ತುಮಕೂರು ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ಉಳಿಸಿಕೊಳ್ಳಲು ಹಾಗೂ ತುಮಕೂರು ಜಿಲ್ಲೆಯಿಂದ ರಾಮನಗರ ಜಿಲ್ಲೆಗೆ ನೀರು ಹರಿಸಲು ಉದ್ದೇಶಿಸಿರುವ ಶ್ರೀರಂಗ ಏನ ನೀರಾವರಿ ಯೋಜನೆ ಕಾಮಗಾರಿಯನ್ನು ನಿಲ್ಲಿಸುವಂತೆ ಒಂದು ವಾರದ ಗಡುವು ನೀಡಿದ್ದು, ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ಜೆ.ಸಿಬಿ ಮೂಲಕ ನಾಲೆಗೆ ಮಣ್ಣು ತುಂಬಿಸುವ ಮೂಲಕ ಹೋರಾಟವನ್ನು ಪ್ರಾರಂಭಿಸುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶ್ಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತುಮಕೂರು ಜಿಲ್ಲೆಗೆ ನಿಗಧಿಯಾಗಿರುವ ನೀರನ್ನು ರಾಮನಗರ ಜಿಲ್ಲೆಗೆ ಹರಿಸಿಕೊಳ್ಳಲು ಜಾರಿಗೊಳಿಸಿರುವ ಯೋಜನೆಯನ್ನು ಮೇ 15ರೊಳಗೆ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಮೇ 16 ರಿಂದ ಸದರಿ ನಾಲೆಯನ್ನು ಮುಚ್ಚಲು ಜಿಲ್ಲೆಯ ಜನನಾಯಕರು, ರೈತರು, ಸಾರ್ವಜನಿಕರು ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಹೋರಾಟ ಹಮ್ಮಿಕೊಂಡಿರುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಗೆಲುವಿಗಾಗಿ ಈ ಯೋಜನೆ ರೂಪುಗೊಂಡಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ನೀರಿನ ಪ್ರಮಾಣವನ್ನು ನಿಗಧಿಪಡಿಸದೆ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲು ಸಮಂಜಸವಲ್ಲ. ಜಿಲ್ಲೆಯ ಜನರಿಗೆ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಕೆಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪೈಪ್ ಲಾಬಿ ಮೂಲಕ ಹಣ ಲೂಟಿ ಮಾಡಲು ಈ ಯೋಜನೆ ರೂಪಿಸಿದ್ದು, ಇದರ ವಿರುದ್ಧ ಜಿಲ್ಲೆಯ ಇಬ್ಬರು ಪ್ರಭಾವಿ ಸಚಿವರು ಮೌನವಾಗಿದ್ದು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಜಿಲ್ಲೆಯ 38 ಮಠಾಧೀಶರು ಈ ಹೋರಾಟಕ್ಕೆ ಬೆಂಬಲ ನೀಡಿದ್ದು, ಜಿಲ್ಲೆಯ 30 ಲಕ್ಷ ಜನ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಮಾಜಿ ಶಾಸಕ ಹೆಚ್.ನಿಂಗಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಇವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮುಖಂಡರಾದ ಶಿವಕುಮಾರ್, ದಿಲೀಪ್ಕುಮಾರ್, ಕುಂಬಯ್ಯ, ಪಂಚಾಕ್ಷರಯ್ಯ, ಡಾ. ಸಂಜಯ್ನಾಯಕ್, ಪ್ರಭಾಕರ್, ಕೆ.ಪಿ.ಮಹೇಶ್, ಲೋಕೇಶ್, ಗಂಗಣ್ಣ, ಸೌಮ್ಯ, ಪುಟ್ಟಕಾಮಣ್ಣ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ನಿಗಧಿಯಾಗಿರುವ ನೀರನ್ನು ರಾಮನಗರ ಜಿಲ್ಲೆಗೆ ಹರಿಸಿಕೊಳ್ಳಲು ಜಾರಿಗೊಳಿಸಿರುವ ಯೋಜನೆ
Leave a comment
Leave a comment