ದುಶ್ಚಟಗಳಿಂದ ದೂರ ಇರುವಂತೆ ಸಾಮಾಜಿಕ ಸಂದೇಶ ಹೊಂದಿರುವ ೯೦ಬಿಡಿ ಮನೆಗೆ ನಡಿ ಚಲನಚಿತ್ರ , ತಂಡ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶ್ರೀಶ್ರೀಶಿವಕುಮಾರಸ್ವಾಮೀಜಿಗಳ ಗದ್ದುಗೆೆ ದರ್ಶನ ಪಡೆದು,ಪೀಠಾಧ್ಯಕ್ಷರಾದ ಶ್ರೀಸಿದ್ದಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆದರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ನೇತೃತ್ವದಲ್ಲಿ ೯೦ ಬಿಡಿ ಮನೆ ನಡಿ ಸಿನಿಮಾದ ನಾಯಕ ನಟ ೭೧ ವರ್ಷ ವಯಸ್ಸಿನ ವೈಜನಾಥ ಬಿರಾದಾರ್,ನಿರ್ದೇಶಕರಾದ ಉಮೇಶ್ಬಾದರದಿನ್ನಿ,ನಾಗರಾಜು ಅರೆಹೊಳೆ,ವಿವಿಧ ಸಂಘ ಸಂಸ್ಥೆಗಳ ಮುಖಂಡರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.ತದನಂತರ ಚಿತ್ರ ತೆರೆ ಕಂಡಿರುವ ಕೃಷ್ಣಾ ಚಿತ್ರಮಂದಿರಕ್ಕೆ ಭೇಟಿ ನೀಡಿ, ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದರು.
ಸಿದ್ದಗಂಗಾ ಮಠಾಧೀಶರ ಭೇಟಿ ನಂತರ ಮಾತನಾಡಿದ ವೈಜನಾಥ ಬಿರಾದಾರ,ತುಮಕೂರು ನನಗೆ ತವರುಮನೆ ಯಿದ್ದಂತೆ.ನನ್ನ ಮೊದಲ ಸಿನಿಮ ಶಂಖನಾದ ಚಿತ್ರೀಕರಣ ಸಂಪಿಗೆ ಬಳಿ ನಡೆಯಿತು.ನಾಲ್ಕನೇ ತರಗತಿಯವರೆಗೆ ಓದಿ,೭೦ರ ದಶಕದಲ್ಲಿ ನಾಟಕದ ಗೀಳು ಹತ್ತಿಸಿಕೊಂಡು ಇಂದು ನನ್ನ ೭೧ನೇ ವಯಸ್ಸಿನಲ್ಲಿ ನಾಯಕನಟನಾಗಿದ್ದೇನೆ.೧೯೮೫ರಲ್ಲಿ ಶಂಖನಾದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದು ಇದುವರೆಗೂ ಸುಮಾರು ೫೦೦ ಸಿನಿಮಾಗಳಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿದ್ದೇನೆ.ಮದ್ಯಪಾನದ ದುಶ್ಚಟದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಗಂಭೀರ ವಿಚಾರಗಳನ್ನು ಸಿನಿಮಾ ಎಂಬ ಪ್ರಬಲ ಮಾಧ್ಯಮದ ಮೂಲಕ ಜನರಿಗೆ ಹೇಳಲು ಹೊರಟಿದ್ದೇವೆ.ಮಾಧ್ಯಮಗಳಿಂದ,ಪ್ರೇಕ್ಷಕರಿAದ ಒಳ್ಳೆಯ ಸ್ಪಂದನೆ ಸಿಕ್ಕಿದೆ.ಇಂದು ಕೇವಲ ಗಂಡು ಮಕ್ಕಳಿಗಾಗಿ ಮಾಡಿದ್ದಲ್ಲ. ಹೆಣ್ಣು ಮಕ್ಕಳಿಗೂ ೯೦ ಬಿಡಿ ಮನೆಗೆ ನಡಿ ಸಿನಿಮಾದಲ್ಲಿ ಒಳ್ಳೆಯ ಸಂದೇಶವಿದೆ. ಮನೆ ಮಂದಿಯಲ್ಲಾ ಕೂಡಿ ನೋಡಬಹುದಾದ ಕೌಟುಂಬಿಕ ಚಿತ್ರ ಇದಾಗಿದೆ ಎಂದರು.
