಾಗುವ (ರಾಯಗಾಲುವೆ) ದೊಡ್ಡಚರಂಡಿ ಕಾಮಗಾರಿ ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಭಾಗ ಸ್ಮಶಾನದ ಮುಂಭಾಗ ಅರ್ದಕ್ಕೆ ನಿಂತು ಸುಮಾರು ವರ್ಷಗಳೇ ಕಳೆದಿವೆ ಈ ದೊಡ್ಡ ಚರಂಡಿಯೂ ಭೀಮಸಂದ್ರದ ಕೆರೆಗೆ ಅಳವಡಿಸಿರುವ ನೀರು ಶುದ್ಧಿಕರಣ ಘಟಕಕ್ಕೆ ಸಂಪರ್ಕವನ್ನು ಹೊಂದುತ್ತದೆ ಭೀಮಸಂದ್ರ ಕೆರೆಗೆ ಸಂಪರ್ಕ ಹೊಂದುವ ಚರಂಡಿಯು ಅರ್ಧಕ್ಕೆ ನಿಂತು ಹಲವು ವರ್ಷಗಳೆ ಕಳೆದರೂ ಸಹ ಇದುವರೆಗೂ ಸಂಬoಧಪಟ್ಟ ಇಲಾಖೆಯಾಗಲಿ, ಅಧಿಕಾರಿಗಳಾಗಲಿ ಗಮನಹರಿಸಿಲ್ಲ. ಹಲವು ಬಾರಿ ಮನವಿಗಳನ್ನು ನೀಡಿದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಮಳೆ ಬಂದಾಗ ಕೊಳಚೆ ನೀರು ಸರಗವಾಗಿ ಹರಿಯಲು ಸೂಕ್ತ ಚರಂಡಿಯ ವ್ಯವಸ್ಥೆ ಇಲ್ಲದೆ ಇಲ್ಲಿನ ಹೊಲ ಗದ್ದೆಗಳಿಗೆ ಪ್ಲಾಸ್ಟಿಕ್, ಕಸಕಡ್ಡಿ ಕಲುಷಿತ ನೀರು, ಯುಜಿಡಿ ನೀರು, ಸೇರಿ ವಾಸನೆ ಬರುವುದರಿಂದ ಇಲ್ಲಿನ ಜನರು ವಾಸಮಾಡುವುದೇ ಕಷ್ಟವಾಗಿದೆ. ಅಲ್ಲದೆ ಇರುವ ಒಂದು ಚಿಕ್ಕ ರಸ್ತೆಯೂ ಸಹ ಮುಚ್ಚಿ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಇಲ್ಲಿ ಇರುವ ಸಾರ್ವಜನಿಕ ಸ್ಮಶಾನವು ಸಹ ಕೊಳಚೆ ನೀರಿನಿಂದ ತುಂಬಿ ಶವಸಂಸ್ಕಾರಕ್ಕೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಶನಿಮಹಾತ್ಮ ದೇವಸ್ಥಾನ ಮತ್ತು ಶ್ರೀರಾಮ ದೇವಸ್ಥಾನಗಳಿಗೆ ಬರುವ ಭಕ್ತಾದಿಗಳಿಗೂ ಸಹ ತುಂಬಾ ತೊಂದರೆಯಾಗುತ್ತಿದೆ ಮಳೆ ಬಂದಾಗ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿಯ ವ್ಯವಸ್ಥೆ ಇಲ್ಲದೆ ಇರುವುದರಿಂದ ಇಲ್ಲಿನ ಹೊಲ-ಗದ್ದೆಗಳಿಗೂ ನೀರು ತುಂಬುವುದಲ್ಲದೆ ಎಲ್ಲ ಕಸಕಡ್ಡಿಗಳು ಹೊಲದ ತುಂಬಾ ಸೇರಿ ವ್ಯವಸಾಯ ಮಾಡುವುದಕ್ಕೂ ತೊಂದರೆಯಾಗುತ್ತಿದೆ. ತುಮಕೂರು ಮಹಾನಗರಪಾಲಿಕೆಗೆ ಹಲವು ಬಾರಿ ಮನವಿಯನ್ನು ಅರ್ಪಿಸಲಾಗಿದ್ದು ಅಮೃತ್ ಯೋಜನೆಯಡಿಯಲ್ಲಿ ಕೆಲಸ ಆರಂಭಿಸುವುದಾಗಿ ಹೇಳಿದ್ದರೂ ಇದುವರೆಗೂ ಆರಂಬಿಸಿಲ್ಲ. ಇಲ್ಲಿನ ನಿವಾಸಿಗಳಿಗೆ ಬರಿ ಆಶ್ವಾಸನೆಗಳನ್ನೇ ನೀಡಲಾಗಿದ್ದು, ಸಮಸ್ಯೆ ಬಗೆಹರಿದಿಲ್ಲ ಮಾನ್ಯ ಜಿಲ್ಲಾಧಿಕಾರಿಗಳು ಕನಿಷ್ಠ ಮೂರು ಮೀಟರ್ ಅಗಲ, ಮೂರು ಮೀಟರ್ ಆಳದ ಚರಂಡಿ ನಿರ್ಮಾಣಕ್ಕೆ ಆದೇಶಿಸಿ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಹೋರಾಟ ಸಮಿತಿಯ ಸಂಚಾಲಕ ಟಿ.ಹೆಚ್.ರಾಮು, ಯಜಮಾನ್ ಶಿವಕುಮಾರ್, ಟಿ.ಜಿ.ವಸಂತ್ಕುಮಾರ್, ಎಸ್.ರಾಘವೇಂದ್ರ, ಹೆಚ್.ಎಸ್.ಶಿವಕುಮಾರ್, ಹೊನ್ನಗಂಗಯ್ಯ, ಶಿವಣ್ಣ, ಗೋವಿಂದರಾಜು, ರಂಗಣ್ಣ, ಶಿವಗಂಗಯ್ಯ, ಗಂಗಣ್ಣ, ಮುರುಳಿ ಸೇರಿದಂತೆ ಒತ್ತಾಯಿಸಿದ್ದಾರೆ.
ಗಾರ್ಡನ್ ರಸ್ತೆಯ ಸ್ಮಶಾನದ ಮುಂಭಾಗ ದೊಡ್ಡ ಚರಂಡಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ

Leave a comment
Leave a comment


