ತಂಬಾಕು ಮುಕ್ತ ರಾಷ್ಟç ಸದೃಢ ನಿರ್ಧಾರ
ದೇಶದ ಯುವಜನತೆ ಮಾದಕ ವ್ಯಸನಿಗಳಾಗಿ ಬದಲಾಗುತ್ತಿರುವುದು ದುರಂತವೇ ಸರಿ. ಅಧ್ಯಯನಶೀಲರಾಗಿ ಭವ್ಯ ಭಾರತದ ಭವಿಷ್ಯವನ್ನು ರೂಪಿಸಬೇಕಾದವರು ತಂಬಾಕುಯುಕ್ತ ಬೀಡಿ, ಸಿಗರೇಟ್, ಡ್ರಗ್ಸ್, ಸೇವನೆ ಮುಂತಾದ ಮಾದಕ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಜನತೆಗೆ ಅರಿವು ಮೂಡಿಸುವ ಮೂಲಕ ಶ್ರೀ ಸಪ್ತಗಿರಿ ಸಂಸ್ಥೆ ದಾರಿದೀಪವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಯಿತು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ತಂಬಾಕಿನಿAದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮವನ್ನು ಕುರಿತು ಪ್ರಾತ್ಯಕ್ಷಿಕೆ ಮುಖಾಂತರ ಪ್ರಾಶುಪಾಲರಾದ ಡಾ|| ಎಚ್. ಎಸ್ ನಿರಂಜನಾರಾಧ್ಯರವರು ಮಾತನಾಡುತ್ತಾ ಕಂಪನಿಗಳು ತಂಬಾಕಿನ ಉತ್ಪನ್ನಗಳ ಬಗ್ಗೆ ವಿಪರೀತ ಆಕರ್ಷಣೆಯ ಶೈಲಿಯಲ್ಲಿ ಜಾಹಿರಾತುಗಳ ಮೂಲಕ ಯುವಜನತೆಯನ್ನು ತನ್ನತ್ತ ಸೆಳೆದು ದುಶ್ಚಟಗಳಿಗೆ ದಾಸರಾಗುವಂತೆ ಮಾಡಿವೆ. ಅಲ್ಲದೆ ರೈತರುಗಳು ಆರ್ಥಿಕ ಲಾಭದ ಆಸೆಯಿಂದ ಆಹಾರ ಬೆಳೆಗಳ ಬದಲಾಗಿ ತಂಬಾಕು ಬೆಳೆದು ಶ್ರೀಮಂತರಾಗಲು ಬಯಸುತ್ತಿದ್ದಾರೆ ಇದರಿಂದ ಪ್ರತಿವರ್ಷ ೩.೫ ಮಿಲಿಯನ್ ಹೆಕ್ಟೇರ್ ಭೂಮಿ ಬಂಜರು ಭೂಮಿಯಾಗುವ ಸಾಧ್ಯತೆ ಹೆಚ್ಚಿದೆ. ಇದರ ಜೊತೆಗೆ ತಮ್ಮ ಮಕ್ಕಳಿಗೂ ಮೌಲ್ಯಯುತ ಶಿಕ್ಷಣವನ್ನು ನೀಡುವಲ್ಲಿ ಎಡವುತ್ತಿದ್ದಾರೆ ಹಾಗಾಗಿ ಮುಂದಿನಪೀಳಿಗೆ ಸದೃಢ ಆರೋಗ್ಯಯುಕ್ತ ಸಮಾಜವಾಗಲು ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಪ್ರಚಾರ ಮಾಡಿ ತಂಬಾಕು ಮುಕ್ತ ರಾಷ್ಟçವನ್ನಾಗಿಸುವ ಪಣ ತೊಡಬೇಕಿದೆ ಎಂದು ತಿಳಿಸಿದರು
ತಂಬಾಕು ಮುಕ್ತ ರಾಷ್ಟ್ರ ಸದೃಢ ನಿರ್ಧಾರ
Leave a comment
Leave a comment