ತುಮಕೂರು : ನಗರದ ಪ್ರಮುಖ ರಸ್ತೆಗಳಾದ ಅಶೋಕ ರಸ್ತೆ, ಎಂ.ಜಿ.ರಸ್ತೆ, ಬಿ.ಎಚ್.ರಸ್ತೆ ಪಾರ್ಕಿಂಗ್ ಬಳಿ ಕೆಲವು ಮಹಿಳೆಯರಿಂದ ವೇಶ್ಯಾವಾಟಿಕೆ ನಿಲ್ಲಿಸುವಂತೆ ಅಂಬೇಡ್ಕರ್ ಸೇನೆ ವತಿಯಿಂದ ತಹಶೀಲ್ದಾರ್ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ನಗರದಲ್ಲಿ ಕೆಲವು ಮಹಿಳೆಯರು ಪ್ರಮುಖ ರಸ್ತೆಗಳು ಸೇರಿದಂತೆ, ಜನನಿಬಿಡ ಪ್ರದೇಶಗಳಲ್ಲಿ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಗುಬ್ಬಿ ವೀರಣ್ಣ ಕಲಾಕ್ಷೇತ್ರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಿಂತು ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿರುವುದು ಕಾಣಸಿಗುತ್ತಿದೆ. ಹಲವಾರು ಹೆಣ್ಣು ಮಕ್ಕಳು ಶಾಲಾ-ಕಾಲೇಜುಗಳಿಗೆ, ತಮ್ಮ ಕೆಲಸಗಳಿಗೆ ತೆರಳಲು ಬಹಳ ಮುಜುಗರ ಪಡುತ್ತಿದ್ದಾರೆ. ಕೆಲವು ಮಹಿಳೆಯರಿಂದ ಸಾವಿರಾರು ಹೆಣ್ಣುಮಕ್ಕಳನ್ನು ಹಿಂಸಾತ್ಮಕವಾಗಿ ನಡೆಸಿಕೊಳ್ಳುತ್ತಿರುವ ಪರಿಸ್ಥಿತಿ ಉದ್ಭವಿಸಿದೆ ಎಂದು ಜಿಲ್ಲಾ ಮಹಿಳಾ ಅಧ್ಯಕ್ಷರಾದ ಸುಮಾರವರು ತಿಳಿಸಿದರು.
ಯಾರೋ ಕೆಲ ಹೆಣ್ಣು ಮಕ್ಕಳು ಈ ರೀತಿಯಾದ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ಅಸಂಖ್ಯಾತ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತಿದೆ, ಆದ ಪ್ರಯುಕ್ತ ಈ ಕುರಿತು ಸಂಬoಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಉಲ್ಲೇಖಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಮಹಿಳಾ ಅಧ್ಯಕ್ಷರಾದ ಸುಮಾ, ಜಿಲ್ಲಾಧ್ಯಕ್ಷರಾದ ಕೋರಾ ರಾಜಣ್ಣ, ಲಕ್ಷ್ಮಮ್ಮ ಶೋಭಾ, ಆಶಾ, ಪದ್ಮ, ಪ್ರತೀಮ, ಮಂಜುಳ, ಶಿವರಾಜ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.