ಮಾದಕ ವಸ್ತು ಮುಕ್ತ ತುಮಕೂರು ಗುರಿ : ಸಿಪಿಐ ನವೀನ್.ಡಿ
ತುಮಕೂರು : ಮಾದಕ ವಸ್ತು ಮುಕ್ತ ತುಮಕೂರು ಜಿಲ್ಲೆಯಾಗಿಸುವುದು ಪೊಲೀಸ್ ಇಲಾಖೆಯ ಮೊದಲ ಆದ್ಯತೆ ಎಂದು ತಿಲಕ್ಪಾರ್ಕ್ ಠಾಣೆಯ ಸಿಪಿಐ ನವೀನ್.ಡಿ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ಪ್ರಥಮದರ್ಜೆ ಕಾಲೇಜಿನ ರಾಜ್ಯಶಾಸ್ತç ವಿಭಾಗ ಹಾಗೂ ಜಯನಗರ ಪೊಲೀಸ್ ಠಾಣೆ ಸಹಯೋಗದೊಂದಿಗೆ ಆಯೋಜಿಸಿದ್ದ ಪೊಸ್ಕೋ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ-ಕಾಲೇಜು ಆವರಣ, ಸಮೀಪ ಮಾದಕವಸ್ತು ಹಾಗೂ ಮಾದಕ ದ್ರವ್ಯಗಳನ್ನು ಮಾರಾಟ ಮಾಡುವುದು ಕಂಡುಬAದಲ್ಲಿ ತಕ್ಷಣ ಇಲಾಖೆಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳು ಗಾಂಜಾ, ಅಫೀಮು ಸೇರಿದಂತೆ ಮಾದಕವಸ್ತು ಮತ್ತು ದ್ರವ್ಯಗಳಿಂದ ದೂರವಿರುವ ಮೂಲಕ ಸಮಾಜದ ಸ್ವಸ್ತ್ಯ ಕಾಪಾಡಲು ಸಹಕಾರ ನೀಡಬೇಕು. ಒಳ್ಳೆಯ ವಿಚಾರಗಳನ್ನು ಹೇಳಿದರೆ ಅಂತಹವರನ್ನು ಕೆಟ್ಟವರಂತೆ ನೋಡುವ ಪ್ರವೃತಿ ಬದಲಾಗಬೇಕು. ಯಾವುದೇ ವಿದ್ಯಾರ್ಥಿ ದುಶ್ಚಗಳಿಗೆ ಬಲಿಯಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸಲಹೆ ನೀಡಿದರು.
ಪದವಿ ಪೂರ್ವ ಹಾಗೂ ಪದವಿ ಹಂತದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರು, ಬಾಲಕಿಯರು ಮಾದಕ ವಸ್ತುಗಳ ಕಡೆ ಆಕರ್ಷಿತರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇಲಾಖೆ ವತಿಯಿಂದ ಮಾದಕವಸ್ತು ಬಳಕೆಯಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ನಿರಂತರವಾಗಿ ಜಾಗೃತಿ, ಅರಿವು ಕಾರ್ಯಕ್ರಮ ಅಭಿಯಾನ ಮಾಡಲಾಗುತ್ತಿದೆ ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚಾರಿ ನಿಯಮ ಪಾಲಿಸಬೇಕು, ಹಲ್ಮೆಟ್ ಕಡ್ಡಾಯವಾಗಿ ಧರಿಸಬೇಕು, ಅತೀ ವೇಗದ ಚಾಲನೆ ಬೇಡ, ಸಿಗ್ನಲ್ ಜಂಪ್ ಮಾಡಬೇಡಿ, ವಾಹನದ ಆರ್ಸಿ, ವಿಮಾ ಪಾಲಿಸಿ ಇಲ್ಲದೇ ಚಾಲಾಯಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತನೆ, ದೌರ್ಜನ್ಯ, ಪುಸಲಾಯಿಸುವುದು ಸೇರಿದಂತೆ ಅಪ್ರಾಪ್ತರ ಮೇಲೆ ನಡೆಯುವ ದೌರ್ಜನ್ಯ ಜಾಮೀನು ರಹಿತ ಅಪರಾಧವಾಗಿದ್ದು, ಸೆಕ್ಷನ್ ೧೬೪ರ ಅಡಿಯಲ್ಲಿ ದಾಖಲಾಗುವ ಹೇಳಿಕೆಯೇ ಅಂತಿಮವಾಗುವುದರಿAದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ರಮೇಶ್ ಮಣ್ಣೆ ಮಾತನಾಡಿ, ಕಾನೂನಿನ ಅರಿವಿದ್ದು, ಮಾಡುತ್ತಿರುವ ಅಪರಾಧಗಳಿಗೆ ಕಡಿವಾಣ ಹಾಕಬೇಕು, ಪ್ರತಿಯೊಬ್ಬರಿಗೂ ಸಾಮಾನ್ಯ ಪೊಲೀಸ್ ಕಾನೂನು, ನಿಯಮ ಸೇರಿದಂತೆ ಕಾನೂನಿನ ಅರಿವು ಅಗತ್ಯ, ವಿದ್ಯಾರ್ಥಿಗಳಿಗೆ ಸರಿ, ತಪ್ಪಿನ ಬಗ್ಗೆ ಅರಿವಿರಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯ್ ಭಾಸ್ಕರ್ ಅವರು ಮಾತನಾತ್ತಾ, ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು, ಎಂದರು.
ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ರಂಗಸ್ವಾಮಿ, ರೇಷ್ಮೆ ಶಿಕ್ಷಣ ವಿಭಾಗದ ಹನುಂತರಾಯಪ್ಪ.ಡಿ, ಎಎಸ್ಐಗಳಾದ ಹನುಂತರಾಯಪ್ಪ, ವಸಂತ್ ಕುಮಾರ್, ಸಿಬ್ಬಂದಿಗಳಾದ ಉಮಾಶಂಕರ್, ಮಧುಕುಮಾರ್, ಅರುಣ್ ಕುಮಾರ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾದಕ ವಸ್ತು ಮುಕ್ತ ತುಮಕೂರು ಗುರಿ
Highlights
- ಮಾದಕ ವಸ್ತು ಮುಕ್ತ ತುಮಕೂರು ಗುರಿ
Leave a comment
Leave a comment