ಕುಣಿಗಲ್ ರಸ್ತೆಯ ಎಸ್ಎಸ್ಐಟಿ ಕಾಲೇಜು ಮುಂಭಾಗದ ಬಸ್ ನಿಲ್ದಾಣ ತೆರವಿಗೆ ಸಾರ್ವಜನಿಕರ ಆಗ್ರಹ
ತುಮಕೂರು: ಇತ್ತೀಚೆಗೆ ಅವಜ್ಞಾನಿಕ ರಸ್ತೆ, ಹಂಸ್ ಗಳು ತಿರುವುಗಳು ಸೇರಿದಂತೆ ಇತರೆ ಕಾರಣಗಳಿಂದ ರಸ್ತೆಗಳಲ್ಲಿ ಅಪಘಾತವಾಗುತ್ತಿದ್ದು ಅದರಲ್ಲೂ ನಗರ ಪ್ರದೇಶದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಕುಣಿಗಲ್ ರಸ್ತೆಯ ಸರಸ್ವತಿಪುರಂ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಗೇಟ್ ಮುಂಭಾಗದಲ್ಲಿರುವ ಬಸ್ ನಿಲ್ದಾಣದಿಂದ ಅಪಘಾತಗಳು ಹೆಚ್ಚುತ್ತಿದ್ದು ಮಹಾನಗರ ಪಾಲಿಕೆ ಹಾಗೂ ಸಂಬಂಧಿಸಿದ ಇಲಾಖೆಯು ಕೂಡಲೇ ಬಸ್ ನಿಲ್ದಾಣವನ್ನ ತೆರವುಗೊಳಿಸಿ ಸೂಕ್ತ ಸ್ಥಳಕ್ಕೆ ಬಸ್ ನಿಲ್ದಾಣವನ್ನ ವರ್ಗಾವಣೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕುಣಿಗಲ್ ರಸ್ತೆ ಎಸ್ ಎಸ್ ಎ ಟಿ ಕಾಲೇಜು ಮುಂಭಾಗದಲ್ಲಿ ಅನೇಕ ತಿರುಗುಗಳು ಪಡೆಯುತ್ತಿದ್ದು ಇದರಿಂದಾಗಿ ಅಪಘಾತಗಳು ಇಲ್ಲಿ ಸಂಭವಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿ ದೊಡ್ಡ ಅನಾಹುತ ಸಂಭವಿಸುವುದಕ್ಕಿಂತ ಮುಂಚೆ ಬಸ್ ನಿಲ್ದಾಣವನ್ನ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಸಂಬಂಧ ಸಾರ್ವಜನಿಕರಾದ ಆಟೋ ಚಾಲಕ ಇಂತಿಯಾಜ್ ಖಾನ್ ಮಾತನಾಡಿ ತುಮಕೂರು ನಗರದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಅನೇಕ ವಾಹನಗಳು ಸಂಚಾರ ಮಾಡುತ್ತಿರುತ್ತವೆ, ಅದರಲ್ಲೂ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಬಳಿ ಕಾಲೇಜು ಕಡೆ ತೆರಳುವವರು ಸರಸ್ವತಿಪುರಂ ಕಡೆ ತೆರಳುವವರು ಹೆಚ್ಚಿನ ಕಾರಣದಿಂದ ಇಲ್ಲಿ ಅಪಘಾತಗಳು ದೊಡ್ಡ ದೊಡ್ಡ ವಾಹನಗಳು ಬರುವ ಸಂದರ್ಭದಲ್ಲಿ ಎಡಬಲದಲ್ಲಿ ಹೋಗುವವರು ಕಾಣುತ್ತಿರುವುದಿಲ್ಲ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿ ಸಾವು ಸಂಭವಿಸುವ ಸಂದರ್ಭಗಳು ಹೆಚ್ಚಾಗಿರುವ ಕಾರಣದಿಂದ ಕೂಡಲೇ ಬಸ್ ನಿಲ್ದಾಣವನ್ನ ತೆರವುಗೊಳಿಸುವಂತೆ ಅವರು ಈ ವೇಳೆ
.