ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದಲ್ಲಿ 18 ದಿವಸಗಳ ಹಿಂದುಗಡೆ ಜಗದೇವಪ್ಪ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ರೌಡಿ ಶೀಟರ್ ಗಳಿಂದ ಹಲ್ಲೆಯಾಗುತ್ತೆ.
ಆ ಗ್ರಾಮದಲ್ಲಿ ಮೈಬೂಬ್ ಸುಭಾನಿ ಸಂದಲ ಇರುತ್ತೆ ದಲಿತರು ಮತ್ತು ಮುಸ್ಲಿಮರ ಕೂಡಿ ಹಬ್ಬ ಆಚರಣೆ ಮಾಡುತ್ತಾರೆ ಇದನ್ನು ಸಹಿಸದ ಮೆಲಜಾತಿಯ ಜನ ಈ ಯುವಕನ ಮೇಲೆ ಒಬ್ಬನೇ ಸಿಕ್ಕಾಗ ಕಲ್ಲು ಮತ್ತು ರಾಡ್ ನಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ…
ಹಲ್ಲೆಯೊಳಗಾದ ವ್ಯಕ್ತಿ ಕಲಬುರ್ಗಿ ಜೀಮ್ಸ ಆಸ್ಪತ್ರೆಯಲ್ಲಿ ಚಿಕಿತ್ರೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಜೀಮ್ಸ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿ ನಿನ್ನೆ ರಾತ್ರಿ ಹಸು ನೀಗುತ್ತಾನೆ. ಇಂದು ದಲಿತ ಸೈನ್ಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶವ ಇಟ್ಟುಕೊಂಡು ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೃತ ಜಗದೇವಪ್ಪ ಸಾವಿಗೆ ನ್ಯಾಯ ನೀಡಬೇಕು ಮತ್ತು ಅವರ ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕೆಂದರು. ಬಿಜೆಪಿ ಸರ್ಕಾರ ಇದ್ದಾಗ ಏನು ದಲಿತರ ಮೇಲೆ ಹಲ್ಲಿಯಾಗುತ್ತಿದ್ದವೋ ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಸರ್ಕಾರದಲ್ಲಿ ದಲಿತರ ಮೇಲೆ ಹೆಚ್ಚು ದೌರ್ಜನ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಭಂಡಾರಿ. ಇದೇ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ ಅಧಿಕಾರಿಗಳು ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ನಾವು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆಂದರು.