ಕೊರಟಗೆರೆ: ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ರವರು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಂದು (ಬುಧವಾರ)ನಾಮಪತ್ರ ಸಲ್ಲಿಸಲಿದರು.
ತುಮಕೂರು ನಗರದ ಗೊಲ್ಲಹಳ್ಳಿಯ ಮನೆಯಿಂದ ಬೆಳಿಗ್ಗೆ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರಸ್ವಾಮಿಜಿಗಳ ಗದ್ದುಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀಸಿದ್ದಲಿಂಗ ಸ್ವಾಮಿಜೀಗಳಿಂದ ಆರ್ಶೀವದ ಪಡೆದರು.ಇದಕ್ಕೂ ಮುನ್ನ ಸುಕ್ಷೇತ್ರ ಶ್ರೀ ತಂಗನಹಳ್ಳಿ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಬಸವಲಿಂಗ ಸ್ವಾಮೀಗಳು, ಶ್ರೀ ಕ್ಷೇತ್ರ ಕಾರದ ಮಠ ಬೆಳ್ಳಾ ಶ್ರೀ ಶ್ರೀ ಶ್ರೀ ಕಾರದ ವೀರಬಸವ ಸ್ವಾಮೀಜಿಗಳ ಸುಕ್ಷೇತ್ರ ಶ್ರೀ ಎಲೆರಾಂಪುರ ಮಠಕ್ಕೆ ಭೇಟಿ ನೀಡಿ ಶ್ರೀ ಹನುಮಂತನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು.


ಬೆಳಿಗ್ಗೆ ೧೦ ಕ್ಕೆ ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಅಂಜನೇಯ ಮತ್ತು ಪಟ್ಟಣದ ಕಟ್ಟೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಕೊರಟಗೆರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ವಿವಿಧ ಕಲಾತಂಡಗಳು ಮತ್ತು ವಾಧ್ಯತಂಡಗಳೊAದಿಗೆ ಬೃಹತ್ ಜನಸ್ತೋಮ ಹಾಗೂ ಅಪಾರ ಜನಬೆಂಬಲದೊAದಿಗೆ ತೆರದ ವಾಹನದಲ್ಲಿ ಮಿನಿ ವಿಧಾನಸೌಧದ ತನಕ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ಸುಮಾರು ೧೧ ಘಂಟೆಯಿAದ ಮಧ್ಯಾಹ್ನ ೨ರ ಘಂಟೆಯವರೆಗೆ ಬಿಸಿಲನ್ನು ಲೆಕ್ಕಿಸದೆ ೪೦ ಸಾವಿರಕ್ಕೂ ಅಧಿಕ ಕಾರ್ಯಕರ್ತ ಮೆರವಣಿಗೆಯಲ್ಲಿ ಜಯಘೋಷ ಕೂಗುತ್ತಾ ಉತ್ಸಾಹದಲ್ಲಿ ಪಾಲ್ಗೊಂಡರು. ಮೆರವಣಿಗೆಯುದ್ದಕ್ಕೂ ಸೇಬು ಸೇರಿ ದಂತೆ ವಿವಿಧ ರೀತಿಯ ಹಣ್ಣು ಮತ್ತು ಹೀವಿನ ಹಾರಗಳ ಹಾಕುವುದರ ಜೊತೆಗೆ ಕ್ರೇನ್ ಗಳ ಮೂಲಕ ಪುರ್ಷ್ವಾಚನೆ ಮಾಡಿ ಅಭಿಮಾನಿಗಳು ಸಂಭ್ರಮಿಸಿದರು.
ಮೆರವಣಿಗೆಯ ನಂತರಕೊರಟಗೆರೆ ಕ್ಷೇತ್ರದಲ್ಲಿ ಪುನರಾಯ್ಕೆ ಬಯಸಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ತಮ್ಮ ಉಮೇದುವಾರಿಕೆಗೆ ೩ ಪ್ರತಿಗಳಲ್ಲಿ ಅರ್ಜಿ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ದಲಿತ, ಹಿಂದುಳಿದ, ಲಿಂಗಾಯತ, ಒಕ್ಕಲಿಗ, ಮುಸ್ಲಿಂ ಸಮುದಾಯದ ತಮ್ಮ ಪಕ್ಷದ ಮುಖಂಡರ ಪ್ರಾತಿನಿಧ್ಯ ನೀಡಿದ್ದು ವಿಶೇಷವಾಗಿತು. ನಾಮಪತ್ರ ಸಲ್ಲಿಸಲು ಆಗಮಿಸಿದ ಡಾ. ಜಿ. ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ನಂದಿನಿ ಪೇಡಾದ ಪ್ಯಾಕೆಟ್ ಹಾರ ಹಾಕುವ ಮೂಲಕ ರಾಜ್ಯದಲ್ಲಿ ನಂದಿನಿ ಉಳಿಸಿ ಎಂಬ ಸಂದೇಶವನ್ನು ನೀಡಿದ್ದು ವಿಶೇಷವಾಗಿತ್ತು.



