ಡಿ ಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತನಿಗೆ ಹೃದಯಾಘಾತ. ಕನಕಪುರ ತಾಲೂಕಿನ ದೊಡ್ಡಕೊಪ್ಪ ಗ್ರಾಮದ ನಿವಾಸಿ ಈರಯ್ಯ ಎಂಬವರು ಮೃತ ಪಟ್ಟಿದ್ದು, ಈರಯ್ಯ ಅವರಿಗೆ ಹೃದಯಾಘಾತವಾಗಿದೆ. ಕಾಂಗ್ರೆಸ್ ಕಾರ್ಯಕರ್ತ ಈರಯ್ಯ ಅವರು TV ನೋಡುತ್ತಿದ್ದ ವೇಳೆ ಡಿ ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೈ ತಪ್ಪಿದೆ ಎಂಬ ಸುದ್ದಿ ನೋಡುತ್ತಿದ್ದಂತೆ ಹೃದಯಾಘಾತ ಸಂಭವಿಸಿ ಮೃತ ಪಟ್ಟಿದ್ದಾರೆ.