ಆರಕ್ಷಕ ಅರಿವನ್ನು ಮೂಡಿಸುವ ಶಿಕ್ಷಕ’
ಆರಕ್ಷಕ ನಿರೀಕ್ಷಕ ಬಿ. ಎಸ್. ದಿನೇಶ್ ಕುಮಾರ್ ಅಭಿಮತ
ತುಮಕೂರು: ಇನ್ನೊಂದು ವಾರದಲ್ಲಿ ತುಮಕೂರು ಜಿಲ್ಲೆಗೆ ಸಾಮಾನ್ಯ ಸಂಖ್ಯೆಯ ಮಹಿಳಾ ಸಹಾಯವಾಣಿ ಬರಲಿದೆ. ಆರಕ್ಷಕ ಅರಿವನ್ನು ಮೂಡಿಸುವ ಶಿಕ್ಷಕನಾಗಿ, ಸಮಾಜದ ರಕ್ಷಣೆಯಾಗಿ, ಕಾನೂನು ಕಾಪಾಡುವ ಯೋಧನಾಗಿ ಕಾರ್ಯನಿರ್ವಹಿಸುತ್ತಾನೆ ಎಂದು ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಬಿ. ಎಸ್. ದಿನೇಶ್ ಕುಮಾರ್ ತಿಳಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಮಾಜಶಾಸ್ತç ವಿಭಾಗವು ಲೈಂಗಿಕ ದೌರ್ಜನ್ಯ ಪ್ರತಿಬಂಧಕ ಘಟಕ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಘಟಕ ಐ.ಕ್ಯೂ.ಎ.ಸಿ. ಸಹಯೋಗದೊಂದಿಗೆ ಅಂತಾರಾಷ್ಟಿçÃಯ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ವಿದ್ಯಾರ್ಥಿ ಸ್ನೇಹಿಯಾಗಿ ಆರಕ್ಷಕ ಇಲಾಖೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಅರಿವಿಲ್ಲದೆಯೆ ಅರಳುವ ಬದುಕನ್ನು ನಾಶಮಾಡಿಕೊಳ್ಳುತ್ತಿದ್ದಾರೆ. ಅರಿವಿನ ಶಿಕ್ಷಣದ ಅವಶ್ಯಕತೆ ಪಠ್ಯಗಳಲ್ಲಿ ಅಳವಡಿಸಬೇಕು. ಎಷ್ಟೇ ಪದವಿಗಳನ್ನು ಪಡೆದರೂ ಜ್ಞಾನೋದಯವಾಗದೆ ಇದ್ದರೆ ಬದುಕು ಅರಳುವುದಿಲ್ಲ, ವಿಕಾಸವಾಗುವುದಿಲ್ಲ. ನಕಾರಾತ್ಮಕ ವಿಷಯಗಳಲ್ಲಿ ಯುವಪೀಳಿಗೆಯ ಆಸಕ್ತಿ ಹೆಚ್ಚಾಗಿದೆ. ಸಕಾರಾತ್ಮಕ ವಿಷಯಗಳನ್ನು ಪರಿಗಣಿಸಿದಾಗ ಮಾತ್ರ ಅಭಿವೃದ್ಧಿ ಹೊಂದಬಹುದು ಎಂದು ಹೇಳಿದರು.
ವಯಕ್ತಿಕ ಸುರಕ್ಷತೆಯ ಜೊತೆಗೆ ಡಿಜಿಟಲ್ ಸುರಕ್ಷತೆಯೂ ಮುಖ್ಯ. ಎಲ್ಲರಿಗೂ ಅನ್ವಯಿಸುವಂತೆ ಸಂಚಾರಿ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವುದು, ಸೀಟ್ಬೆಲ್ಟ್ ಹಾಕದೆ ಕಾರು ಚಲಾಯಿಸುದು, ಅತಿ ವೇಗ, ವಾಹನಗಳನ್ನು ಹಿಂದಿಕ್ಕೆ ಮುನ್ನುಗ್ಗುವುದು, ವಾಹನ ಚಲಾಯಿಸುವ ವೇಳೆ ಮೊಬೈಲ್ ಬಳಸಿ ಅಪಘಾತಕ್ಕಿಡಾಗಿ ಅಮೂಲ್ಯವಾದ ಬದುಕನ್ನು ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.
ಸಾಮಾನ್ಯ ಜ್ಞಾನದ ಕೊರತೆ ವಿದ್ಯಾರ್ಥಿಗಳಲ್ಲಿದೆ. ಬದುಕು ಬದಲಿಸಬೇಕಾದ ಹುರುಪು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿದೆ. ಡ್ರಗ್ಸ್ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ತಂದೆ-ತಾಯಿ ಮಕ್ಕಳ ಬಗ್ಗೆ ನಿಗಾವಹಿಸಬೇಕು. ಮಕ್ಕಳಲ್ಲಿ ಕಾಣುವ ದಿನನಿತ್ಯದ ಬದಲಾವಣೆಯ ಮೇಲೆ ಗಮನಹರಿಸಬೇಕು. ಹಣದ ಅವಶ್ಯಕತೆ ಇದ್ದರೆ ಮಾತ್ರ ಕೊಡಬೇಕು. ಭವಿಷ್ಯವನ್ನು ಉಜ್ವಲವಾಗಿಸುವ ಶಿಸ್ತು, ಸಂಯಮ, ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.
‘ಆರಕ್ಷಕ ಅರಿವನ್ನು ಮೂಡಿಸುವ ಶಿಕ್ಷಕ’ಆರಕ್ಷಕ
Leave a comment
Leave a comment