ಬೆಳಧರ ಸರ್ಕಾರಿ ಶಾಲೆ ಉಳಿವಿಗಾಗಿ ಕಾಳಜಿ ಫೌಂಡೇಷನ್ ಮತ್ತು ಭೀಮ್ ಆರ್ಮಿ ಸಂಘಟನೆಯಿoದ ಇಂದು ಮೌನ ಪ್ರತಿಭಟನಾ ಮೆರವಣಿಗೆಯನ್ನು ನಗರ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಜಿಲ್ಲಾ ಪಂಚಾಯತ್ ಕಛೇರಿಯವರೆಗೆ ನಡೆಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಪ್ರಕರಣಕ್ಕೆ ಸಂಬoಧಿಸಿದoತೆ ತುಮಕೂರು ತಾಲ್ಲೂಕು, ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಹೊಂದಿಕೊಡತೆ 2 ಎಕರೆ ಜಾಗ ಗ್ರಾಮ ಠಾಣಾಗೆ ಲಗತ್ತಾಗಿದ್ದು, ರಾಜ್ಯ ಸರ್ಕಾರವು ಮಕ್ಕಳಿಗೆ ಆಟದ ಉದ್ದೇಶಕ್ಕಾಗಿ ಮಂಜೂರು ಮಾಡಿರುವ ಜಾಗವಾಗಿರುತ್ತದೆ. ಈ ಜಾಗಕ್ಕೆ ಸುಮಾರು 4 ಬಾರಿ ಸರ್ವೆ ಇಲಾಖೆಯಿಂದ ಸರ್ವೆ ಕಾರ್ಯ ಮಾಡಿ ಹದ್ದುಬಸ್ತನ್ನು ಸಹ ಮಾಡಲಾಗಿರುತ್ತದೆ ಆದರೆ ಇತ್ತೀಚೆಗೆ ಕೆಲ ತಿಂಗಳ ಹಿಂದೆ ಸದರಿ ಮೈದಾನವನ್ನು ಬೆಳಧರ ಗ್ರಾಮ ಪಂಚಾಯಿತಿಯಲ್ಲಿ ಶಾಲೆಯ ಹೆಸರಿಗೆ ಈ-ಸ್ವತ್ತನ್ನು ನಮೂದು ಮಾಡಿರುತ್ತಾರೆಂದು ಭೀಮ್ ಆರ್ಮಿ ಸಂಘಟನೆಯ ಜಿಲ್ಲಾದ್ಯಕ್ಷ ಅಯ್ಯನಪಾಳ್ಯ ಶ್ರೀನಿವಾಸ್ ಹೇಳಿದರು.
ಮುಂದುವರೆದು ಮಾತನಾಡುತ್ತಾ ಶಾಲಾ ಆಟದ ಮೈದಾನಕ್ಕೆ ಹೊಂದಿಕೊoಡoತೆ ಒಂದು ಕಲ್ಯಾಣ ಮಂಟಪವಿದ್ದು ಸದರಿ ಕಲ್ಯಾಣ ಮಂಟಪದ ಮಾಲೀಕರು ಪಂಚಾಯಿತಿಯಲ್ಲಿ ಪಶ್ಚಿಮ ದಿಕ್ಕಿಗೆ ಅನುಮತಿ ಪಡೆದು ಶಾಲೆಯ ಆಟದ ಮೈದಾನವನ್ನು ಕಬಳಿಸುವ ದುರುದ್ದೇಶದಿಂದ ಉತ್ತರಕ್ಕೆ ಬಾಗಿಲನ್ನು ಇಟ್ಟುಕೊಂಡಿದ್ದು ಸದರಿ ಆಟದ ಮೈದಾನವನ್ನೇ ಕಲ್ಯಾಣ ಮಂಟಪದ ವಾಹನ ನಿಲ್ದಾಣವನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಕಲ್ಯಾಣ ಮಂಟಪಕ್ಕೆ ಬರುವವರು ಶಾಲಾ ಕೊಠಡಿಗಳ ಆವರಣವನ್ನೇ ಕುಡುಕರ ಅಡ್ಡೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಅಷ್ಟು ಸಾಲದು ಎಂಬoತೆ ಪ್ರತಿನಿತ್ಯ ಹಲವಾರು ಮಕ್ಕಳು ಕಲ್ಯಾಣ ಮಂಟಪಕ್ಕೆ ಬಂದು ಹೋಗುವ ವಾಹನಗಳಿಗೆ ಅಡ್ಡಕ್ಕೆ ಸಿಲುಕಿ ಕ್ಷಣ ಮಾತ್ರದಲ್ಲೇ ಪ್ರಾಣಪಾಯದಿಂದ ಪಾರಾದ ನಿದರ್ಶನಗಳು ಇರುತ್ತವೆಂದು ಶ್ರೀನಿವಾಸ್ಅವರು ತಿಳಿಸಿದರು.