ಮತ್ತೆಂದರಿಗೆದ ಮಡಿಲು ತುಂಬುವ ಶ್ರೇಷ್ಠ ಕಾರ್ಯಕ್ರಮ ಮಾಡುವ ಮೂಲಕ ಶ್ರೀಸಿದ್ದಿವಿನಾಯಕ ಸೇವಾಮಂಡಳಿ ಕರ್ನಾಟಕದ ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.ನಗರದ ವಿನಾಯಕನಗರದಲ್ಲಿರುವ ಶ್ರೀ ಸಿದ್ದಿವಿನಾಯಕ ಸೇವಾ ಮಂಡಲಿಯಲ್ಲಿ ಭಾನುವಾರ ಸಂಜೆ ಮುತ್ತೆöÊದೆಯರಿಗೆ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿ ಮಡಿಲು ತುಂಬುವ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ತಂದೆ-ತಾಯಿ ಅಥವಾ ಅಣ್ಣ-ತಮ್ಮಂದಿರುವ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಮಡಿಲು ತುಂಬಿ ಅವರಿಗೆ ಹಾರೈಸುತ್ತಾರೆ. ಇಂತಹ ಸಂಸ್ಕೃತಿಯನ್ನು ಶ್ರೀ ಸಿದ್ಧಿವಿನಾಯಕ ಸೇವಾ ಮಂಡಲಿಯವರು ಈ ಭಾರಿ ೫೦ ಮುತ್ತೆöÊದೆಯರಿಗೆ ಶ್ರೀ ಸಿದ್ದಿವಿನಾಯಕನ ಸನ್ನಿಧಿಯಲ್ಲಿ ಸಾಮೂಹಿಕವಾಗಿ ಮಡಿಲು ತುಂಬಿ ಸಂಸ್ಕೃತಿ, ಸಂಸ್ಕಾರವನ್ನು ಮೆರೆದಿದ್ದಾರೆ ಎಂದು ಬಣ್ಣಿಸಿದರು.ಇಂತಹ ಕಾರ್ಯಕ್ರಮದಲ್ಲಿ ಪತ್ನಿಯೊಡನೆ ಭಾಗವಹಿಸುವುದು ತುಂಬಾ ಸಂತೋಷವಾಗಿದೆ. ಇಂತಹ ಸಂದರ್ಭವನ್ನು ಕಲ್ಪಿಸಿಕೊಟ್ಟಂತಹ ಸೇವಾ ಮಂಡಲಿಯವರಿಗೆ ನಾವು ಋಣಿಯಾಗುತ್ತೇವೆ. ಇತ್ತೀಚೆಗೆ ಹೆಣ್ಣುಮಕ್ಕಳು ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಇದಲ್ಲದೆ ಬ್ಯಾಂಕುಗಳಲ್ಲೂ, ಬಸ್ ನಿಲ್ದಾಣಗಳಲ್ಲೂ ಹೆಣ್ಣುಮಕ್ಕಳೇ ಹೆಚ್ಚಾಗಿ ಕಾಣುತ್ತಿದ್ದಾರೆ. ಈ ಕಾರ್ಯಕ್ರಮದಲ್ಲೂ ಸಹ ಹೆಣ್ಣುಮಕ್ಕಳದ್ದೇ ಮೇಲುಗೈ ಕಾಣುತ್ತಿದೆ. ಹೆಣ್ಣುಮಕ್ಕಳಿಗೆ ಗೌರವ ಕೊಡುವ ಸಂಪ್ರದಾಯವನ್ನು ನಾವು ರೂಢಿಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ದಿವಿನಾಯಕ ಸೇವಾ ಮಂಡಲಿ ಉಪಾಧ್ಯಕ್ಷ ಹೆಚ್.ಆರ್.ನಾಗೇಶ್ ಮಾತನಾಡಿ ಸಿದ್ದಿವಿನಾಯಕ ಸೇವಾ ಮಂಡಲಿಯಿAದ ನಡೆಯುತ್ತಿರುವ ಈ ಕಾರ್ಯಕ್ರಮ ೪೭ ವರ್ಷಗಳನ್ನು ಪೂರೈಸುತ್ತಿದೆ. ಇನ್ನೆರಡು ವರ್ಷ ಕಳೆದರೆ ೫೦ ವರ್ಷಕ್ಕೆ ತಲುಪಲಿದ್ದೇವೆ. ೧೯೭೬ ರಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರ ಧರ್ಮಪತ್ನಿಯವರು ಸಹ ನಮ್ಮ ಪೆಂಡಾಲ್ಗೆ ಬಂದು ಗಣೇಶೋತ್ಸವ ಆಶೀರ್ವಾದ ಪಡೆದುಕೊಂಡು
ಹೋಗಿದ್ದರು. ಕಳೆದ ವರ್ಷ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಧರ್ಮಪತ್ನಿಯವರೂ ಸಹ ಬಂದು ಆಶೀರ್ವಾದ ಪಡೆದುಕೊಂಡು ಹೋಗಿದ್ದರು. ಈ ವೇದಿಕೆಯಲ್ಲಿ ಅನೇಕಮಂದಿ ಚಲನಚಿತ್ರ ನಟರು, ರಾಜಕೀಯ ಗಣ್ಯಮಾನ್ಯರು, ಉದ್ಯಮಿಗಳು ಗಣೇಶೋತ್ಸವದ ಆಶೀರ್ವಾದ ಪಡೆದು ಒಳ್ಳೊಳ್ಳೆ ಸ್ಥಾನಗಳಲ್ಲಿದ್ದಾರೆ ಎಂದು ತಿಳಿಸಿದರು.