ತುಮಕೂರು ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಜೈನ್ ಪಬ್ಲಿಕ್ ಶಾಲೆಯಲ್ಲಿ ೭೦ನೇ ಕನ್ನಡದ ರಾಜ್ಯೋತ್ಸವವನ್ನು ಅತ್ಯಂತ ಸರಳ ಮತ್ತು ಸುಂದರವಾಗಿ ಆಚರಿಸಲಾಯಿತು. ಈ ನಾಡ ಹಬ್ಬದ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕವಯತ್ರಿ ಹಾಗೂ ಲೇಖಕಿ ಶ್ರೀಮತಿ ಸುಶೀಲಾ ಸದಾಶಿವಯ್ಯ ಆಗಮಿಸಿದ್ದರು.ಮುಖ್ಯ ಅತಿಥಿಗಲೂ ಕಾರ್ಯಕ್ರಮ ಮತ್ತು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಕನ್ನಡ ನಾಡು ನುಡಿ, ಹಿರಿಮೆ ಮತ್ತು ಮಹತ್ವದ ಬಗ್ಗೆ ವಿವರಿಸಿದರು, ಜೊತೆಗೆ ಕನ್ನಡ ನಾಡಿಗಾಗಿ ಬಲಿದಾನ ಮಾಡಿದ ಮಹಾತ್ಮರ ಬಗ್ಗೆ ವಿವರಣೆ ನೀಡಿದರಲ್ಲದೇ, ಕನ್ನಡ ಭಾಷೆಯ ಹಿರಿಮೆಯನ್ನು ರಾಷ್ಟಾçದ್ಯಂತ ಪಸಿರಸಲು ಕಾರಣರಾದ ಅಸಂಖ್ಯಾತ ಕವಿಗಳು, ಬರಹಗಾರರು, ಲೇಖಕರ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದರು.ಸಮಾರಂಭದ

ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಡಾಕ್ಟರ್ ಸುಷ್ಮಾ ಅವರು ಮಾತನಾಡಿ ಕನ್ನಡ ಎಂಬುದು ಬೇರೆಯವರಿಗೆ ಒಂದು ಭಾಷೆಯಾದರೆ ಕನ್ನಡಿಗನಾದವನಿಗೆ ಅದೊಂದು ಅಭಿಮಾನ, ಗೌರವದ ಸಂಕೇತ, ನಮ್ಮೆಲ್ಲರ ಜೀವನಾಡಿ ಎಂದು ಭಾಷಾ ಪ್ರೇಮವನ್ನು ತಿಳಿಸಿದರು. ಶಾಲೆಯ ಉಪ ಪ್ರಾಂಶುಪಾಲರಾದ ಚನ್ನಬಸಯ್ಯನವರು ಮಾತನಾಡಿ ಕವಿರಾಜಮಾರ್ಗದಲ್ಲಿ ತಿಳಿಸಿರುವ ಕನ್ನಡ ನಾಡು ನುಡಿಯ ಮಹತ್ವವನ್ನು ಹಾಗೂ ಮಕ್ಕಳು ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿ ಹೇಳಿದರು. ನಾಡ ಹಬ್ಬದ ಸಂತಸದ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ನಾಡು ನುಡಿಯ ಕುರಿತಂತೆ ಭಾಷಣ, ನೃತ್ಯ, ಕಿರು ನಾಟಕ, ಪುಟಾಣಿ ಮಕ್ಕಳಿಂದ ವೇಷಭೂಷಣ ಮುಂತಾದ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಶಾಲೆಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜು, ಬೋಧಕ ಬೋಧಕೇತರ ವರ್ಗದವರು ಹಾಗೂ ಪೋಷಕರು ಉಪಸ್ಥಿತರಿದ್ದರು.



