ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಕಂಟ್ರಾಕ್ಟರ್ ಮನೆಯಲ್ಲಿ 42ಕೋಟಿ ನಗದು ಹಣ ಐ ಟಿ ದಾಳಿಯಲ್ಲಿ ಸಿಕ್ಕಿದ್ದು ತಮಗೆ ಗೊತ್ತಾಗಿದೆ, ಈ ಹಣ ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎನ್ನುವುದು ದಟ್ಟವಾದ ಸುದ್ದಿಯಾಗಿದೆ, ಕಾಂಗ್ರೆಸ್ ಸರ್ಕಾರ ಕಂಟ್ರಾಕ್ಟರ್ ಗಳಿಗೆಂದು ನೀಡಿದ ಬಾಕಿ ಹಣ 650 ಕೋಟಿ ಗೆ ಪ್ರತಿಯಾಗಿ ಕಂಟ್ರಾಕ್ಟರ್ಗಳು ನೀಡಿದ ಕಮಿಷನ್ನೆ 42 ಕೋಟಿ ಎಂಬುದು ನಿರ್ವಿವಾದ ಸುದ್ದಿಯಾಗಿದೆ . ಇದಲ್ಲದೆ ಇನ್ನೂ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ಪಂಚ ರಾಜ್ಯ ಚುನಾವಣೆಯ ಕಾಂಗ್ರೆಸ್ ಖರ್ಚಿಗೆ ಕಲೆಕ್ಷನ್ ಮಾಡಲಾಗುತ್ತಿದೆ ಎಂಬುವ ವಿಷಯ ಭಾರಿ ಚರ್ಚೆಯಲ್ಲಿದೆ ,ಕಾಂಗ್ರೆಸ್ ಪಾಲಿಗೆ ಕರ್ನಾಟಕ ATM ಆಗಿದೆ, ಹಾಗೂ ಕಲೆಕ್ಷನ್ ಕೇಂದ್ರವಾಗಿದೆ , ರಾಜ್ಯದ ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ , ವಿದ್ಯುತ್ ಕಡಿತ ವಿಪರೀತವಾಗಿದೆ , ವರ್ಗಾವಣೆ ದಂಧೆ ನಡೆಯುತ್ತಿದೆ, ತುಷ್ಟೀಕರಣದಲ್ಲಿ ಸರ್ಕಾರ ಮುಳುಗಿದೆ , ಈ ಎಲ್ಲ ಹಿನ್ನೆಲೆಯಲ್ಲಿ ಸಿಎಂ ಮತ್ತು ಉಪ ಸಿಎಂ ಗಳ ರಾಜೀನಾಮೆಗೆ ಆಗ್ರಹಿಸಿ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ಸರ್ಕಲ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಸಂಸದರು ಶಾಸಕರು ಮಾಜಿ ಶಾಸಕರು ವಿಧಾನ ಪರಿಷತ್ ಸದಸ್ಯರು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಜಿಲ್ಲೆ ರಾಜ್ಯ ಹಾಗೂ ಮಂಡಲಗಳ ಎಲ್ಲಾ ಸ್ಥರದ ಪದಾಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು
ಶ್ರೀ ಸಿದ್ದಾಜಿ ಪಾಟೀಲ್ ಅಧ್ಯಕ್ಷರು ಮಹಾನಗರ ಜಿಲ್ಲೆ ಕಲಬುರಗಿ
ಶ್ರೀ ಶಿವರಾಜ್ ಪಾಟೀಲ್ ರದ್ದೇವಾಡಗಿ ಅದ್ಯಕ್ಷರು ಗ್ರಾಮಾಂತರ ಜಿಲ್ಲೆ ಕಲಬುರ್ಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
BJP KALBURGI ಜಿಲ್ಲೆ ವತಿಯಿಂದ CONGRESS ವಿರುದ್ಧ ಪ್ರತಿಭಟನೆ

Leave a comment
Leave a comment