ಅಕ್ಟೋಬರ್ ೧೫ ರಂದು ಬೆಳಿಗ್ಗೆ ೮ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಶ್ರೀ ಸಿದ್ಧಗಂಗಾ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಅಕ್ಟೋಬರ್ ೧೮ ರಂದು ನಡೆಯಲಿರುವ ಗಣೇಶೋತ್ಸವದ ಮೆರವಣಿಗೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ಉತ್ಸವ ಬರುವ ಮಾರ್ಗಗಳಲ್ಲಿ ತಮ್ಮ ಮನೆ ಹಾಗೂ ರಸ್ತೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಗಣೇಶೋತ್ಸವವನ್ನು ಬರಮಾಡಿಕೊಂಡು ಪೂಜೆ ಸಲ್ಲಿಸಬೇಕೆಂದು ವಿನಂತಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಟಿ.ಹೆಚ್.ಪ್ರಸನ್ನಕುಮಾರ್ ಮಾತನಾಡಿ, ಇಂದು ಸಾಮೂಹಿಕ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಮಂಡಲಿಯಿAದ ಮಾಡಿದ್ದರ ಹಿನ್ನಲೆಯಲ್ಲಿ ಇಂದು ೫೦ ಮಂದಿ ಮುತ್ತೆöÊದೆಯರಿಗೆ ಹರಿಶಿನ ಕುಂಕುಮ, ಬಳೆ, ಸೀರೆ, ಸೇರಿದಂತೆ ೧೫೦೦ ರೂ.ಗಳ ಸುಮಾರು ೨೫ ವಸ್ತುಗಳನ್ನೊಳಗೊಂಡ ಕಿಟ್ನೊಂದಿಗೆ ಮಡಿಲು ತುಂಬುವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು.ಈ ಕಾರ್ಯಕ್ರಮಕ್ಕೆ ನಮ್ಮ ಸಮಿತಿಯ ಅಧ್ಯಕ್ಷರಾದ ಜಿ.ಹೆಚ್.ಪರಮಶಿವಯ್ಯ ನವರು ಅಧ್ಯಕ್ಷತೆ ವಹಿಸಬೇಕಾಗಿತ್ತು. ಅವರ ಅನಾರೋಗ್ಯದ ಅನುಪಸ್ಥಿತಿಯಲ್ಲಿ ಅವರ ಶ್ರೀಮತಿಯವರು ಮಡಿಲು ತುಂಬುವ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು.ಮುಂದಿನ ವರ್ಷದಿಂದ ೫ ತಿಂಗಳಿನಿAದ ೮ ತಿಂಗಳ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುವುದಾಗಿ ತಿಳಿಸಿದರು.ಕಲ್ಪನ ಹಾಲಪ್ಪ ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಇಂತಹ ಕಾರ್ಯಕ್ರಮಗಳಲ್ಲಿ ನಾವು ಕಾಣಬಹುದು. ಸಿದ್ದಿವಿನಾಯಕ ಸೇವಾ ಮಂಡಲಿಯವರು ಮುತ್ತೆöÊದೆಯರಿಗೆ ಹಮ್ಮಿಕೊಂಡಿರುವ ಮಡಿಲು ತುಂಬುವ ಕಾರ್ಯಕ್ರಮ ತುಂಬಾ ಪವಿತ್ರವಾದುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಿದ್ದಿವಿನಾಯಕ ಸೇವಾ ಮಂಡಲಿ ಉಪಾಧ್ಯಕ್ಷ ಹೆಚ್.ಆರ್.ನಾಗೇಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಟಿ.ಹೆಚ್.ಪ್ರಸನ್ನಕುಮಾರ್, ಕಾರ್ಯದರ್ಶಿ ರಾಘವೇಂದ್ರ ರಾವ್, ಜಂಟಿ ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ, ಖಜಾಂಚಿ ಪ್ರಭು, ಕಲ್ಪನ ಹಾಲಪ್ಪ, ನಿರ್ದೇಶಕರಾದ ಎಂ.ಲಿAಗಪ್ಪ, ಜಿ.ಎಸ್.ಸಿದ್ದರಾಜು, ಕೆ.ನರಸಿಂಹಮೂರ್ತಿ, ಟಿ.ಆರ್ ನಟರಾಜು, ಟಿ.ಹೆಚ್.ಮಹೇಶ್, ಜಿ.ಸಿ.ವಿರುಪಾಕ್ಷ, ಡಾ.ಎಸ್.ವಿ.ವೆಂಕಟೇಶ್, ಹೇಮರಾಜು ಸಿಂಚ, ಎ.ಎಸ್.ವಿಜಯಕುಮಾರ್, ಟಿ.ಆರ್.ವೆಂಕಟೇಶ್ಬಾಬು, ಟಿ.ಕೆ.ಪದ್ಮರಾಜ್, ಎಂ.ಎನ್.ಉಮಾಶAಕರ್, ಆರ್.ಎಲ್.ರಮೇಶ್ಬಾಬು, ಡಾ.ಅನುಸೂಯ ರುದ್ರಪ್ರಸಾದ್, ರೇಣುಕಾ ಪರಮೇಶ್, ಇಂದ್ರಾಣಿ ಮತ್ತಿತರರು ಉಪಸ್ಥಿತರಿದ್ದರು.