ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ಅವರ ವಿಶೇಳಕರ್ತವ್ಯಾಧಿಕಾರಿಯಾಗಿ ಪಶು ವೈದ್ಯಕೀಯ ಸಂಘದರಾಜ್ಯಾಧ್ಯಕ್ಷಡಾ.ನಾಗಣ್ಣಅವರನ್ನು ನೇಮಕಗೊಳಿಸಿ ಸರ್ಕಾರಆದೇಶ ಹೊರಡಿಸಿದೆ.
ತುಮಕೂರುತಾಲ್ಲೂಕು ಪಂಚಾಯತಿಕಾರ್ಯನಿರ್ವಹಣಾಧಿಕಾರಿಯಾಗಿ ಮತ್ತುಜಿಲ್ಲಾ ಪಶುಪಾಲನಾ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಡಾ.ನಾಗಣ್ಣ ಮೂಲತಃ ಸಿರಾ ತಾಲ್ಲೂಕಿನವರಾಗಿದ್ದು, ಇದೀಗ ವಿಶೇಳಕರ್ತವ್ಯಾಧಿಕಾರಿಯಾಗಿ ನೇಮಕವಾದ ಬೆನ್ನಲ್ಲೆಡಾ.ನಾಗಣ್ಣಅವರ ಅಭಿಮಾ£ಗಳು ಹಾಗೂ ಹಿತೈಷಿಗಳು ಸ್ನೇಹಿತರಲ್ಲಿ ಸಂತಸ ಮನೆ ಮಾಡಿದ್ದು ಈ ಹಿನ್ನೆಲೆಯಲ್ಲಿ ನಗರದ ಹನುಮಂತಪುರದ ಡಾ.ಕೆ.ನಾಗಣ್ಣ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ £ರ್ಮಾಣವಾಗಿದ್ದು ಸಮಾಜ ಸೇವಕ ಡಾ.ಕೆ.ನಾಗಣ್ಣ ಅಭಿಮಾನಿ ಬಳಗದ ಸದಸ್ಯರು ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ದಲಿತಪರ ಚಿಂತಕ ಕೊಟ್ಟಶಂಕರ್, ಸ್ವಾಭಿಮಾನಿ ದಲಿತ ಸಂಘಟನೆಯ ಬಂಡೆಕುಮಾರ್, ಮರಳೂರು ನಾಗಣ್ಣ, ಮಾಜಿ ಉಪ ಮೇಯರ್ ವೆಂಕಟೇಶ್ಗೌಡ, ಯುವ ಉದ್ಯಮಿ ಮೋಹನ್ಕುಮಾರ್ ಕೆ.ಎಸ್, ಕೋಟ್ರೇಶ್, ಸುಶೀಲ್ ಕುಮಾರ್, ಪ್ರವೀಣ್, ವಕೀಲರಾದಗಂಗಧಾರ್, ಮಂಜುನಾಥ್, ಮುರ್ಗನ್, ಅರುಣ್, ಜಿಲ್ಲಾಕಾಂಗ್ರೆಸ್ ಸೇವಾದಳ ಬ್ರಹ್ಮಾನಂದರೆಡ್ಡಿ ಸೇರಿದಂತೆಇತರರು ಉಪಸ್ಥಿತರಿದ್ದರು.
ಗೃಹ ಸಚಿವರ ವಿಶೇಳಕರ್ತವ್ಯಾಧಿಕಾರಿಯಾಗಿಡಾ.ಏ ನಾಗಣ್ಣ ನೇಮಕ

Leave a comment
Leave a comment