ತುಮಕೂರು ತಾಲ್ಲೂಕು ಮತ್ತು ನಗರ ಸವಿತಾ ಸಮಾಜದ ವತಿಯಿಂದ ಇಂದು ಜಿಲ್ಲಾ ಸವಿತಾ ಸಮಾಜದ ಆವರಣದಲ್ಲಿ ಸಭೆಯನ್ನು ನಡೆಸಿ ಹೊರ ರಾಜ್ಯಗಳಿಂದ ಆಗಮಿಸಿ ನಮ್ಮ ರಾಜ್ಯದಲ್ಲಿ ಆಗಮಿಸ ನಮ್ಮ ಕುಲ ಕಸಬನ್ನು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅಧ್ಯಕ್ಷರಾದ ಕಟ್ವೆಲ್ ರಂಗನಾಥ್ರವರು ತಿಳಿಸಿದ್ದಾರೆ.ಕೋವಿಡ್ ನಂತರ ನಮ್ಮ ಕರ್ನಾಟಕ ರಾಜ್ಯದೊಳಗೆ ಬಿಹಾರ, ಉತ್ತರಪ್ರದೇಶ, ಬಾಂಗ್ಲದೇಶ ಸೇರಿದಂತೆ ನಮ್ಮ ದೇಶದ ಉತ್ತರಭಾಗದ ಕಡೆಯಿಂದ ಆಗಮಿಸಿ ಕೆಲವರು ಸಲೂನ್ಗಳನ್ನು ತೆರೆದಿದ್ದಾರೆ, ಇನ್ನೂ ಕೆಲವರು ಸಲೂನ್ಗಳಲ್ಲಿ ಕೆಲಸ ನಿರ್ವಹಿಸುತ್ತಾ ಬರುತ್ತಿದ್ದಾರೆ, ಇವರುಗಳು ಬರೀ ಅವರ ಪಾಡಿಗೆ ಕೆಲಸ ನಿರ್ವಹಿಸುತ್ತಿದ್ದರೆ ಯಾವುದೇ ರೀತಿಯಾದ ಸಮಸ್ಯೆಗಳು ಆಗುತ್ತಿರಲಿಲ್ಲ, ಇವರುಗಳು ಇಲ್ಲಿನ ಜನರಿಗೆ ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುವುದಲ್ಲದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಕಣ್ಣಿಗೆ ಕಾಣದಂತೆ ನಿರ್ವಹಿಸುತ್ತಿದ್ದಾರೆ ಎಂಬ ಸಂಶಯವು ಮೂಡಿದೆ ಎಂದರು.ಜೊತೆಗೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರನ್ನೊಳಗೊಂಡAತೆ ಹಲವಾರು ಜನರು ನಮ್ಮ ಸಮಾಜದ ಗಮನಕ್ಕೆ ಹೊರ ರಾಜ್ಯಗಳಿಂದ ಬಂದು ನಮ್ಮ ಕಸುಬನ್ನು ಮಾಡುತ್ತಿರುವವರ ವಿರುದ್ಧ ಸಾಕಷ್ಠು ದೂರುಗಳು ಬರುತ್ತಿರುವುದರ ಪ್ರಯುಕ್ತ ಇಂದು ಸಭೆ ಸೇರಿ ಎಲ್ಲರ ಸಹಮತದೊಂದಿಗೆ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಅದರಂತೆ ಇನ್ಮುಂದೆ ಯಾವುದೇ ವ್ಯಕ್ತಿಯು ಹೊರ ರಾಜ್ಯದಿಂದ ಬಂದು ಸ್ಥಳೀಯವಾಗಿ ಸಲೂನ್ ತೆರೆಯುವುದಾಗಲೀ, ಸಲೂನ್ಗಳಲ್ಲಿ ಕೆಲಸ ನಿರ್ವಹಿಸುವುದಾಗಲೀ ಮಾಡಬೇಕಾದರೆ ಮೊಟ್ಟಮೊದಲನೆಯದಾಗಿ ಸ್ಥಳೀಯ ಸವಿತಾ ಸಮಾಜಕ್ಕೆ ಭೇಟಿ ನೀಡಿ, ತಮ್ಮ ಮೂಲ ದಾಖಲಾತಿಗಳನ್ನು ಹಾಗೂ ಸ್ಥಳೀಯ ಸಂಸ್ಥೆ ನಿಗಧಿಪಡಿಸಿರುವ ಕೆಲವು ಅರ್ಜಿ ಫಾರಂಗಳನ್ನು ಭರ್ತಿ ಮಾಡಿ, ಇಲ್ಲಿ ನೋಂದಾಯಿಸಿಕೊAಡು ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ ಎಂದು ತಿಳಿಸಿದರು.ಮುಂದುವರೆದು ಅಧ್ಯಕ್ಷರು ಮಾತನಾಡುತ್ತಾ ಇವರು ಇಲ್ಲಿ ದೀರ್ಘಕಾಲವಾಗಿ ಕಾರ್ಯನಿರ್ವಹಿಸದೇ ಅಲ್ಪ ಸಮಯ ಮಾತ್ರ ಕಾರ್ಯನಿರ್ವಹಿಸಿ, ಕೆಲ ಅಹಿತಕರ ಘಟನೆಗಳಲ್ಲಿ ಭಾಗಿಗಳಾಗಿ, ಇನ್ನೂ ಕೆಲವರು ಸ್ಥಳೀಯರೊಂದಿಗೆ ಗಲಾಟೆ, ಗದ್ದಲಗಳನ್ನು ಮಾಡಿಕೊಂಡು ಪರ ಸ್ಥಳಗಳಿಗೆ ಪರಾರಿಯಾಗುತ್ತಿದ್ದಾರೆ, ಇಂತಹ ಘಟನೆಗಳು ನಡೆಯಬಾರದು ಎಂಬ ಸದುದ್ದೇಶದಿಂದ ಈ ರೀತಿಯಾದ ನಿಯಮಗಳನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.