ತುಮಕೂರು: ನಗರದ ವಿಲಾಸಿ ಗ್ರಾಂಡ್ ಹೋಟೆಲ್ನಲ್ಲಿ ವೃತ್ತಿ ನಿರತ ಜಿಲ್ಲಾ ಲ್ಯಾಂಡ್ ಡೆವಲಪ್ರ್ಸ್ ಅಸೋಸಿಯೇಷನ್ ವತಿಯಿಂದ ಎಲ್ಲಾ ಖಾಸಗಿ ವೃತ್ತಿ ನಿರತ ಬಡಾವಣೆಗಳನ್ನು ರಚಿಸುತ್ತಿರುವ ಲ್ಯಾಂಡ್ ಡೆವಲಪ್ರ್ಸ್ಗಳ ಸಭೆ ನಡೆಯಿತು.
ಸಭೆಯಲ್ಲಿ ಲ್ಯಾಂಡ್ ಡೆವಲಪ್ರ್ಸ್ ಗಳಿಗೆ ಆಗುತ್ತಿರುವ ತೊಂದರೆಗಳು ಹಾಗೂ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು.
ಸಂಬAಧಪಟ್ಟ ಇಲಾಖೆಗಳಿಂದ ಬರುವಂತಹ ತೊಂದರೆಗಳ ಬಗ್ಗೆ, ಅಸೋಸೊಯೇಷನ್ನಲ್ಲಿ ಲೀಗಲ್ ಸೆಲ್ ತೆಗೆಯುವ ಬಗ್ಗೆ, ಖರೀದಿದಾರರು ಹಾಗೂ ಮಾರಾಟಗಾರರಿಗೆ ಮಾಹಿತಿ ಕೊಡುವ ಕಾರ್ಯಗಾರ, ಹೊಸ ಹೊಸ ಚಿಂತನ ಮಂಥನಗಳು ಹಾಗೂ ಮಾರ್ಗದರ್ಶನದ ಮಾಹಿತಿಗಳನ್ನು ತಿಳಿಸುವುದು ಸೇರಿದಂತೆ ಕೆಲವು ಇಲಾಖೆಗಳಿಂದ ಆಗುವ ವಿಳಂಬ ನೀತಿಯ ವಿಷಯಗಳನ್ನು ಅಮೂಲಾಗ್ರವಾಗಿ ಸದಸ್ಯರು ಚರ್ಚೆ ನಡೆಸಿ ಸರ್ಕಾರದ ಗಮನಕ್ಕೆ ತರುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯಕಾರಣಿ ಮಂಡಳಿ ರಚನೆ
ಅವಿರೋಧವಾಗಿ ಕಾರ್ಯಕಾರಣಿ ಮಂಡಳಿಯನ್ನು ರಚಿಸಿದ್ದು ಈ ಕೆಳಕಂಡವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ, ಬಿ.ಎಸ್.ನಾಗೇಶ್ (ಬಾವಿಕಟ್ಟೆ ನಾಗಣ್ಣ), ಅಧ್ಯಕ್ಷರಾಗಿ.ಎಸ್.ಪಿ.ಚಿದಾನಂದ್, ಉಪಾಧ್ಯಕ್ಷರಾಗಿ ವಾಲೆಚಂದ್ರಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ರವೀಶ್ ಅರಕೆರೆ, ಖಜಾಂಚಿಯಾಗಿ ಸನತ್ಕುಮಾರ್ ಟಿ.ಜೆ. ಅವರನ್ನು ಆಯ್ಕೆ ಮಾಡಲಾಗಿದೆ.
ನಿರ್ದೇಶಕರುಗಳಾಗಿ ಸೈಯದ್ ರಿಜ್ವಾನ್ ಉಲ್ಲಾ, ಕೆ.ಜಿ. ಹನುಮಂತರಾಜು (ಬಾಬು), ಜೆ.ಎಸ್.ಅನಿಲ್ ಕುಮಾರ್, ಶಶಿಕುಮಾರ್, ಅನ್ವರ್ ಅಹಮ್ಮದ್, ಪಂಚಾಕ್ಷರಯ್ಯ, ಉತ್ತಮ್ ಕುಮಾರ್, ಪೃಥ್ವಿ ಪ್ರಸಾದ್, ಧರ್ಮರಾಜು, ಟಿ.ಆರ್.ಮಹೇಶ್, ಶೇಷಾಚಲಂ ಆಯ್ಕೆಯಾಗಿದ್ದಾರೆ.
ಬಡಾವಣೆಗಳನ್ನು ರಚಿಸುತ್ತಿರುವ ಲ್ಯಾಂಡ್ ಡೆವಲಪ್ರ್ಸ್ಗಳ ಸಭೆ
Leave a comment
Leave a comment