ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ೪೦ ವರ್ಷಗಳಿಂದ ಪಕ್ಷವನ್ನು ಕಟ್ಟಿ, ಬೆಳೆಸಿದ ನಿಷ್ಠಾವಂತ ಕಾರ್ಯಕರ್ತನಾದ ನನಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದು ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರ ಒತ್ತಾಯದ ಮೇರೆಗೆ ಸ್ವತಂತ್ರö್ಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುವುದಾಗಿ ತಿಳಿಸಿದರು.
ಎರಡು ಜೋಳಿಗೆ ಹಿಡಿದು ೧ಕ್ಕೆ ಓಟು, ೧ಕ್ಕೆ ನೋಟು ಎಂಬ ಧ್ಯೇಯದೊಂದಿಗೆ ನಗರದಾದ್ಯಂತ ಮತ ಭಿಕ್ಷೆ ಬೇಡುವ ಮೂಲಕ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ವಿರುದ್ಧ ಹೋರಾಟ ಮಾಡಲು ಜೈಲಿಗೆ ಹೋಗಲು ಸಿದ್ದ ಎಂದ ಅವರು, ಶಾಂತಿ ಮತ್ತು ಸೌಹಾರ್ದತೆಯಿಂದ ಜನ ಜೀವನ ನಡೆಸಲು ನನಗೆ ಮತ ಹಾಕಬೇಕೆಂದು ಮನವಿ ಮಾಡಿಕೊಂಡರು.
ಶಾಸಕನಾಗಿ, ಸಚಿವನಾಗಿ ೪೦ ವರ್ಷದ ರಾಜಕೀಯ ಜೀವನದಲ್ಲಿ ತಾನು ಮಾಡಿದ ಅಭಿವೃದ್ಧಿ ಕೆಲಸಗಳ ಕರಪತ್ರಗಳನ್ನು ಮುದ್ರಿಸಿ, ಮನೆ, ಮನೆಗೆ ಅದನ್ನು ಹಂಚಿ ಮತ ಕೇಳುತ್ತೇನೆ ಎಂದ ಅವರು, ಈ ಹೋರಾಟ ಬಿಜೆಪಿ ಪಕ್ಷದ ವಿರುದ್ಧವಲ್ಲ. ನನಗೆ ಟಿಕೆಟ್ ಕೈತಪ್ಪಲು ಕಾರಣವಾದವರ ವಿರುದ್ಧ ಹಾಗೂ ಭ್ರಷ್ಟಾಚಾರದ ವಿರುದ್ಧ ಎಂದು ಸ್ಪಷ್ಟಪಡಿಸಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಸ್.ಮಲ್ಲಿಕಾರ್ಜುನಯ್ಯ, ಕಾ.ಬೋರಪ್ಪ, ವೈ.ಸಿ. ನಂಜುAಡಯ್ಯ, ಎಚ್.ಡಿ.ದೇವೇಗೌಡ ಮುಂತಾದ ಹಿರಿಯರೊಂದಿಗೆ ಜೈಲಿನಲ್ಲಿದ್ದು ಬಂದ ನಾನು ಬಿ.ಎಸ್.ಯಡಿಯೂರಪ್ಪನವರ ಮಾತಿಗೆ ಕಟ್ಟುಬಿದ್ದು ನನ್ನನ್ನು ಜೈಲಿಗೆ ಹಾಕಿಸಿದ ಪಕ್ಷದಿಂದ ಬಂದವರನ್ನು ಸಹಿಸಿಕೊಂಡಿದ್ದೆ. ಇನ್ನುಮುಂದೆ ಸಹಿಸುವುದಿಲ್ಲ ಎಂದರು.
ಏ.೨೦ ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ ಅವರು, ಎಲ್ಲ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ. ಅವರೂ ಸಹ ನನ್ನನ್ನು ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.
ಗುAಡು, ತುಂಡು, ದೇವಸ್ಥಾನದಲ್ಲಿ ಆಣೆ, ಪ್ರಮಾಣ ಮಾಡಿ ಮುಗ್ಗ ಮತದಾರರನ್ನು ವಂಚಿಸುತ್ತಿರುವ ಅಭ್ಯರ್ಥಿಗಳ ವಿರುದ್ಧ ಮತದಾರರು ಮತ ನೀಡಬೇಕು. ನಾನು ಮತದಾರರಿಂದ ಅವರ ಮತವನ್ನು ಭಿಕ್ಷೆಯಾಗಿ ಬೇಡುತ್ತೇನೆ. ಯಾವುದೆ ಮತವನ್ನು ಖರೀದಿಸುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸ್ವಾಭಿಮಾನಿ, ಸ್ವತಂತ್ರöಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನಗೆ ಎಲ್ಲರ ಆಶೀರ್ವಾದ, ಸಹಾಯ, ಸಹಕಾರ ಅಗತ್ಯವೆಂದು ಮನವಿ ಮಾಡಿಕೊಂಡ ಅವರು, ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀಗಳು ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಮಠವನ್ನು ಬೆಳೆಸಿದ ರೀತಿ ನನಗೆ ಮಾದರಿಯಾಗಿದ್ದು, ಅವರ ಹಾದಿಯಲ್ಲಿ ನಾನು ಸಾಗುತ್ತಿದ್ದು, ಮತಭಿಕ್ಷೆಗಾಗಿ ಜೋಳಿಗೆ ಹಿಡಿದ್ದಿದ್ದೇನೆ ಎಂದರು.
ಮುಖAಡರಾದ ಜಯಸಿಂಹರಾವ್, ಹೆಬ್ಬಾಕ ಮಲ್ಲಿಕಾರ್ಜುನಯ್ಯ, ಧನಿಯಾಕುಮಾರ್, ಜ್ಯೋತಿಪ್ರಕಾಶ್, ಚೌಡೇಶ್, ಧರಣೇಶ್, ನರಸಿಂಹಯ್ಯ, ಅನಂತ್, ಟಿ.ಜಿ.ಮಂಜುನಾಥ್, ಚಿಕ್ಕರಾಮಣ್ಣ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ತುಮಕೂರು ನಗರ ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು.

Leave a comment
Leave a comment


