ತುಮಕೂರು: ಯಶಸ್ಸು ಎಂಬುದು ಒಂದು ಪ್ರಕ್ರಿಯೆ. ಅದನ್ನು ನಿರಂತರ ಪ್ರಯತ್ನದಿಂದ ಮಾತ್ರ ಸಾಧಿಸಬಹುದು. ಭಾಷೆ ಮತ್ತು ಸಾಹಿತ್ಯಗಳೆರಡರಲ್ಲೂ ಛಾಪು ಮೂಡಿಸುವುದು ಇಂದಿನ ವಿದ್ಯಾರ್ಥಿಗಳ ಗುರಿಯಾಗಬೇಕು ಎಂದು ಸಿದ್ದಾರ್ಥ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವಪ್ರಸಾದ್ ಹೇಳಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ವೇದಿಕೆಗಳು ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆಯನ್ನು ಸಾಕಾರಗೊಳಿಸಲು ಸಹಕಾರಿಯಾಗಿವೆ. ಇಂಗ್ಲಿಷ್ ಸಾಹಿತ್ಯವೆಂಬುದು ಒಂದು ದೊಡ್ಡ ಸೌಧ. ಅದರ ವಿವಿಧ ಆಯಾಮಗಳನ್ನು ಪ್ರತಿಯೊಬ್ಬರೂ ಸ್ವಪ್ರಯತ್ನದಿಂದ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ದಕ್ಕಿಸಿಕೊಳ್ಳಬೇಕು ಎಂದರು.
ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಮಾತನಾಡಿ, ಇಂಗ್ಲಿಷ್ ಎಂಬುದು ಉದ್ಯೋಗದ ಭಾಷೆ, ಅನ್ನದ ಭಾಷೆ, ಅಂತಾರಾಷ್ಟಿçÃಯ ಭಾಷೆಯಾಗಿರುವುದರಿಂದ ಅದನ್ನು ಕಲಿಯಲೇಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ದಾಕ್ಷಾಯಿಣಿ ಜಿ., ಸಹಪ್ರಾಧ್ಯಾಪಕ ಡಾ. ರವಿ ಸಿ. ಎಂ., ಸಹಾಯಕ ಪ್ರಾಧ್ಯಾಪಕರಾದ ಡಾ. ವೇಣುಗೋಪಾಲ ಬಿ. ಎನ್., ಡಾ. ಮೋಹನ್ ಪ್ರಕಾಶ್, ಡಾ. ಸುಬ್ರಹ್ಮಣ್ಯ ಶರ್ಮಾ ವಿ., ಡಾ. ರಾಘವೇಂದ್ರ, ಉಪನ್ಯಾಸಕರಾದ ನೀತು, ರಾಮು, ಪ್ರತಿಭಾ ಎಚ್. ಪಿ. ಭಾಗವಹಿಸಿದ್ದರು.
ಸಾಧನೆ ಎಂಬುದು ನಿರಂತರ ಪ್ರಕ್ರಿಯೆ
Leave a comment
Leave a comment