ಸಮಾಜದಲ್ಲಿ ದ್ವೇಷ ಮತ್ತು ಹಿಂಸೆ ಆರೋಗ್ಯಕರವಲ್ಲ ಎಲ್ಲರನ್ನು ಪ್ರೀತಿಸುವ – ಸಹಬಾಳ್ವೆ, ಸೋದರೆತೆ ಇಲ್ಲದ ಸಮಾಜ ಅನಾರೋಗ್ಯದಿಂದ ನಶಿಸಿ ಪ್ರಗತಿಯನ್ನು ಕಾಣದೆ ಹಾಳಾಗುತ್ತದೆ ಹಾಗಾಗಿ ಎಲ್ಲಾರನ್ನು ಸಮಾನತೆಯಿಂದ ಕಾಣುವ ಸಮ ಅರೋಗ್ಯಕರ ಸಮಾಜಕ್ಕೆ ಮನುಷ್ಯತ್ವ ಪ್ರೀತಿಸು ಎಲ್ಲಾರು ಒಂದಾಗಿ ದುಡಿಯ ಬೇಕಾಗಿದೆ ಎಂದು ಹಿರಿಯ ಚಿಂತಕ ಪ್ರೊ; ಕೆ. ದೋರೈರಾಜು ಅವರು ಕರೆ ನೀಡಿದರು
ಸೌರ್ಹಾದ ಪಂಪರೆಯ ಅಭಿಯಾನದ ಭಾಗವಾಗಿ ಮಹಾತ್ಮ ಗಾಂಧಿ ಹುತಾತ್ಮ ದಿನದ ಭಾಗವಾಗಿ ಸೌಹಾರ್ಧತಾ ಮಾನವ ಸರಪಳಿಯ ಭಾಗವಾಗಿ ಸ್ವಾತಂತ್ಯ ಚೌಕದಿಂದ ಟೌನ್ ಹಾಲ್ ವೃತ್ತದ ತನಕ ನಡೆದ ಮಾನವ ಸರಪಳಿಯನ್ನು ಉಧ್ಘಾಟಿಸಿ ಮಾತನಾಡಿದರು . ಪ್ರಿತಿಯ ಮೇಲೆ ಜಗತ್ತು ನಿಂತಿದೆಯೇ ಹೊರತು ಧ್ವಷದಿಂದ ಅಲ್ಲ, ಪ್ರೀತಿಯನ್ನು ಎಂದು ನಾವು ಕಳೆದುಕೊಂಡ ದಿನ ಧ್ವೇಷವನ್ನು ಹುಟ್ಟು ಹಾಕಿ ನಾಶವಾಗುತ್ತೇವೆ, ಮಾನವೀಯತೆ ಉಳಿಯಬೇಕಾದರೆ ಜಾತಿ ಧರ್ಮ, ಭಾಷೆ, ರಾಷ್ಟ್ರೀಯತೆ ಜನಾಂಗೀಯ ಹೆಸರಿನಲ್ಲಿ ನಡೆಯುವ ಧ್ವೇಷವನ್ನು ಅಳಿಸಬೇಕಾಗಿದೆ. ಗಾಂಧಿಯ ಕನಸಾದ ಪ್ರೀತಿ ಸಹನೆಯನ್ನು ಕಟ್ಟಿ ಬೆಳೆಸುವ ಮೂಲಕ ಸೌಹಾರ್ದ ಕರ್ನಾಟವನ್ನು ಕಟ್ಟಿ ಬೆಳೆಸೋಣ ಎಂದು ಕರೆ ನೀಡಿದರು,
ಪರಿಸರವಾದಿ ಸಿ. ಯತಿರಾಜು ಅವರು ಮಾತನಾಡಿ ಮಹಾತ್ಮಗಾಂಧಿಯವರನ್ನು ನಾಥೂರಾಮ್ ಗೂಡ್ಸೆ ಗುಂಡಿಟ್ಟು ಕೊಂದಗಾ ಹೇರಾಮ್ ಎಂದವರು ಗಾಮಧಿ ರಾಮ ರಹೀಮ, ಈಶ್ವರ್ ಅಲ್ಲಾ ಎಂದವರು ಗಾಂಧಿ ಆದರೆ ಇಂದು ರಾಮನ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ, ಗಾಂಧಿ ಕಡ್ಡಂತಹ ರಾಮರಾಜ್ಯದ ಪರಿಕಲ್ಪನೆ ಬೇಕಾಗಿದೆ ಕೇವಲ ರಾಮನ ಹೆಸರಿನಲ್ಲಿ ರಾಜಕೀಯ ಬೇಡ ಆ ನಿಟ್ಟಿನಲ್ಲಿ ಸೌಹಾರ್ದ ಕರ್ನಾಟಕವನ್ನು ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ ಎಲ್ಲರಿಗೂ ಬೇಕಾದ ರಾಮನ ಭಕ್ತಿ ಬೇಕಾಗಿದೆ ಆ ನಿಟ್ಟಿನಲ್ಲಿ ಎಲ್ಲರೂ ಕೆಸಲ ಮಾಡೋಣ ಎಂದರು.
