ಕಲ್ಲಿಗೆ ಹಾಲು ಹಾಕುವುದು, ಹಾವಿಗೆ ಹಾಲು ಕುಡಿಸುವುದು, ಮೌಢ್ಯದ ಪರಮಾವಧಿ, ಬಸವಣ್ಣನವರು ಹೇಳಿದ ಹಾಗೆ ಎನ್ನ ಕಾಲೇ ಕಂಬ,ದೇಹವೇ ದೇಗುಲ,ಶಿರವನ್ನ ಕಳಸವಯ್ಯ, ಎನ್ನುವಂತೆ ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಂಡು ಬದುಕಿದರೆ ಬದುಕು ಹಸನಾಗುತ್ತದೆ ಎಂದು,, ಇಂದು ಜೇವರ್ಗಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ #ಮಾನವ #ಬಂಧತ್ವ #ವೇದಿಕೆ ಹಾಗೂ #ದಲಿತ #ಸೇನೆ ಜೇವರ್ಗಿ ತಾಲ್ಲೂಕ ಸಮಿತಿ ನೇತೃತ್ವದಲ್ಲಿ ನಡೆದ #ಬಸವ #ಪಂಚಮಿಯ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಚಿಗರಳ್ಳಿ ಮಠದ ಸಿದ್ದ, ಬಸವ, ಕಭೀರ್ ಸ್ವಾಮೀಜಿಗಳು ಮಾತನಾಡಿದರು,, ಬಸವಣ್ಣನವರ ವಚನಗಳನ್ನು ಹೇಳಿದರೆ ಸಾಲದು ಅವರ ವಿಚಾರಗಳನ್ನು ಅಳವಡಿಸಿಕೊಂಡು ನಿಜ ಜೀವನದಲ್ಲಿ ಬಾಳಿ ಬೇರೊಬ್ಬರಿಗೆ ಆದರ್ಶ ಆಗಬೇಕು ಎಂದು ವಿಚಾರವಾದಿಗಳು,ಶರಣ ಮಾರ್ಗ ಮಾಸ ಪತ್ರಿಕೆಯ ಸಂಪಾದಕರು, ಶರಣ ಡಾ:ಶಿವರಂಜನ್ ಸತ್ಯಂಪೇಟೆ ಅವರು ವಿಶೇಷ ಉಪನ್ಯಾಸ
ನೀಡಿದರು,,, ಬಸವ ಪಂಚಮಿಯ ವಿಶೇಷ ರೀತಿಯಲ್ಲಿ ಆಚರಣೆ ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ, ನಿಮ್ಮ ಬೆಂಬಲಕ್ಕೆ ನಾವು ಸದಾ ಬೆಂಬಲವಾಗಿರ್ತಿವಿ ಎಂದು,, ಜೇವರ್ಗಿ ತಾಲೂಕಿನಲ್ಲಿ 🏡 ಮನೆಗೂ ಬಸವಣ್ಣನವರ ವಿಚಾರಗಳನ್ನು ತಲುಪಿಸುತ್ತಿರುವ ಬಸವ ಕೇಂದ್ರದ ಜೇವರ್ಗಿ ತಾಲೂಕ ಅಧ್ಯಕ್ಷರಾದ ಶ್ರೀ ಶರಣಬಸವ ಕಲ್ಲಾ, ಸರ್ ಹೇಳಿದರು,, ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಅಳವಡಿಸಿಕೊಂಡು ಅನೇಕ ಹೋರಾಟದ ಮೂಲಕ ಮತ್ತು ಇಂತಹ ಕಾರ್ಯಕ್ರಮಗಳುನ್ನು ಮಾಡುವುದರ ಮೂಲಕ ಸಂಘಟನೆಗೆ ಒಳ್ಳೆಯ ಹೆಸರಿದೆ,,, ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಕರೀಘೂಳೇಶ್ವರ ಎಂದು ನುಡಿದರು,,, ದಲಿತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾನವ ಬಂಧುತ್ವ ವೇದಿಕೆ ಜೇವರ್ಗಿ ತಾಲೂಕ ಸಂಚಾಲಕರಾದ ಶಿವಕುಮಾರ ಗೋಲಾ, ದಲಿತ ಸೇನೆ ಜೇವರ್ಗಿ ತಾಲ್ಲೂಕ ಅಧ್ಯಕ್ಷರಾದ ಶಿವಶರಣ ಮಂದೇವಾಲ, ಉಪಾಧ್ಯಕ್ಷರಾದ ಜಗದೀಶ್ ನಡಗಟ್ಟಿ, ಯುವ ಘಟಕದ ಅಧ್ಯಕ್ಷರಾದ ಖಮರ್ ಪೀರಾಸಾಬ, ಪ್ರಕಾಶ್ ಕಾಂಬಳೆ, ಭಾಗೇಶ್ ಸೊನ್ನ, ರಮೇಶ್ ಬಿರಾಳ, ಅಂಬರೀಷ್ ಬಿರಾಳ,ಭಾಗಣ್ಣ ಗೋಲಾ,ಯಮನಪ್ಪ ಗೋಲಾ, ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗದವರು, ಮತ್ತು ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಜೇವರ್ಗಿ ತಾಲೂಕಿನ #ಮಾನವ #ಬಂಧುತ್ವ #ವೇದಿಕೆ ಹಾಗೂ #ದಲಿತ #ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು ,,,