ಸ್ಲಂ ವಿದ್ಯಾರ್ಥಿಗಳ ಸಾಧನೆ ಪ್ರಶಂಶನೀಯ ಶಿಕ್ಷಣವೇ ಶೋಷಣೆಯ ಬಿಡುಗಡೆಯ ಮಾರ್ಗ
ಶಾಸಕ ಜ್ಯೋತಿಗಣೇಶ್
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ನಗರ ಶಾಸಕರಾದ ಜ್ಯೋತಿಗಣೇಶ್ ಕಳೆದ ೨೦ ವರ್ಷಗಳಿಂದ ಸ್ಲಂ ವಿಧ್ಯಾರ್ಥಿಗಳಿಗೆ ಶೈಕ್ಷಣೀಕ ಮಾರ್ಗದರ್ಶನ ನೀಡುವ ಜೊತೆಗೆ ಅವರ ಸಾಧನೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ತುಮಕೂರು ಸ್ಲಂ ಸಮಿತಿ ಮಾಡುತ್ತಿದ್ದು ಇದು ಸಮಾಜ ಮುಖಿಯಾದ ಕೆಲಸ ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸಿ ವಿದ್ಯಾರ್ಥಿಗಳ ಸಾಧನೆ ಪ್ರಶಂಶನೀಯವಾಗಿದೆ ಕೊಳಚೆ ಪ್ರದೇಶಗಳಲ್ಲಿ ಉತ್ತಮವಾದ ಸೌಲಭ್ಯಗಳಿಲ್ಲದಿದ್ದರು ಶೇಕಡ ೯೨% ರಿಂದ ಶೇ ೭೪% ರವರೆಗೆ ಅಂಕಗಗಳನ್ನು ಪಡೆದು ತಂದೆ ತಾಯಿಗಳ ಮೌಲ್ಯ ಬರುವ ಕೆಲಸ ಮಾಡಲಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಶೋಷಣೆಯಿಂದ ಹೊರಬರಲು ಅಂಬೇಡ್ಕರ್ ರವರ ಹೇಳಿದ ಹಾಗೆ ಶಿಕ್ಷಣ ಒಂದೇ ಮಾರ್ಗವಾಗಿದೆ ಇದರಿಂದ ಸ್ಲಂ ಎಂಬ ಕಳಂಕವನ್ನು ವಿದ್ಯಾರ್ಥಿಗಳು ತೆಗೆದು ಹಾಕಲು ಮುಂದಾಗಬೇಕೆAದರು. ತುಮಕೂರು ನಗರದಲ್ಲಿ ಇನ್ಕ್ಯೂನೆಬೆಷನ್ ಕೇಂದ್ರವನ್ನು ಪ್ರಾರಂಭಿಸುತ್ತಿದ್ದು ಕೊಳಚೆಪ್ರದೇಶಗಳಲ್ಲಿ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಅಥವಾ ಐಟಿಐ ಮಾಡಿದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯೋಗ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುತ್ತಿದ್ದು ಕೊಳಗೇರಿಗಳಲ್ಲಿರುವ ಯುವಜನರು ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.

