ತುಮಕೂರು:ಶಿಕ್ಷಣ ಮಕ್ಕಳ ಮನಸ್ಸು ಗೆದ್ದಾಗ ಮಾತ್ರ,ಅವರನ್ನು ಸಾಧನೆಗೆ ಮೆಟ್ಟಿಲಿನ ಕಡೆಗೆ ಕರೆದುಕೊಂಡು ಹೋಗಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದ ಏಂಪ್ರೆಸ್ ಶಾಲೆಯ ಆಡಿಟೋರಿಯಂ ನಲ್ಲಿ ಡಿ.ಟಿ.ಶ್ರೀನಿವಾಸ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡುತಿದ್ದ ಅವರು,ಇಂದಿನ ಮಕ್ಕಳು ನಮಗಿಂತಲೂ ಹೆಚ್ಚು ಬುದ್ದಿವಂತರಿದ್ದಾರೆ.ಆಯಾಯ ದಿನದ ಅಪ್ಡೇಟ್ಗಳೊಂದಿಗೆ ಕ್ಲಾಸ್ರೂಮ್ಗೆ ತೆರಳದಿದ್ದರೆ,ಪೇಚಿಗೆ ಸಿಲುಕುವ ಸಾಧ್ಯತೆಯೇ ಹೆಚ್ಚು.ಹಾಗಾಗಿ ಶಿಕ್ಷಕರು ನಿರಂತರ ಅಭ್ಯಾಸದಲ್ಲಿ ತೊಡಗುವ ಅನಿವಾರ್ಯತೆ ಇದೆ ಎಂದರು.
ತುಮಕೂರು ಜಿಲ್ಲೆಯ ಅನೇಕ ಹಿರಿಯರು ನಾನು ಬೆಂಗಳೂರು ವಿವಿಯ ಜ್ಞಾನಭಾರತಿಯಲ್ಲಿ ವಿದ್ಯಾರ್ಥಿ ನಾಯಕನಾಗಿದ್ದ ದಿನಗಳಿಂದಲೂ ಪರಿಚಿತರು.ಹಾಗಾಗಿ ತುಮಕೂರು, ಬೆಂಗಳೂರು ನಡುವೆ ಅಂತಹ ವ್ಯೆತ್ಯಾಸವಿಲ್ಲ. ಜೊತೆಗೆ ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಶಿಕ್ಷಕರ ಸಮಸ್ಯೆಯ ಜೊತೆಗೆ,ಒಂದು ಶಾಲೆಯ ಆಡಳಿತ ಮಂಡಳಿಯವರಾಗಿ ಎಲ್ಲಾ ಸಮಸ್ಯೆಗಳನ್ನು ಅರಿತಿದ್ದು,ಅವರು ಗೆಲ್ಲುವುದರಿಂದ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ನನಗೊಬ್ಬ ದಕ್ಷ ಹೋರಾಟಗಾರ ಸಿಕ್ಕಂತಾಗುತ್ತದೆ.ಇoಜಿನಿಯರ್ ಆಗಿ, ಕೆ.ಎ.ಎಸ್. ಅಧಿಕಾರಿಯಾಗಿ, ಶಿಕ್ಷಣ ಸಂಸ್ಥೆಯೊoದರ ಆಡಳಿತ ಮಂಡಳಿ ನಿರ್ದೇಶಕನಾಗಿ ಅಪಾರ ಅನುಭವವನ್ನು ಅವರು ಹೊಂದಿದ್ದಾರೆ.ಅoತಹವರು ಮೇಲ್ಮನೆಯಲ್ಲಿ ಶಿಕ್ಷಕರ ಪರವಾಗಿ ಕೆಲಸ ಮಾಡುವಂತಹ ಅವಕಾಶವನ್ನು ಆಗ್ನೇಯ ಶಿಕ್ಷಕ ಕ್ಷೇತ್ರದ ಮತದಾರರು ಕಲ್ಪಿಸಬೇಕೆಂದರು.
ಸಿದ್ದರಾಮಯ್ಯ ಸರಕಾರ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದೆ.ಹಳೆಯ ಪಿಂಚಿಣಿ ವ್ಯವಸ್ಥೆ ಜಾರಿಯ ಮೊದಲ ಭಾಗವಾಗಿ ಸುಮಾರು 13 ಸಾವಿರಕ್ಕೂ ಅಧಿಕ ನೌಕರರನ್ನು ಎನ್.ಪಿ.ಎಸ್.ನಿಂದ ಒಪಿಎಸ್ಗೆ ವರ್ಗಾಯಿಸಲಾಗಿದೆ.ಮುಂದಿನ ದಿನಗಳಲ್ಲಿ ಇತರರಿಗೂ ಈ ಸೌಲಭ್ಯ ದೊರೆಯಲಿದೆ.ಇದರಲ್ಲಿ ಯಾವುದೇ ಅಪನಂಬಿಕೆ ಬೇಡ. ಇದರ ಜೊತೆಗೆ ಶಿಕ್ಷಕರ ವರ್ಗಾವಣೆ, ಕಾಲಮಿತಿ ಬಡ್ತಿ,ಶಾಲೆಗಳ ಅಭಿವೃದ್ದಿಗೆ ಅನುದಾನ, ಅನುಧಾನಿತ ಶಾಲೆಗಳ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಹಲವು ವಿಷಯಗಳು ಸರಕಾರದ ಮುಂದಿದ್ದು, ಹಂತ ಹಂತವಾಗಿ ಬಗೆಹರಿಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ನನ್ನ ಗೆಲುವಿನ ಹಿಂದೆ ಶ್ರೀಮತಿ ಪೂರ್ಣೀಮ ಮತ್ತು ಡಿ.ಟಿ.ಶ್ರೀನಿವಾಸ್ ಅವರ ಪಾತ್ರ ಮಹತ್ವದಿದದೆ ಎಂದು ಪುಟ್ಟಣ್ಣ ನುಡಿದರು.