ಕೋಲಿ ಸಮಾಜದ ಸದೃಢ ಬೆಳವಣಿಗೆಗೆ ಅಖಿಲ ಕರ್ನಾಟಕ ಸ್ನೇಹಮಯ ಕೋಲಿ ಸಮಾಜ ದಿಟ್ಟ ಹೆಜ್ಜೆ : ದತ್ತಾತ್ರೇಯ ದೇವರನಾದಗಿ ಹೇಳಿಕೆ.ಕೋಲಿ ಸಮಾಜದ ಸದೃಢ ಬೆಳವಣಿಗೆಗೆ ನಮ್ಮ ಅಖಿಲ ಕರ್ನಾಟಕ ಸ್ನೇಹಮಯ ಕೋಲಿ ಸಮಾಜ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದತ್ತಾತ್ರೇಯ ದೇವರನಾದಗಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಕಲ್ಯಾಣ ಕರ್ನಾಟಕ ಭಾಗ ಜೊತೆಗೆ ಬಾಗಲಕೋಟೇ, ಬಿಜಾಪುರ ಸೇರಿದಂತೆ ಈ ಎಲ್ ಭಾಗಗಳಲ್ಲಿ ಸಕ್ರಿಯವಾಗಿ ಸ್ನೇಹಮಯ ಕೋಲಿ ಸಮಾಜ ಕೆಲಸ ನಿರ್ವಹಿಸುತ್ತಿರುವುದು ಸಂತಸ ತಂದಿದೆ,ಸಂಘಟನೆಯು ಸಮಾಜದ ಏಳಿಗೆಗೆ ಕಾನೂನು ಹೋರಾಟ, ಸಮಾಜದ ಬಗ್ಗೆ ಧ್ವನಿ ಎತ್ತುವ ಜನ ಪ್ರತಿನಿಧಿಗಳಿಗೆ ಬೆಂಬಲ, ಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಮಹಿಳಾ ಸಭಲೀಕರಣ, ರೈತರ ಆಧುನಿಕ ಕೃಷಿಗೆ ಉತ್ತೇಜನ ನೀಡುವಂತ ಶಿಬಿರ ಆಯೋಜನೆ ಸೇರಿದಂತೆ ಸಂವಿಧಾನ ಬದ್ದವಾಗಿ ಅನೇಕ ಸಮಾಜ ಮುಖಿ ಕೆಲಸಗಳನ್ನು ನಮ್ಮ ಸಂಘಟನೆ ಮಾಡುತ್ತದೆ ಎಂದರು.ವರದಿ ಚನ್ನು ಹಿಂಚಗೇರಿ



