ತುಮಕೂರು: ಪತ್ರಕರ್ತ ತನ್ನ ವೃತ್ತಿಧರ್ಮವನ್ನು ಪಾಲಿಸುತ್ತಾ ಸಮಾಜದ ಒಳಿತಿಗಾಗಿ ಚಿಂಸುತ್ತಿರಬೇಕು. ಲೇಖನಿಯಿಂದ ರಚಿತ ಪದಗಳು ಸಮಾಜಮುಖಿಯಾಗಿರಬೇಕು ಎಂದು ಹಿರಿಯ ಪತ್ರಕರ್ತಆರ್. ಕಾಮರಾಜ್ ಅಭಿಪ್ರಾಯಪಟ್ಟರು.
ಅವರು ಶನಿವಾರ ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮದ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟಿçÃಯ ಗ್ರಂಥಾಲಯ ಸಪ್ತಾಹ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಜಿದ್ಖಾನ್ ಅವರ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇಂದಿನ ದಿನಮಾನದಲ್ಲಿ ರೈತರು ಕಾರ್ಮಿಕರಿಗೆ ನೆರವಾಗುವ ರೀತಿಯಲ್ಲಿ ಮಾದ್ಯಮಗಳು ತನ್ನ ಕಾರ್ಯವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸಬೇಕಿದೆ. ಸಮಾಜದ ಒಳಿತಿಗೆ ಸೇವೆಗೈಯ್ಯಬೇಕಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ವಾಜಿದ್ಖಾನ್, ಗ್ರಂಥಾಲಯಗಳು ಭಾಷಾ ಮತ್ತು ಸಾಹಿತ್ಯದ ಕಣಜಗಳಿದ್ದಂತೆ. ತಾಯಿ ಮಾತನಾಡುವುದನ್ನು ಕಲಿಸದರೆ, ಪುಸ್ತಕಗಳು ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸುತ್ತವೆ ಎಂದರಲ್ಲದೇ, ನನ್ನಲ್ಲಿನ ಅಲ್ಪಸ್ವಲ್ಪ ಸಾಹಿತ್ಯಾಸಕ್ತಿಗೆ ಈ ಗ್ರಂಥಾಲಯವೇ ಮೊದಲ ಆಕರ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಗತಿಪರ ಕೃಷಿಕ, ಹಿರಿಯ ಪತ್ರಕರ್ತ ಪದ್ಮರಾಜ್, ಗ್ರಾಮದಲ್ಲಿ ಕಳೆದ ೨೫ ವರ್ಷಗಳಿಂದ ಊರಿನ ಸಾಧರನ್ನು ಸನ್ಮಾನಿಸುವ ಪದ್ಧತಿ ನಡೆದು ಬಂದಿದೆ. ಇಲ್ಲಿಯ ವರೆಗೆ ಗ್ರಾಮದ ಸುಮಾರು ೪೦ಕ್ಕೂ ಹೆಚ್ಚು ಮಂದಿಯನ್ನು ಗೌರವಿಸಲಾಗಿದೆ. ಮುಂದೆಯೂ ಕೂಡ ಇಂಥಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಊರಿನ ಗೌರವ ಹೆಚ್ಚಿಸುವ ಸಾಧಕರನ್ನು ಸತ್ಕರಿಸುವ ಕಾರ್ಯ ಸಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ ಅವರು ಗ್ರಂಥಾಲಯಗಳ ಹಿರಿಮೆ ಕುರಿತು ಮಾತನಾಡಿದರು. ಸನ್ಮಾನಿತರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶ್ರಮಿಕ ಸಿರಿ ಸಂಘದ ಖಜಾಂಚಿ ಜುಂಜರಾಮನಹಳ್ಳಿ ಜನಾರ್ಧನ್, ಸಮಾಜ ಸೇವಕ ಮರೆನಾಯಕನಹಳ್ಳಿ ಕೃಷ್ಣಪ್ಪ, ಹಳ್ಳಿಸಿರಿ ಶ್ರೀಮತಿ ಮಂಜಮ್ಮ, ಯುವ ಮುಖಂಡ ವಿನಯ್ ನಂದಿಹಳ್ಳಿ, ನಿ. ಶಿಕ್ಷಕ ಜಯರಾಮ್ ಹಾಗೂ ಮಹಿಳಾ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ಗ್ರಂಥಪಾಲಕರಾದ ಟಿ.ಎಲ್.ಸಿದ್ದಗಂಗಣ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪತ್ರಕರ್ತ ಸಮಾಜಮುಖಿಯಾಗಿರಬೇಕು
Leave a comment
Leave a comment