ಮಹಿಳಾ ಲೆಖಕಿ ಶೈಲಾ ನಾಗರಾಜು, ಮಾತನಾಡಿ ಗಾಂಧಿಯವರ ಸಾವು ದೇಶದ ಸಾವು ನಮ್ಮ ನಡುವೆ ಬುದ್ದ, ಗಾಂಧಿ ಅಂಬೇಡ್ಕರ್, ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು ಸಹ ಇಂದು ನಾವು ಮನುಷ್ಯತ್ವವನ್ನು ಕಳೆದು ಕೋಂಡು ಹಿಂಸೆಯ ಕೂಪದಲ್ಲಿ ಬದುಕುತ್ತಿದ್ದೇವೆ ಈ ನಿಟ್ಟಿನಲ್ಲಿ ಸೌಹಾರ್ದತೆಯ ನಡೆ ಪ್ರತಿಯೊಬ್ಬರಲ್ಲೂ ಮೂಡಿ ಬರಬೇಕು ಎಂದರು
ಡಾ. ಮುರುಳಿಧರ್ ಮಾತನಾಡಿ ನಾವೆಲ್ಲರೂ ಭಾರತೀಯರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಮ-ರಹಿಮನ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸಗಳು ನಡೆಯುತ್ತವೆ ನಮ್ಮ ದೇಶ ಸೌಹಾರ್ದತೆಗೆ ಹೆಸರಾದ ದೇಶವಾಗಿದ್ದು ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು
ಡಾ. ಲಕ್ಷಣ್ದಾಸ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಸಮತೆ, ಸೋದರತ್ವ, ಸಹಬಾಳ್ವೆಯಿಂದ ಬದುಕು ಸಾಗಿಸಬೇಕಾಗಿದೆ ಎಂದರು.
ಸಿಐಟಿಯ ಸೈಯದ್ ಮುಜೀಬ್ ಧ್ವೇಷದಿಂದ ನಾಡಿನ ಸಾಮರಸ್ಯವನ್ನು ಕದಡುವ ಶಕ್ತಿಗಳನ್ನು ತಿರಸ್ಕರಿಸಿ ಕೂಡಿ ಬಾಳುವ ಹಾಗೂ ಸೇರಿ ನಲಿವ ಕನ್ನಡ ತನವನ್ನು ಕನ್ನಡದ ಜನತೆ ತನ್ನದಾಗಿಸಿಕೊಳ್ಳಬೇಕು, ರಾಷ್ಟç ಕವಿ ಕುವೆಂಪುರವರು ಗುಡಿ ಚರ್ಚುಗಳನ್ನು ಬಿಟ್ಟು ಹೊರ ಬನ್ನು ಎಂದು ಕರೆ ನೀಡಿದರು ಅವರು ಹೇಳಿದ ಅಂದಿನ ಮಾತುಗಳು ಇಂದು ತಮ್ಮ ರಾಜಕೀಯದ ಲಾಭಕ್ಕಾಗಿ ಧರ್ಮವನ್ನು ಬಳಿಸಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಆ ನಿಟ್ಟಿನಲ್ಲಿ ಸೌಹಾರ್ಧತೆ ಅತಿ ಮುಖ್ಯವಾದುದು ಎಂದರು.
ಯುವ ಚಿಂತಕ ನಿಖೀತ್ರಾಜ್ ಮೌರ್ಯ ಮಾತನಾಡಿ ಭಾರತ ಹಿಂಸೆಯನ್ನು ತ್ಯಜಿಸಿ ಬದುಕಿದ ದೇಶ ನಾವು ಹಿಂಸೆಯನು ತ್ಯಜಿಸಿ ಪ್ರೀತಿಯಿಂದ ಬದುಕುವ ಕೆಲಸ ಮಾಡಬೇಕಾಗಿದೆ ಆ ನಿಟ್ಟಿನಲ್ಲಿ ಸೌಹಾರ್ದ ತುಮಕೂರು ನಡೆಸುತ್ತಿರುವ ಶ್ಲಾಘನೀಯ, ಯಾವುದೇ ಜಾತಿ ಧರ್ಮದವರಾಗಿದ್ದರು ಸಹ ಇಂದು ಒಂದೇ ತಾಯಿಯ ಮಕ್ಕಳಾಗಿ ಮನುಷ್ಯರಾಗಿ ಬದುಕುವ ಅವಶ್ಯಕತೆ ಇದೆ ಎಂದರು.
ತಾಜುದ್ದೀನ್ ,ಪಂಡಿತ್ ಜವಾಹರ್, ಅಸದುಲ್ಲಾ ಬೇಗ್, ಅಪ್ಸರ್ಖಾನ್, ಅರುಣ, ಇನ್ನುಮುಂತಾದವರು ಮಾತನಾಡಿದರು.
