ತುಮಕೂರು:ಪ್ರಪಂಚದ ಐದನೇ ದೊಡ್ಡ ಅರ್ಥಿಕತೆಯಾಗಿ ಬೆಳೆಯುತ್ತಿರುವ ಭಾರತದಲ್ಲಿ ಕೆಮಿಕಲ್ ಇಂಜಿನಿಯರಿAಗ್ ಮತ್ತು ಬಯೋಟೆಕ್ನಾಲಜಿಗೆ ಉತ್ತಮ ಭವಿಷ್ಯವಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹರಿಹರ ಪಾಲಿ ಫೈರ್ಸ್ನ ಅಧ್ಯಕ್ಷರಾದ ಅಜಯ್ಗುಪ್ತ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ಮತ್ತು ರಸಾಯನಿಕ ತಂತ್ರಜ್ಞಾನ ವಿಭಾಗದವತಿಯಿಂದ ಆಯೋಜಿಸಿದ್ದ ರಾಷ್ಟಮಟ್ಟದ ಒಂದು ದಿನ “ಬಯೋಚೆಸ್-೨೦೨೩” ವಿಚಾರಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಕರ್ನಾಟಕ ಹೊಸ ಅವಿಷ್ಕಾರಗಳ ಹಬ್ ಆಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜೈವಿಕ ತಂತ್ರಜ್ಞಾನ ಮತ್ತು ರಸಾಯನಿಕ ತಂತ್ರಜ್ಞಾನ ಕಲಿತರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದರು.
ಭಾರತದ ಜೈವಿಕ ತಂತ್ರಜ್ಞಾನದ ಶಕ್ತಿ ಏನೆಂಬುದು ಕೋವಿಡ್ ಸಂದರ್ಭದಲ್ಲಿ ಇಡೀ ದೇಶಕ್ಕೆ ಪರಿಚಯವಾಗಿದೆ.ದೊಡ್ಡ ದೊಡ್ಡ ದೇಶಗಳು ಲಸಿಕೆ ಕಂಡು ಹಿಡಿಯಲು ಪರದಾಡುತಿದ್ದ ಸಂದರ್ಭದಲ್ಲಿ ಭಾರತದ ಜೈವಿಕ ತಂತ್ರಜ್ಞಾನ ಕ್ಷೇತ್ರ ಅತಿ ಶೀಘವಾಗಿ ಲಸಿಕೆ ಕಂಡು ಹಿಡಿದು ಹೊಸ ಭರವಸೆ ಮೂಡಿಸಿತು.ತಂತ್ರಜ್ಞಾನ ಹೆಚ್ಚಾದಂತೆ ರೋಗ,ರಜೀನಗಳ ಸಂಖ್ಯೆಯೂ ಹೆಚ್ಚಾಗಿದ್ದು,ಇವುಗಳಿಗೆ ಔಷಧಿಯನ್ನು ಕಂಡು ಹಿಡಿದು,ನಿಯಂತ್ರಣಕ್ಕೆ ತರುವುದು ಕೆಮಿಕಲ್ ಇಂಜಿನಿಯರಿAಗ್ ಮತ್ತು ಜೈವಿಕ ತಂತ್ರಜ್ಞಾನದ ಮುಂದಿರುವ ದೊಡ್ಡ ಸವಾಲಾಗಿದೆ.ವಿದ್ಯಾರ್ಥಿ ಯುವಜನರು ಹೊಸ ಸಂಶೋಧನೆಗಳ ಮೂಲಕ ಮಾನವ ಸಂಪನ್ಮೂಲದ ಉಳಿವಿಗೆ ಶ್ರಮಿಸಬೇಕಾಗಿದೆ ಎಂದು ಅಜಯ್ ಗುಪ್ತ ನುಡಿದರು.
ಎಸ್.ಐ.ಟಿ ಸಿಇಓ ಡಾ.ಶಿವಕುಮಾರಯ್ಯ ಮಾತನಾಡಿ,ಶ್ರೀಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ಭೋಧನೆಯ ಜೊತೆಗೆ, ಸಂಶೋಧನೆ ಮತ್ತು ಹೊಸ ಅವಿಷ್ಕಾರಕ್ಕೆ ಉತ್ತೇಜನ ನೀಡಲಾಗುತ್ತಿದೆ.ಇದರ ಭಾಗವಾಗಿಯೇ ನಮ್ಮ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ದೇಶದ ವಿವಿಧ ಐಐಟಿಗಳಲ್ಲಿ ಸಂಶೋಧನಾ ಸಹಾಯಾರ್ಥಿಗಳಾಗಿ ಕೆಲಸ ಮಾಡುತ್ತಿದ್ದಾರೆ.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಸುಮಾರು ೫ ಕೋಟಿ ರೂಗಳ ಧನ ಸಹಾಯದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ. ಎಸ್.ಐ.ಟಿಯಲ್ಲಿ ಅತ್ಯುತ್ತಮ ಸೌಕರ್ಯಗಳು ಇರುವ ಇನ್ಕ್ಯೂಬೇಷನ್ ಸೆಂಟರ್ ತೆರೆದಿದ್ದು,ಇದರ ಲಾಭವನ್ನು ಪಡೆದು ಕೊಳ್ಳುವಂತೆ ಮನವಿ ಮಾಡಿದರು. ಎಸ್.ಐ.ಟಿ. ಪ್ರಾಧ್ಯಾಪಕ ಪ್ರೊ.ಸಿದ್ದೇಶ್ವರ ಪ್ರಸಾದ್ ಮಾತನಾಡಿ,ಎಸ್.ಐ.ಟಿ ಸಂಶೋಧನೆಗೆ ಹೆಚ್ಚು ಪೂರಕವಾಗಿ ಕೆಲಸ ಮಾಡುತ್ತಿದೆ.ಇದರ ಭಾಗವಾಗಿಯೇ ನಮ್ಮ ಹಲವಾರು ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿದ ಅಂಗಸAಸ್ಥೆಗಳ ಧನಸಹಾಯದೊಂದಿಗೆ ಹಲವಾರು ಯೋಜನೆಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಐ.ಟಿ. ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ಉಪಸ್ಥಿತರಿದ್ದರು.ಬಯೋಚೆಸ್-೨೦೨೩ರ ಅಧ್ಯಕ್ಷ ಡಾ.ಎಸ್.ಮೂರ್ತಿಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವೇದಿಕೆಯಲ್ಲಿ ಡಾ.ಬಿ.ಎಸ್.ಗೌರಿಶಂಕರ್, ಡಾ.ರೂಪಾ.ಕೆ.ಬಿ., ಲೋಹಿತ್, ರಷೀತ್ ಮತ್ತಿತರರು ಉಪಸ್ಥಿತರಿದ್ದರು.
ಕೆಮಿಕಲ್ ಇಂಜಿನಿಯರಿಂಗ್ ಮತ್ತು ಬಯೋಟೆಕ್ನಾಲಜಿಗೆ ಉತ್ತಮ ಭವಿಷ್ಯ

Leave a comment
Leave a comment