ತುಮಕೂರು:ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆ ಇವರನ್ನು ಪಕದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಹಿರಿಯರ ಹಬ್ಬದ ರೀತಿ ಸ್ವಾತಂತ್ರ ಹೋರಾಟಗಾರರ ಸ್ಮರಣೆ ಕಾರ್ಯಕ್ರಮ ನಡೆಯಬೇಕು ಎಂದು ತುಮಕೂರು ಜಿಲ್ಲಾ ಸ್ವಾತಂತ್ರ ಹೋರಾಟಗಾರರ ಸಂಘ ಹಾಗೂ ಉತ್ತರಾಧಿಕಾರಿಗಳ ಸಂಘದ ಕಾರ್ಯಾಧ್ಯಕ್ಷರಾದ ಆಶಾ ಪ್ರಸನ್ನಕುಮಾರ್ ತಿಳಿಸಿದ್ದಾರೆ.ನಗರದ ಬಾಪೂಜಿ ಸಭಾಂಗಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆವತಿಯಿoದ ಆಯೋಜಿಸಿದ್ದ ಜಿಲ್ಲೆಯ ಸ್ವಾತಂತ್ರ ಹೋರಾಟಗಾರರ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಸಂಘದ ವತಿಯಿಂದ ಪ್ರತಿವರ್ಷ ವಿಜಯದಶಮಿಯ ದಿನದಂದು ಸ್ವಾತಂತ್ರ ಹೋರಾಟಗಾರರ ಸಂಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದರು.ನಮ್ಮ ತಾತ ಬಿ.ಸಿ.ನಂಜುoಡಯ್ಯ ಹಾಗೂ ಅಜ್ಜಿಯವರು ಸ್ವಾತಂತ್ರ ಹೋರಾಟಗಾರರಿದ್ದರು. ಅನೇಕ ಗುಪ್ತ ಸಭೆಗಳು ನಮ್ಮ ಮನೆಯಲ್ಲಿ ನಡೆದಿದ್ದವು ಎಂಬುದನ್ನು ಆಗಾಗ್ಗೆ ತಿಳಿಸುತಿದ್ದರು.ಇಂತಹ ಹೋರಾಟಗಾರರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಸರಕಾರ, ಸಂಘ ಸಂಸ್ಥೆಗಳು ಸೇರಿ, ನಗರದಲ್ಲಿರುವ ವೃತ್ತಗಳಿಗೆ, ರಸ್ತೆಗಳಿಗೆ ಅವುಗಳ ಹೆಸರು ಇಡುವ ಮೂಲಕ, ಅವರುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಹಾಗೆಯೇ ತುಮಕೂರು ನಗರದಲ್ಲಿರುವ ವೀರಸೌಧದಲ್ಲಿ ಜಿಲ್ಲೆಯ 34 ಸ್ವಾತಂತ್ರ ಹೋರಾಟಗಾರರಿಗೆ ಸಂಬoಧಿಸಿದ ಭಾವಚಿತ್ರ ಮತ್ತು ಹೋರಾಟದ ವಿವರಗಳನ್ನು ಒಳಗೊಂಡ ಪ್ಲಕ್ಸ್ ಅಥವಾ ಪೋಟೋ ಆಳವಡಿಸುವ ಮೂಲಕ ವೀರಸೌಧವನ್ನು ಸ್ವಾತಂತ್ರ ಹೋರಾಟಗಾರರ ಚಿರಸ್ಮರಣಿಯ ಕೇಂದ್ರವಾಗಿ ರೂಪಿಸಬೇಕೆಂದು ಆಶಾ ಪ್ರಸನ್ನಕುಮಾರ್ ತಿಳಿಸಿದರು.