ಕಲ್ಬುರ್ಗಿ ನಗರದ ಕೋಟೆ ಪಕ್ಕದಲ್ಲಿರುವ ಕೆರೆಯಲ್ಲಿ ವ್ಯಕ್ತಿ ಶವ ಪತ್ತೆ
ರಾಣಪ್ಪ ತಂದೆ ಅಂಬಾರಾಯ ಸನೇಗಾರ್ ವಯಸ್ಸು: 60 ಮೂಲತಃ ಕಲ್ಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ಕಡಗಂಚಿ ಗ್ರಾಮದವನಾಗಿದ್ದಾನೆ ಎಂದು ತಿಳಿದು ಬಂದಿದೆ…
ಈ ಸಾವಿನ ಬಗ್ಗೆ ಇನ್ನೂ ಕೂಡ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ… ಈ ಮಾಹಿತಿ ತಿಳಿಯುತ್ತಿದ್ದಂತೆ ಚೌಕ್ ಪೊಲೀಸ್ ಠಾಣೆಯ ಪಿ.ಎಸ್.ಐ ಶಶಿಕಲಾ ನಿರ್ಮಲ್ಕರ್ ಹಾಗೂ ಡಿವೈಎಸ್ಪಿ ಸಂತೋಷ್ ಬೆನ್ನಟ್ಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿ ನೀರಲ್ಲಿ ಬಿದ್ದ ಶವವನ್ನು ಹೊರ ತೆಗೆದರು.
ಈ ಪ್ರಕರಣ ಕುರಿತಂತೆ ಚೌಕ ಪೊಲೀಸ್ ಠಾಣೆ ಕಲಬುರ್ಗಿಯಲ್ಲಿ ಪ್ರಕರಣ ದಾಖಲಾಗಿದೆ…