ನಾನು ನಟಿಸಿದ ಕನಸೆಂಬ ಕುದುರೆಯನ್ನೇರಿ ಸಿನಿಮಾಕ್ಕೆ ಅತರರಾಷ್ಟಿçÃಯ ಪ್ರಶಸ್ತಿ ಬಂದಿದೆ.ಕರ್ನಾಟಕ ಸರಕಾರ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಹೀರೋ ಆಗಿ ಮೊದಲ ಸಿನಿಮಾ ಖುಷಿ ಇದೆ.ಜನರು ಥೇಟರಿಗೆ ಬಂದು ಸಿನಿಮಾ ನೋಡಿ ಹರಸಬೇಕು ಎಂದು ಮನವಿ ಮಾಡಿದರು.
ನಿರ್ದೇಶಕರಾದ ಉಮೇಶ ಬಾದರದನ್ನಿ ಮಾತನಾಡಿ,ಸಮಾಜದಲ್ಲಿ ಇಂದು ಸಣ್ಣ,ಪುಟ್ಟ ಮಕ್ಕಳು ಸಹ ಮದ್ಯ, ಮಾಧಕ ವಸನಕ್ಕೆ ಬಲಿಯಾಗುತ್ತಿದ್ದಾರೆ.ಇದರಿಂದ ಕೌಟುಂಬಿಕ ಪರಿಸರದ ಜೊತೆಗೆ, ಸಾಮಾಜಿಕ, ಆರ್ಥಿಕ ಪರಿಸರವೂ ಹಾಳಾಗಲಿದೆ. ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಕಹಿ ಎಂಬ ಔಷಧವನ್ನು ಸಿಹಿಯಾದ ಹಾಸ್ಯದ ಮೂಲಕ ಹೇಳಲು ಹೊರಟಿದ್ದೇವೆ.ಸಿನಿಮಾಕ್ಕೆ ಶ್ರೀಮತಿ ರತ್ನಮಾಲ ಬಾದರದನ್ನಿ ನಿರ್ಮಾಪಕರಾಗಿದ್ದಾರೆ.ಈ ಹಿಂದೆ ಚಾರ್ಲಿ ಚಾಪ್ಲಿನ್ ಅತ್ಯಂತ ಗಂಭೀರ ವಿಚಾರಗಳನ್ನು ಹಾಸ್ಯ, ವಿಡಂಭನೆಯ ಮೂಲಕ ಪ್ರೇಕ್ಷಕರ ಮುಂದಿಡುತ್ತಿದ್ದರು. ಅದೇ ಪ್ರಯತ್ನವನ್ನು ನಾವು ಸಹ ಮಾಡಿದ್ದೇವೆ ಎಂದರು.
ಮತ್ತೊಬ್ಬ ನಿರ್ದೇಶಕ ನಾಗರಾಜ್ ಅರೆಹೊಳೆ ಮಾತನಾಡಿ, ೯೦ ಬಿಡಿ ಮನೀಗ್ ನಡಿ ಚಿತ್ರವನ್ನು ಬಹುತೇಕ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಒಳ್ಳೆಯ ಸಾಮಾಜಿಕ ಸಂದೇಶವನ್ನು ಹೊಂದಿದೆ.ನಶೆಯ ಚಟಕ್ಕೆ ಬಲಿಯಾಗುವ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.ಸಿನಿಮಾದಲ್ಲಿ ವೈಜನಾಥ್ ಬಿರಾದಾರ ಅವರೊಂದಿಗೆ ಧರ್ಮ, ಕರಿಸುಬ್ಬು, ಪ್ರಶಾಂತ್ ಸಿದ್ದಿ,ನೀತಾ ಮೈಂದುರ್ಗಿ,ಪ್ರೀತು ಪೂಜಾ, ರಿಷಬ್ ಬಾದರದಿನ್ನಿ ಮತ್ತಿತರರು ನಟಿಸಿದ್ದಾರೆ.ಕೃಷ್ಣಾ ನಾಯಕ್ ಅವರ ಛಾಯಾಗ್ರಾಹಣ, ಕಿರಣ್ಶಂಕರ್ ಮತ್ತು ಶಿವು ಬೇರಗಿ ಸಂಗೀತ ನೀಡಿದ್ದಾರೆ.ಈಗಾಗಲೇ ಈ ಚಿತ್ರದ ಹಾಡುಗಳು ಜನಪ್ರಿಯವಾಗಿವೆ ಎಂದರು.