ಮಾನವ ಸರಪಳಿಯಲ್ಲಿ ಡಿ,ಎಸ್.ಎಸ್ ಹಿರಿಯ ಮುಖಂಡರಾದ ನರಸಿಂಹಯ್ಯ, , ಜನವಾಧಿ ಮಹಿಳಾ ಸಂಘಟನೆಯ ಟಿ. ಅರ್. ಕಲ್ಪನಾ, ಸಿಐಟಿಯು ಜಿಲ್ಲಾ ಖಜಾಂಚಿ . ಎ. ಲೋಕೆಶ್, ರಂಗಧಾಮಯ್ಯ, ಕೊಳಗೇರಿ ನಿವಾಸಿಗಳ ಹಿತ ರಕ್ಷಣ ಸಮಿತಿಯ ಅನುಪಮಾ, ಕೃಷ್ಟಮೂರ್ತಿ, ಯುವ ಮುಂದಾಳು ಗೌಸ್ ಪಾಷ, ಉಮರ್ ಫರೂಕ್, ಮನೆ ಗೆಲಸಗಾರರ ಸಂಘದ ,ಅನುಸೂಯ, ಎಐಟಿಯುಸಿನ ಕಂಬೆಗೌಡ, ಮುನಿಸಿಪಲ್ ಕಾರ್ಮಿಕರ ಸಂಘದ ಮಾರುತಿ, ನಾಗರಾಜು, ಹಮಾಲಿ ಕಾರ್ಮಿಕರ ಸಂಘದ ಗಂಗಾಧರ್, ರೈತ ಸಂಘದ ರವೀಶ್, ಪ್ರಾಂತ ರೈತ ಸಂಘ ಅಧ್ಯಕ್ಷ ದೊಡ್ಡ ನಂಜಯ್ಯ, ಬಸವರಾಜು, , ಅಂಗನವಾಡಿ ನೌಕರರ ಸಂಘದ ಗೌರಮ್ಮ, ಜಬಿನಾ, ಪುಟ್ಟ್ ಪಾತ್ ವ್ಯಾಪಾರಿಗಳ ಸಂಘದ ವಸೀಮ ಅಕ್ರಂ, ಮುತ್ತುರಾಜ್ ನಗರ ವ್ಯಾಪಾರಿ ಸಮಿತಿ ಸದಸ್ಯರಾದ ಜಗದೀಶ್ , ರವಿನಾಯಕ್,ಅಟೋ ಚಾಲಕ ಸಂಘ ಇಂತಿಯಾಜ್, ಸಿದ್ದರಾಜು, ಸಮುದಾಯ ಸಂಚಾಲಕ ಅಶ್ವಥಯ್ಯ, ವಿದ್ಯಾರ್ಥಿ ನಾಯಕ ವಿನಯ್, ನಟರಾಜಪ್ಪ, ನಿವೃತ್ತ ನೌಕರರ ಸಂಘ ….., ವರದಕ್ಷಿಣೆ ವಿರೋಧಿ ವೆದಿಕೆಯ ಪಾರ್ವತಮ್ಮ ರಾಜ್ ಕುಮಾರ್,ತುಮಕೂರು ಸೈನ್ಸ್ ಸೆಂಟರ್ ಪಿ. ಪ್ರಸಾದ್, ಪಿ,ಎಫ್, ಪಿಂಚಣಿದಾರರ ಸಂಘ. ಟಿ.ಜಿ. ಶಿವಲಿಂಗಯ್ಯ, ಕಟ್ಟಡ ಕಾರ್ಮಿಕರ ಸಂಘ ಕಲೀಲ್, ಶಂಕಪ್ಪ, ಉಪಸ್ಥಿತರಿದ್ದರು
ಸ್ವಾತಂತ್ರ ಚೌಕದಿoದ ಟೌನ್ಹಾಲ್ವೃತ್ತದವರೆಗೆ ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿದರು ಟೌನ್ಹಾಲ್ ವೃತ್ತದ ವರಗೆ ಸಾಧು ಸಂತರು, ನಾಡಿನ ಹಲವು ಸಾಹಿತಿಗಳ ಸೌಹಾರ್ದ, ಶಾಂತಿ, ಸಹಬಾಳ್ವೆ ಮತ್ತು ಮನುಷ್ಯತ್ವ ಸಾರುವ ಸಂದೇಶಗಳ ಬಿತ್ತಿಪತ್ರಗಳನ್ನು ಹಿಡಿದಿದ್ದರು.
ಸನ್ಯಾಸಿ, ಸೈನಿಕ, ಮೌಲ್ವಿಯ ವೇಷತೊಟ್ಟತಂಹ ಭಾರತದ ಧ್ವಜವನ್ನು ಹಿಡಿದು ಮೆರವಣಿಗ ಮುಂಧೆ ಸಾಗಿದ ಪುಟಾಣಿಗಳು ಎಲ್ಲರ ಗಮನ ಸೆಳೆದರು.