ತುಮಕೂರು: ಪದವಿ ಹಂತದ ಪ್ರಾಯೋಗಿಕ ಕಲಿಕೆಯ ಅನುಭವ ನವೋದ್ಯಮದಲ್ಲಿ ಯಶಸ್ಸಿನ ಮೆಟ್ಟಿಲಾಗುವುದು. ಇಂದಿನ ಸ್ಪರ್ಧಾ ಜಗತ್ತಿನ ಮಾರುಕಟ್ಟೆಗೆ ಬೇಕಾಗಿರುವುದು ನವೋದ್ಯಮಗಳು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಉದ್ಯಮಶೀಲತಾ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿದರು.
ನಮ್ಮ ವಿವಿಯ ಎಂಬಿಎ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಯೋಜನೆಯಂತೆ ಭಾರತದ ೭೦೦ ಜಿಲ್ಲೆಗಳ ವಿಭಿನ್ನ ವಾಣಿಜ್ಯೋದ್ಯಮದ ನಾಡಿಮಿಡಿತ ಅರಿತು ಉದ್ಯಮವೊಂದನ್ನು ಶುರುಮಾಡಬೇಕು. ಇಲ್ಲಿರುವ ಪ್ರತಿಯೊಬ್ಬರೂ ಕರ್ನಾಟಕದ ಎಲ್ಲ ಜಿಲ್ಲೆಗಳ ಮಾರುಕಟ್ಟೆಯ ಅವಶ್ಯಕತೆಗನುಗುಣವಾಗಿ ನವೋದ್ಯಮವನ್ನು ಆರಂಭಿಸಿ ಯಶಸ್ಸಾಗಬೇಕು ಎಂದರು.
ಬೆAಗಳೂರಿನ ಬಿಎಂಎ ಉದ್ಯಮ ಮಂಡಳಿಯ ಅಧ್ಯಕ್ಷ ಡಾ. ಮನೋಹರ್ ಸಿ. ಮಾತನಾಡಿ, ಯಾವುದೇ ಉದ್ಯಮವನ್ನು ಕ್ರಮಬದ್ಧವಾಗಿ ಶ್ರಮವಹಿಸಿ ಮಾಡಿದರೆ ಯಶಸ್ಸು ಖಂಡಿತ. ನಮ್ಮ ವಿಭಿನ್ನ ಕಲ್ಪನೆ ನವೋದ್ಯಮದಲ್ಲಿ ಹೊಸ ಆವಿಷ್ಕಾರಕ್ಕೆ ಮುನ್ನುಡಿಯಾಗಬೇಕು. ಅವಕಾಶಗಳನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಬೇಕಾದರೆ ಶ್ರದ್ಧೆ ಮುಖ್ಯ. ನಿಮ್ಮೊಳಗಿನ ಪ್ರಭೆಗೆ ಪ್ರಜ್ಞಾವಸ್ಥೆಯನ್ನು ಕೊಡಬೇಕು ಎಂದು ತಿಳಿಸಿದರು.
ಕ್ಯೂಬೇರಾ ಇಂಟರ್ನ್ಯಾಷನಲ್ ಸಂಸ್ಥೆಯ ಸಹಸಂಸ್ಥಾಪಕ ಡಾ. ಸಮರ್ಥ ರಾಘವ ನಾಗಭೂಷಣಂ ಮಾತನಾಡಿ, ಮಾರುಕಟ್ಟೆಯ ಅಧ್ಯಯನ ತುಂಬಾ ಮುಖ್ಯ. ಗ್ರಾಹಕರು ಬಯಸುವ ಗುಣಮಟ್ಟವನ್ನು ಮುಟ್ಟಲು ಸಂಸ್ಥೆಯು ಸಮರ್ಥವಾಗಿರಬೇಕು. ನವೋದ್ಯಮವೂ ಆರ್ಥಿಕ ಹಾಗೂ ಸಾಮಾಜಿಕ ಆಯಾಮಗಳ ಅನುಭವ ನೀಡುತ್ತದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಮಾತನಾಡಿ, ಯಶಸ್ಸಿನ ಬೆನ್ನು ಹತ್ತಿರುವ ನಿಮಗೆ ಗೆಲುವು ಖಂಡಿತ. ಪ್ರಾಯೋಗಿಕವಾಗಿ ಅನುಭವ ಹೊಂದಿದವರು ಮಾರುಕಟ್ಟೆಯನ್ನು ಆಳುತ್ತಾರೆ ಎಂದು ಹೇಳಿದರು.
ಉದ್ಯಮಶೀಲತೆಯ ಕೌಶಲಗಳನ್ನು ಕಲಿಯಲು ವಿದ್ಯಾರ್ಥಿಗಳೇ ಸಣ್ಣಬಂಡವಾಳದ ಮಳಿಗೆಗಳನ್ನು ತೆರೆದಿದ್ದರು. ಇದರಲ್ಲಿ ಆಹಾರ ಮಳಿಗೆಗಳು, ಸಿರಿಧಾನ್ಯ ಮಳಿಗೆ, ಫ್ಯಾಷನ್ ಸಂಬAಧಿತ ಮಳಿಗೆಗಳು, ಗೃಹ ಅಲಂಕಾರ ಮಳಿಗೆಗಳು ಇದ್ದವು.
ಹಿರಿಯ ಪ್ರಾಧ್ಯಾಪಕ ಪ್ರೊ. ಮೋಹನ್ರಾಮ್ ಭಾಗವಹಿಸಿದ್ದರು. ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ನೂರ್ ಅಫ್ಜಾ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಶಿವಶಂಕರ್ ಕೆ. ಸಿ. ವಂದಿಸಿದರು. ಉಪನ್ಯಾಸಕಿ ಇಂಪಾ ನಿರೂಪಿಸಿದರು.
ಸ್ಪರ್ಧಾ ಜಗತ್ತಿನ ಮಾರುಕಟ್ಟೆಗೆ ಬೇಕಾಗಿರುವುದು ನವೋದ್ಯಮಗಳು
Leave a comment
Leave a comment