ವೆಚ್ಚ ವೀಕ್ಷಕರುಗಳೊಂದಿಗೆ ಸಭೆ
ತುಮಕೂರು(ಕ.ವಾ) ಏ.೧೫: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ೨೦೨೩ರ ಸಂಬAಧ ಜಿಲ್ಲೆಗೆ ಆಗಮಿಸಿರುವ ವೆಚ್ಚ ವೀಕ್ಷಕರುಗಳೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ವೈ.ಎಸ್.ಪಾಟೀಲ ಅವರು ನಿನ್ನೆ ಸಭೆ ನಡೆಸಿ ಚರ್ಚಿಸಿದರು.
ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಗೆ ಆಗಮಿಸಿರುವ ವೆಚ್ಚ ವೀಕ್ಷಕರುಗಳಾದ ಐಆರ್ಎಸ್ ಅಧಿಕಾರಿಗಳಾದ ತ್ಸೆರಿಂಗ್ ಜೋರ್ಡನ್ ಬುಟಿಯಾ, ರೆಂದಮ್ ವೆಂಕಪ್ರಧಾಮೇಶ್ಭಾನು, ನವಾಬ್ ಸಿಂಗ್, ಮಾಯಾಂಕ್ ಶರ್ಮ, ಯಾಸರ್ ಅರಾಫತ್, ಎಂ.ಸ್ವಾಮಿನಾಥನ್ ಮತ್ತು ಸತೇಂದ್ರಸಿAಗ್ಮೆಹರಾ ಅವರುಗಳನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸ್ವಾಗತಿಸಿ ಜಿಲ್ಲೆಯ ಸಮಗ್ರ ಪರಿಚಯ ನೀಡಿದರು.
ಜಿಲ್ಲೆಯಲ್ಲಿ ಒಟ್ಟು ೧೧ ವಿಧಾನ ಸಭಾ ಕ್ಷೇತ್ರಗಳಿದ್ದು, ೨೬೮೩ ಮತಗಟ್ಟೆಗಳಿದ್ದು, ೧೧೧೭೮೬೬ ಪುರುಷ, ೧೧೨೨೮೮೦ ಮಹಿಳಾ, ಇತರೆ ೬ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ ಏಪ್ರಿಲ್ ೧೪ಕ್ಕೆ ಒಟ್ಟು ೨೨೪೦೮೫೨ ಮತದಾರರಿದ್ದಾರೆ ಎಂದು ವಿವರಿಸಿದರು. ಈ ಪೈಕಿ ಕೊರಟಗೆರೆ ಮತ್ತು ಪಾವಗಡ ಪ.ಜಾತಿ ಮೀಸಲಾತಿ ಕ್ಷೇತ್ರವಾಗಿದ್ದು, ಉಳಿದೆಲ್ಲವೂ ಸಾಮಾನ್ಯ ವರ್ಗಕ್ಕೆ ಸೇರಿರುತ್ತವೆ ಎಂದು ವಿವರಿಸಿದರು.
ಜಿಲ್ಲೆಯ ೧೧ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೧೧ ಆರ್.ಓ.ಗಳು ಹಾಗೂ ೧೨ ಎಆರ್ಓಗಳು(ತು.ನಗರ/ಗ್ರಾ) ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದ ಜಿಲ್ಲಾ ಚುನಾವಣಾಧಿಕಾರಿಗಳು, ಅಂತರರಾಜ್ಯ ೧೨, ಅಂತರಜಿಲ್ಲಾ ೧೭ ಸೇರಿದಂತೆ ಒಟ್ಟು ೪೫ ಚೆಕ್ಪೋಸ್ಟ್ಗಳನ್ನು ಜಿಲ್ಲೆಯಲ್ಲಿ ತೆರೆಯಲಾಗಿದ್ದು, ಒಟ್ಟು ೨೩೨ ಸೆಕ್ಟರ್ ಅಧಿಕಾರಿಗಳು, ೧೮ ಎಇಓ, ೧೮ ಅಕೌಂಟಿAಗ್ ಟೀಮ್, ೪೫ ಎಸ್ಎಸ್ಟಿ, ೫೨ ಎಫ್ಎಸ್ಟಿ, ೨೬ ಇಎಸ್ಟಿ ಮತ್ತು ೧೧ ವಿವಿಟಿ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಇದುವರೆವಿಗೂ ಜಿಲ್ಲೆಯಲ್ಲಿ ಎಂಸಿಸಿ ಮತ್ತು ಕೇಬಲ್ ಆಪರೇಟರ್, ಪ್ರಿಂಟರ್ಗಳ ಸಭೆ, ಎಸ್ಎಸ್ಟಿ, ಎಫ್ಎಸ್ಟಿ, ಲೆಕ್ಕಪತ್ರ, ಚುನಾವಣಾ ವೆಚ್ಚ ಇತ್ಯಾದಿ ಸೇರಿದಂತೆ ಚುನಾವಣೆಗೆ ಸಂಬAಧಿಸಿದ ಬಹುತೇಕ ಎಲ್ಲಾ ತರಬೇತಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೨೯-೩-೨೦೨೩ ರಿಂದ ೧೪-೪-೨೦೨೩ರವರೆಗೆ ಒಟ್ಟು ೯೨೦೮೨೦೯ ಮೊತ್ತದ ೩೩೭೬೩.೫೪ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ೮೧,೩೩,೦೦೦ ನಗದು ವಶಪಡಿಸಿಕೊಳ್ಳಲಾಗಿದೆ ಹಾಗೂ ೬೩,೧೧,೩೧೨ ಮೊತ್ತದ ಉಚಿತ ಉಡುಗೊರೆಗಳಾದ ೭೨೦ ಎಲ್ಇಡಿ ಬಲ್ಬ್, ೨೩೨೧ ಸೀರೆ, ಬಟ್ಟೆ, ಗೃಹೋಪಯೋಗಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ ೧೪ರವರೆಗೆ ಬಿಜೆಪಿ ಪಕ್ಷಕ್ಕೆ ೫,೧೭,೩೭೪ ರೂ., ಐಎನ್ಸಿ ಪಕ್ಷಕ್ಕೆ ೮,೨೦,೦೫೫ ರೂ., ಜೆ.ಡಿ.ಎಸ್. ಪಕ್ಷಕ್ಕೆ ೧೦,೯೪,೨೧೬ ರೂ. ಹಾಗೂ ಇತರೆ ಪಕ್ಷಗಳಿಗೆ ೭೧೦ ಸೇರಿದಂತೆ ಒಟ್ಟಾರೆ ೨೪,೩೨,೩೫೫ ರೂ.ಗಳನ್ನು ವಿವಿಧ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ: ಕೆ. ವಿದ್ಯಾಕುಮಾರಿ, ಪಾಲಿಕೆ ಆಯುಕ್ತ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಸೇರಿದಂತೆ ೧೧ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.
ಜಿಲ್ಲೆಗೆ ಆಗಮಿಸಿರುವ ವೆಚ್ಚ ವೀಕ್ಷಕರುಗಳೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಸಭೆ

Leave a comment
Leave a comment