ನಗರದ ಎಂ.ಜಿ.ರಸ್ತೆಯ ಶ್ರೀಕೃಷ್ಣ ಚಿತ್ರಮಂದಿರದಲ್ಲಿ ೯೦ ಬಿಡಿ ಮನೀಗ್ ನಡಿ ಸಿನಿಮಾ ತಂಡದೊAದಿಗೆ ಚಿತ್ರ ವೀಕ್ಷಿಸಿದ ನಂತರ ನಾಟಕ ನಟ ವೈಜನಾಥ್ ಬಿರಾದಾರ ಅವರನ್ನು ಅಭಿನಂದಿಸಿ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್,ವೈಜನಾಥ್ ಬಿರಾದಾರ ಅವರಿಗೂ ತುಮಕೂರಿಗೂ ಅವಿನಾಭಾವ ಸಂಬAಧವಿದೆ.ಕನ್ನಡಸೇನೆ ಸೇರಿದಂತೆ ವಿವಿಧ ಸಂಘ,ಸAಸ್ಥೆಗಳ ಕಾರ್ಯಕ್ರಮ,ಗಣಪತಿ ಉತ್ಸವಗಳ ಸಂದರ್ಭದಲ್ಲಿ ಬಂದು ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಹಣ ಪಡೆದು ಕಾರ್ಯಕ್ರಮಗಳಿಗೆ ಬರುವ ಕಲಾವಿದರು ಇವರಲ್ಲ.ಕಲೆಗಾಗಿಯೇ ಹುಟ್ಟಿ,ಬದುಕಿ,ಅದನ್ನೇ ಹಾಸು,ಹೊದ್ದು,ಉಸಿರಾಡುತ್ತಿರುವ ವ್ಯಕ್ತಿ ವೈಜುನಾಥ್ ಬಿರಾದಾರ.೭೦ನೇ ವಯಸ್ಸಿನಲ್ಲಿ ಹೀರೋ ಆಗಿ ಸಿನಿಮಾ ಮಾಡುತಿರು ವುದು ನಮ್ಮೆಲ್ಲರಿಗೂ ಖುಷಿ ತಂದಿದೆ.ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಕನ್ನಡಸೇನೆ ಹಾಗೂ ಇತರೆ ಎಲ್ಲರ ಹಾರೈಕೆಯಾಗಿದೆ ಎಂದರು.
ಹಾಸ್ಯನಟನಾಗಿ ಯಶಸ್ಸು ಪಡೆಯುವುದು ಅಷ್ಟು ಸುಲಭವಲ್ಲ.ತಮ್ಮೊಳಿಗನ ನೋವು ನುಂಗುತ್ತಲೇ ಎಲ್ಲರನ್ನು ನಗಿಸುವ ಕಲೆ ಇವರಿಗೆ ಕರಗತ.ಓ ಮಲ್ಲಿಗೆ ಸಿನಿಮಾದಲ್ಲಿ ಸಾಧು ಕೋಕಿಲ ಮತ್ತು ವೈಜುನಾಥ್ ಬಿರಾದಾರ ಅವರ ನಡುವಿನ ಹಾಸ್ಯವನ್ನು ಕನ್ನಡ ಚಲನಚಿತ್ರ ಪ್ರೇಕ್ಷಕರು ಮರೆಯಲು ಸಾಧ್ಯವೇ ಇಲ್ಲ.ಇಂತಹ ವ್ಯಕ್ತಿ ನಾಯಕನಟನಾಗಿ ಅಭಿಯಿಸುತ್ತಿರುವುದು ಖುಷಿ ತಂದಿದೆ. ೯೦ ಬಿಡಿ ಮನೀಗ್ ನಡಿ ಶತ ದಿನೋತ್ಸವ ಆಚರಿಸಲೆಂಬುದು ನಮ್ಮೆಲ್ಲರ ಹಾರೈಕೆ ಎಂದು ಧನಿಯಕುಮಾರ್ ನುಡಿದರು.
ಈ ವೇಳೆ ಕನ್ನಡಪರ ಸಂಘಟನೆಗಳ ನೇತಾಜಿ ಶ್ರೀಧರ್,ಪ್ರಸಾದ್, ಕೆ.ಎಸ್.ಸಂತೋಷ್,ಚಕ್ರವರ್ತಿ ಪ್ರಕಾಶ್,ಜಿಮ್ಮ ನಟರಾಜು, ಕೃಷ್ಣ ಟಾಕೀಸ್ ಮಾಲೀಕ ಶ್ರೀನಿವಾಸರಾವ್,ಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದುಶ್ಚಟಗಳಿಂದ ದೂರ ಇರುವಂತೆ ಸಾಮಾಜಿಕ ಸಂದೇಶ ಚಲನಚಿತ್ರ

Leave a comment
Leave a comment